ನ್ಯೂಜ್ ಡೆಸ್ಕ್:ಯುವಕರು ತಮ್ಮ ಬರ್ತಡೇ ಸಂಭ್ರಮವನ್ನು ನಡುರಸ್ತೆಯಲ್ಲಿ ಆಚರಿಸುವುದು ಫ್ಯಾಷನ್ ಆಗಿ ಮಾಡಿಕೊಂಡಿದ್ದಾರೆ ನಡು ರಸ್ತೆಯಲ್ಲಿ ಟೆಬಲ್ ಹಾಕಿ ಅಥಾವ ಸ್ಕೂಟರ್ ನಿಲ್ಲಿಸಿ ಅದರ ಮೇಲೆ ಕೆಕ್ ಇಟ್ಟು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಇತ್ತಿಚಿಗೆ ಕಾಮನ್ ಆಗುತ್ತಿದೆ ತಡ ಸಂಜೆ ನಡು ರಾತ್ರಿ ವೇಳೆ ಹುಟ್ಟುಹಬ್ಬದ ಪಾರ್ಟಿ ಹೆಸರಿನಲ್ಲಿ ಬರ್ತಡೇ ಬಾಯ್ ರಸ್ತೆಯಲ್ಲಿ ಕೇಕ್ ಕತ್ತರಿಸಿದ ನಂತರ,ಬರ್ತಡೇ ಬಾಯ್ ಸ್ನೇಹಿತರ ಗುಂಪು ರಸ್ತೆಯಲ್ಲಿ ಕೂಗಾಡುತ್ತ ದೊಡ್ಡ ಮಟ್ಟದಲ್ಲಿ ಪಟಾಕಿ ಸಿಡಿಸುತ್ತ ಹಂಗಾಮ ಸೃಷ್ಟಿಸುವುದು ಕೇಕ್ ಬಳಿದುಕೊಂಡು ಕೆಟ್ಟದಾಗಿ ಕೂಗಾಡಿ ಕುಣಿದು ಕುಪ್ಪಳಿಸುತ್ತ ಗಲಾಟೆ ಮಾಡುತ್ತಾರೆ ಸ್ಥಳದಲ್ಲಿ ಇಲ್ಲದ ರಾದ್ದಾಂತ ಮಾಡಿ ವಾಹನ ಸಂಚಾರಕ್ಕೂ ಅಡ್ಡಿ ಪಡಿಸುತ್ತ ಕುಕೃತ್ಯಗಳು ನಡೆಸುತ್ತ ಇರುತ್ತಾರೆ ದೊಡ್ಡ ನಗರಗಳಲ್ಲಿ ಹೆಣ್ಮಕ್ಕಳು ಸಹ ನಾವು ಯಾರಿಗೇನು ಕಡಿಮೆ ಇಲ್ಲ ಎಂಬಂತೆ ವರ್ತಿಸುತ್ತಾರೆ.
ಇಂತಹದೊಂದು ಘಟನೆ ಎರಡು ದಿನಗಳ ಹಿಂದೆ ಆಂಧ್ರದ ತಿರುಪತಿ ನಗರದಲ್ಲಿ ಇಂದಿರಾ ಪ್ರಿಯದರ್ಶಿನಿ ಮಾರುಕಟ್ಟೆ, ಕಾಟನ್ ಮಿಲ್ ಪ್ರದೇಶದಲ್ಲಿ ನಡೆದಿದ್ದು ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಮ್ಯಾಟ್ರಿಕ್ಸ್ ಥರ್ಮಲ್ 4 ಬೀಟ್ ನಡೆಸುತ್ತಿದ್ದ ಸಮಯದಲ್ಲಿ,ಯುವಕರು ಬರ್ತಡೇ ರಾದ್ದಾಂತ ಡ್ರೋನ್ ಕ್ಯಾಮೆರಾ ಮೂಲಕ ಪೋಲಿಸರು ಪತ್ತೆ ಹಚ್ಚಿದ್ದಾರೆ ತಕ್ಷಣ ಪ್ರತಿಕ್ರಿಯಿಸಿದ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಅವರಿಗೆ ಕೌನ್ಸೆಲಿಂಗ್ ನೀಡಿ ಮುಂದೆ ಇಂತಹ ಪಾರ್ಟಿಗಳು ಮತ್ತೆ ನಡೆಸೆದಂತೆ ಬುದ್ದಿ ಹೇಳಿ ಇದು ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ರಸ್ತೆಯಲ್ಲಿ ಇಂತಹ ಬರ್ತಡೇ ರಾದ್ದಾಂತ ಕೇವಲ ಒಂದು ಹಳ್ಳಿ ಊರು ನಗರ ಅಲ್ಲ ಎಲ್ಲಾ ರಾಜ್ಯಗಳಲ್ಲೂ ಚಾಳಿ ಇದ್ದು ಸದ್ದು ಮಾಡುತ್ತಿದೆ ಎಂಬ ಆರೋಪ ಇದ್ದು ಇದಕ್ಕೆ ಸ್ಥಳೀಯ ಪೋಲಿಸರು ಕಡಿವಾಣ ಹಾಕಬೇಕೆಂದು ಸಾರ್ವಜನಿಕರ ಒತ್ತಾಯವೂ ಇದೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



