ಶ್ರೀನಿವಾಸಪುರ:ಪ್ರೀತಿಸಿ ಅಂತರ್ಜಾತಿ ವಿವಾಹವಾದ ಪ್ರೆಮಿಗಳನ್ನು ತಡೆಯಲು ಯುವತಿಯ ಪೋಷಕರು ಮದುವೆಯನ್ನು ವಿರೋಧಿಸಿ ಅಕೆಯನ್ನು ಸಾರ್ವಜನಿಕವಾಗಿ ದರದರನೆ ಎಳೆದೊಯಿದ ಘಟನೆ ಶ್ರೀನಿವಾಸಪುರ ಪಟ್ಟಣದ ಜನಜಂಗುಳಿ ಪ್ರದೇಶವಾದ ತಾಲೂಕು ಕಚೇರಿ ಆವರಣದಲ್ಲಿ ನಡೆದಿರುತ್ತದೆ.
ಅಪ್ಪಟ ಸಿನಿಮಾ ಶೈಲಿಯಲ್ಲಿ ನಡೆದಂತ ಹೈಡ್ರಾಮಾ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬೆರಗುಗಣ್ಣಿನಿಂದ ನೊಡುತ್ತ ನಿಂತಿದ್ದಾರೆ.
ಕೋಲಾರ ತಾಲ್ಲೂಕು ಸಿಂಗೊಂಡಹಳ್ಳಿ ಗ್ರಾಮದ ಅಲೈಕ್ಯ ಹಾಗು ಶ್ರೀನಿವಾಸಪುರ ತಾಲ್ಲೂಕು ಕನಮಪಲ್ಲಿ ಗ್ರಾಮದ ಮಲ್ಲಿಕಾರ್ಜುನನು ಪ್ರೀತಿಸುತಿದ್ದು ಮೂರ್ನಾಲ್ಕು ದಿನಗಳ ಹಿಂದೆ ದೇವಸ್ಥಾನದವೊಂದರಲ್ಲಿ ಮದುವೆಯಾಗಿದ್ದಾರೆ ಮದುವೆಯನ್ನು ಕಾನೂನು ಬದ್ದವಾಗಿ ನೊಂದಣೆ ಮಾಡಿಸಲು ಶ್ರೀನಿವಾಸಪುರದ ಸಬ್ ರಿಜಿಸ್ಟಾರ್ ಕಚೇರಿಗೆ ಬಂದಿರುತ್ತಾರೆ. ಅಲ್ಲಿ ಯುವತಿಯ ಪೋಷಕರು ಕಾದು ಕುಳತಿದ್ದು ಪ್ರೇಮಿಗಳು ಬರುತ್ತಲೆ ಅವರಿದ್ದ ಕಾರಿನಿಂದ ಯುವತಿ ಅಲಖ್ಯಾಳನ್ನು ದರದರನೆ ಎಳೆದುಕೊಂಡು ಹೋಗಿದ್ದಾರೆ ಈ ಸಂದರ್ಭದಲ್ಲಿ ಯುವತಿ ರೋಧನೆ ಮುಗಿಲು ಮುಟ್ಟಿತ್ತು ನಂತರ ಯುವಕನೊಂದಿಗೆ ಬಂದಿದ್ದ ಕೆಲವರು ಯುವತಿ ಪೊಷಕರ ನಡೆಯನ್ನು ವಿರೋಧಿಸಿ ದಬಾಸಿದಾಗ ಪೊಷಕರಿಗೂ ಅಲ್ಲಿದ್ದವರಿಗೂ ವಾಗ್ವಾದ ನಡೆಯಿತು ಯುವಕ ಮಲ್ಲಿಕಾರ್ಜುನ್ ನಿಸ್ಸಹಾಯಕನಾಗಿ ಘಟನೆ ನೊಡುತ್ತ ನಿಂತಿದ್ದು ಪೋಲಿಸರ ಮದ್ಯಪ್ರಶದಿಂದ ಹೈಡ್ರಾಮಾ ಕೋಲಾರದ ಮಹಿಳಾ ಪೋಲಿಸ್ ಠಾಣೆ ಆವರಣಕ್ಕೆ ವರ್ಗಾವಣೆಯಾಗಿದೆ ಅಲ್ಲಿ ಯುವತಿ ಅಲಖ್ಯ ಕಾಣೆಯಾಗಿದ್ದಾಳೆ ಎಂದು ಆಕೆ ಪೋಷಕರು ದೂರು ನೀಡಿದ್ದು ವಿಚಾರಣೆ ನಡೆದಾಗ ಯುವತಿ ನನ್ನ ಸ್ವಯಿಚ್ಚೆಯಿಂದ ಹೋಗಿದ್ದಾಗಿ ಪೋಲಿಸರ ಮುಂದೆ ಹೇಳಿಕೆ ನೀಡಿದಾಗ ಕಾನೂನಿಲ್ಲಿ ಅವಕಾಶ ಇದೆ ಎನ್ನುವ ಬಗ್ಗೆ ಪೋಲಿಸರು ಯುವತಿ ಪೋಷಕರಿಗೆ ಮನವರಿಕೆ ಮಾಡಿದರು ಅವರು ಅಂತರ ಜಾತಿ ವಿವಾಹಕ್ಕೆ ಬಿಲ್ ಕುಲ್ ಒಪ್ಪದೆ ಹಠ ಹಿಡಿದು ಯುವತಿ ಮನವೊಲಿಕೆಗೆ ಮುಂದಾಗಿದ್ದಾರೆ ಶ್ರೀನಿವಾಸಪುರದಲ್ಲಿ ಸಾರ್ವಜನಿಕವಾಗಿ ಕೂಗಾಡಿ ಬಿದಿ ರಂಪ ಮಾಡಿದ ಪೋಷಕರು ಕೋಲಾರದಲ್ಲಿ ಯುವತಿಯನ್ನ ಅಂಗಲಾಚಿ ಬೇಡಿಕೊಂಡಿದ್ದಾರೆ ಹತ್ತು ಕರೆದು ರಂಪಾಟ ಮಾಡುವಾಗ ಯುವತಿ ತಂದೆ ನಾಗೇಶ್ ತಲೆ ಸುತ್ತಿ ಬಿದ್ದು ಆಸ್ಪತ್ರೆಗೆ ದಾಖಲಾದರು ಕ್ಯಾರೆ ಎನ್ನದ ಯುವತಿ ಅಲೈಕ್ಯ ಪ್ರೀತಿಸಿದ ಯುವಕ ಮಲ್ಲಿಕಾರ್ಜುನ್ ನನ್ನೆ ಮದುವೆಯಾದಳು ಎನ್ನುವುದು ಯುವತಿ ಕುಟುಂಬಸ್ಥರ ಆರೋಪ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



