ಶ್ರೀನಿವಾಸಪುರ:ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಇಂದು ಪಟ್ಟಣದಲ್ಲಿರುವ ರಾಸುಗಳಿಗೆ ಅಲಂಕಾರ ಮಾಡಿ ಸಂಪ್ರದಾಯದಂತೆ ಅವುಗಳನ್ನು ಮುಳಬಾಗಿಲು ರಸ್ತೆಯಲ್ಲಿ ಹೊಗಳಗೆರೆ ತಿರುವಿನಲ್ಲಿ ಇರುವ ಕಾಟಮರಾಯ ದೇವಾಲಯದ ಬಳಿ ಕರೆತಂದು ಪೂಜಿಸುವ ಮೂಲಕ ಸಂಭ್ರಮದಿಂದ ಸಂಕ್ರಾಂತಿಯನ್ನ ಆಚರಿಸಲಾಯಿತು.


ಕಿಚ್ಚು ಹಾಕಿ ಸಂಭ್ರಮಿಸಿದರು.
ಸಿಂಗರಿಸಿದ ಹಸು ಮತ್ತು ಎತ್ತುಗಳನ್ನು ಗೋಧೂಳಿ ಲಗ್ನದಲ್ಲಿ ಕಾಟಮರಾಯ ದೇವಾಲಯದ ಆವರಣಕ್ಕೆ ಕರೆತರಲಾಗುತ್ತದೆ ಅಲ್ಲಿ ಸಂಪ್ರದಾಯದಂತೆ ಅಪ್ಪೂರೊಳ್ಳು ಕುಟುಂಬಿಕರು ಗೋವುಗಳ ಕಾಲು ತೊಳೆದು ಪೂಜೆ ಮಾಡುತ್ತಾರೆ ನಂತರ ವಾಡಿಕೆಯಂತೆ ದೇವಾಲಯದ ಆವರಣದಲ್ಲಿ ಬೃಹತ್ ಎತ್ತರದಲ್ಲಿ ಹಾಕಲಾದ ಕಟ್ಟಿಗೆಗಳಿಗೆ ಅಗ್ನಿ ಸ್ಪರ್ಷ ಮಾಡಿ ಕಿಚ್ಚು ಹಚ್ಚುತ್ತಾರೆ ಬೆಂಕಿ ಉರಿದಷ್ಟು ರೈತರ ಜಾನುವಾರುಗಳ ಶ್ರೇಯಸ್ಸು ಹೆಚ್ಚುತ್ತದೆ ಮತ್ತು ರಕ್ಷಣೆ ಸಿಗುತ್ತದೆ ಎಂಬ ಉದ್ದೇಶದಿಂದ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಕಟ್ಟಿಗೆ ರಾಶಿ ಹಾಕಿ ಕಿಚ್ಚನ್ನು ಉರಿಸಲಾಗುತ್ತದೆ ಎಂದು ಊರಿನ ಹಿರಿಯರು ಸಂಪ್ರದಾಯದ ಮಹತ್ವ ತಿಳಿಸಿಕೊಟ್ಟರು.ನಮ್ಮ ಸಂಪ್ರದಾಯ ಸಂಸೃತಿ ಮುಂದಿನ ಪೀಳಿಗೆಗೆ ಕರೆದೊಯುವಂತಾಗಬೇಕು ಮುಂದಿನ ವರ್ಷಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳನ್ನು ಇಲ್ಲಿಗೆ ಕರೆ ತರಲು ಯುವ ಸಮುದಾಯ ಮುಂದೆ ಬರಬೇಕು ಎಂದು ಪುರಸಭೆ ಮಾಜಿ ಸದಸ್ಯ ಮಂಜುನಾಥಗೌಡ ಹೇಳಿದರು.ಈ ಸಂದರ್ಬದಲ್ಲಿ ಪುರಸಭೆ ಮಾಜಿ ಸದಸ್ಯ ರಾಜು.ಮಂಜು ಹಾಗು ಗಂಗನಪಲ್ಲಿ ಕುಟುಂಬದವರು ಸೇರಿದಂತೆ ಊರಿನ ಹಲವಾರು ಮುಖಂಡರು ಇದ್ದರು.



