ಶ್ರೀನಿವಾಸಪುರ: ಕೆರೆಗಳಿಗೆ ನೀರು ತುಂಬಲು ರೂಪಿಸಿರುವ ಕೆ.ಸಿ.ವ್ಯಾಲಿ ಯೋಜನೆಯ ಪೈಪ್ ಲೈನ್ ಕಾಮಗಾರಿ ಶ್ರೀನಿವಾಸಪುರ ಪಟ್ಟಣದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದ್ದು ಈ ಸಂಬಂದ ಹಳೆಯ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣದಿಂದ ತಾಲೂಕು ಕಛೆರಿ ಮುಂಬಾಗದ ರಸ್ತೆಯಲ್ಲಿ ಹಾದು ಹೋಗುವಂತೆ ಕಾಮಗಾರಿ ಅರಂಭವಾಗಿದ್ದು ಹಿಂದಿನ ದಿನ ರಾತ್ರಿ ರಸ್ತೆ ಅಗೆದು ಮಣ್ಣು ಎತ್ತಿ ಪೈಪ್ ಲೈನ್ ಅಳವಡಿಸಿ ಮಣ್ಣು ಸಹ ತುಂಬಿದ್ದಾರೆ, ಕಾಮಗಾರಿ ಮುಗಿದು ಗ್ಯಾಪ್ ನೀಡದೆ ಅದೇ ರಸ್ತೆಯಲ್ಲಿ ಎಂದಿನಂತೆ ವಾಹನ ಸಂಚರಿಸಲು ಅನವು ಮಾಡಿಕೊಟ್ಟ ಹಿನ್ನಲೆಯಲ್ಲಿ ಇಂದು ಮಧ್ಯಾನಃ ಇಟ್ಟಿಗೆ ಲೊಡ್ ಹೊತ್ತು ಬಂದ ಬಾರಿಗಾತ್ರದ ಲಾರಿ ಇಂದಿರಾ ಕ್ಯಾಂಟಿನ್ ಮುಂಬಾಗದಲ್ಲಿ ಕಚ್ಚಾ ಮಣ್ಣಲ್ಲಿ ಕುಸದಿದೆ ಲಾರಿಯ ಹಿಂದಿನ ಚಕ್ರಗಳು ಮಣ್ಣಲ್ಲಿ ಹೂತು ಹೋಗಿ ಇಟ್ಟಿಗೆ ಲೋಡ್ ಸಮೇತ ಲಾರಿ ಅರ್ದ ಭಾಗ ಪಕ್ಕದ ರಸ್ತೆ ವಿಭಜಕದ ಮೇಲೆ ಉರಳಿದೆ ಇದರಿಂದ ಹಿಂದೆ ಬರುತ್ತಿದ್ದ ವಾಹನಗಳು ಸರಣಿ ಅಪಘಾತಕ್ಕೆ ಒಳಗಾಗಿದ್ದು ಯಾವುದೆ ಪ್ರಾಣಪಯ ಆಗಿಲ್ಲ ಆದರೆ ಕಚ್ಚಾ ಮಣ್ಣು ತುಂಬಿದ ರಸ್ತೆಯಲ್ಲಿ ವಾಹನ ಸಂಚಾರ ನಿರ್ಭಂದಿಸಬೇಕಾಗಿತ್ತು ಎಂದು ಸಾರ್ವಜನಿಕರು ಹೇಳುತ್ತಾರೆ. ಅನಾಹುತಕ್ಕೆ ಇಟ್ಟಿಗೆ ಲಾರಿ ಆಯಿತು ಅದೇ ಸಾರ್ವಜನಿಕ ಸಾರಿಗೆ ಬಸ್ಸು ಅಥಾವ ಇನ್ನಿತರೆ ವಾಹನಗಳು ಸಂಚರಿಸುವಾಗ ಇಂತಹ ಅನಾಹುತ ಆಗಿದ್ದರೆ ಸಾರ್ವಜನಿಕರಿಗೆ ತೊಂದರೆ ಆಗುತಿತ್ತು ಇದರಿಂದಾಗಿ ಕೆ.ಸಿ.ವ್ಯಾಲಿ ಯೋಜನೆಯ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ನೀರಾವರಿ ಅಭಿಯಂತರರು ಕಾಮಗಾರಿ ಮಾಡಿರುವಂತ ರಸ್ತೆಯ ಜಾಗದಲ್ಲಿ ವಾಹನ ಸಂಚಾರ ನಿರ್ಭಂದಿಸಿ ಜಾಗ್ರತೆ ವಹಿಸಬೇಕು ಎಂದು ಜನತೆ ಅಗ್ರಹಿಸಿರುತ್ತಾರೆ.

