ನ್ಯೂಜ್ ಡೆಸ್ಕ್:ಚಿಕ್ಕಬಳ್ಳಾಪುರ-ಪುಟ್ಟಪರ್ತಿ(ಶ್ರೀ ಸತ್ಯ ಸಾಯಿ ನಿಲಯಂ) ನಡುವಿನ 103 ಕೀ.ಮಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ₹713.33 ಕೋಟಿ ಮಂಜೂರು ಮಾಡುವ ಮೂಲಕ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.ನೈಋತ್ಯ ರೈಲ್ವೆಯಲ್ಲಿ ಇದೊಂದು ಮಹತ್ತರ ಸಂಪರ್ಕದ ಬೆಳವಣಿಗೆ ಮತ್ತು ಆರ್ಥಿಕ ಬೆಳವಣಿಗೆಗೆ ನೆರವಾಗುತ್ತದೆ ಎನ್ನಲಾಗಿದೆ.
ಬೆಂಗಳೂರು-ಚಿಕ್ಕಬಳ್ಳಾಪುರ-ಚಿಂತಾಮಣಿ-ಶ್ರೀನಿವಾಸಪುರ-ಕೋಲಾರ-ಬಂಗಾರಪೇಟೆ ನಡುವಿನ ರೈಲು ಮಾರ್ಗ ಜಾರಿಯಲ್ಲಿದ್ದು
ಬಂಗಾರಪೇಟೆ ರೈಲ್ವೆ ಜಂಕ್ಷನ್ ನಿಂದ ಚಿಕ್ಕಬಳ್ಳಾಪುರಕ್ಕೆ ರೈಲುಗಳು ಒಡಾಡಿದ್ದೆ ಆದರೆ ತಮಿಳುನಾಡು-ಕರ್ನಾಟಕ-ಆಂಧ್ರಪ್ರದೇಶದ ನಡುವಿನ ರೈಲು ಮಾರ್ಗ ಮಹತ್ತರ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಸಾರಿಗೆ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುತ್ತದೆ ಇದರಿಂದ ಬೆಂಗಳೂರು-ಆಂಧ್ರ ಸಂಪರ್ಕದ ರಸ್ತೆಗಳ ಮೇಲೆ ಒತ್ತಡ ಕಡಿಮೆ ಆಗಲಿದೆ ಎಂದು ಸಾರಿಗೆ ತಜ್ಞರು ಹೇಳುತ್ತಾರೆ.

ನೂತನ ರೈಲು ಮಾರ್ಗ ಹೀಗಿರುತ್ತದೆ.
ಚಿಕ್ಕಬಳ್ಳಾಪುರ-ಪುಟ್ಟಪರ್ತಿ ನಡುವಿನ ನೂತನ ರೈಲು ಮಾರ್ಗ ಈ ಊರುಗಳನ್ನು ಸಂಪರ್ಕಿಸಲಿದ್ದು ಚಿಕ್ಕಬಳ್ಳಾಪುರ-ದಿಬ್ಬೂರು -ವರ್ಲಕೊಂಡ-ಬಾಗೇಪಲ್ಲಿ-ಚಿಲುಮತ್ತೂರು -ಗೋರಂಟ್ಲ-ಪೆದ್ದಪಲ್ಲಿ-ಕೊತ್ತಪಲ್ಲಿ-ಪುಟ್ಟಪರ್ತಿ ಪ್ರಶಾಂತಿ ನಿಲಯಂ ತಲುಪಲಿದ್ದು ಅಲ್ಲಿಂದ ಈಗಾಗಲೆ ಧರ್ಮಾವರಂಗೆ ರೈಲು ಮಾರ್ಗ ಚಾಲ್ತಿಯಲ್ಲಿದೆ.
ಇದರಿಂದ ಚಿಕ್ಕಬಳ್ಳಾಪುರ-ಪುಟ್ಟಪರ್ತಿ ನಡುವಿನ ಪ್ರದೇಶಗಳಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಸಹಕಾರಿಯಾಗಲಿದೆ ದೇಶಾದ್ಯಂತದ ಭಕ್ತರು ನೇರವಾಗಿ ರೈಲಿನ ಮೂಲಕ ಪ್ರಶಾಂತಿ ನಿಲಯಂ ಚಿಕ್ಕಬಳ್ಳಾಪುರ ತಲುಪಲು ಸಾಧ್ಯವಾಗುತ್ತದೆ. ಭವಿಷ್ಯದಲ್ಲಿ, ಇನ್ನಷ್ಟು ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಚಿಕ್ಕಬಳ್ಳಾಪುರ-ಪುಟ್ಟಪರ್ತಿ ಮೂಲಕ ಹಾದು ಹೋಗುವ ಸಾಧ್ಯತೆಯಿದೆ.
ಈ ಮಾರ್ಗವನ್ನು ಒಂದೇ ಮಾರ್ಗದ ಬದಲು ಜೋಡಿ ಮಾರ್ಗವಾಗಿ ನಿರ್ಮಿಸಿದರೆ ಸಾರಿಗೆ ಸೌಲಭ್ಯಗಳು ಮತ್ತಷ್ಟು ಸುಧಾರಿಸಿದಂತಾಗುತ್ತದೆ ಇಲ್ಲಿನ ರೈತಾಪಿ ಜನರ ಕೃಷಿ ಉತ್ಪನ್ನಗಳಿಗೆ ಭಾರತದಾದ್ಯಂತ ಬೃಹತ್ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆ ಎಂದು ಜನಪರ ವೇದಿಕೆ ಸಂಚಾಲಕ ರಮೇಶ್ ಬಾಬು ಹೇಳುತ್ತಾರೆ.



