ನ್ಯೂಜ್ ಡೆಸ್ಕ್:ಭಕ್ತಿಯ ಸಂಕೇತವಾದ ಅಯೋಧ್ಯೆ ಶ್ರೀರಾಮಚಂದ್ರ ಭಾರತೀಯರ ಅಚ್ಚುಮೆಚ್ಚಿನ ದೇವರು ಭಾವನಾತ್ಮಕವಾಗಿ ಶ್ರೀರಾಮನ್ನು ಪ್ರೀತಿಯೊಂದಿಗೆ ಪೂಜಿಸುತ್ತಾರೆ ದೇಶದ ಸಂಸ್ಕೃತಿ, ನಂಬಿಕೆ, ಪರಂಪರೆಯ ಐತಿಹಾಸಿಕ ಸಂಕೇತ. ಶ್ರೀರಾಮನ ಆದರ್ಶ ನಮ್ಮ ಜೀವನದಲ್ಲೂ ಇರಲಿ ಎಂದು ಭಯಸುತ್ತಾರೆ ಇಂತಹ ಶ್ರೀರಾಮನಿಗೆ ಈಗಿನ ತೆಲಂಗಾಣ ರಾಜ್ಯದ ಭದ್ರಾಚಲಂ ಶ್ರೀಸೀತಾರಾಮರಿಗೆ ರಾಮದಾಸು ಎಂಬ ಭಕ್ತ ದೇವಸ್ಥಾನ ನಿರ್ಮಿಸಿದ್ದು ಇತಿಹಾಸ ರಾಮದಾಸನ ಸಿನಿಮಾ ನೋಡಿದ ಬಹುತೇಕರಿಗೆ ಆತನ ಭಕ್ತಿಯ ಕುರಿತಾಗಿ ಸಾಕಷ್ಟು ತಿಳಿದಿರುತ್ತದೆ ಅಷ್ಟೊಂದು ಆಪ್ಯಾಯತೆ ಪ್ರೀತಿಯಿಂದ ಭದ್ರಾಚಲಂ ನಲ್ಲಿ ತನ್ನ ಪ್ರೀತಿಯ ರಾಮಯ್ಯನಿಗೆ ಶ್ರೀಸೀತಾರಾಮನ ದೇವಾಲಯವನ್ನು ಭಕ್ತ ರಾಮದಾಸು ಪ್ರೀತಿಯಿಂದ ಕಟ್ಟಿಸಿರುವುದು ಇತಿಹಾಸ.
ಇಷ್ಟೊಂದು ಭಕ್ತಿ ಪವಿತ್ರ್ಯತೆಯ ಭದ್ರಾಚಲಂ ಶ್ರೀಸೀತಾರಾಮ ದೇವಸ್ಥಾನ ಗೋದಾವರಿ ನದಿ ತೀರದ ಪಶ್ಚಿಮ ದಿಕ್ಕಿನತ್ತ ಮುಖ ಮಾಡಿರುವುದು ಈ ದೇವಸ್ಥಾನದ ವಿಶೇಷತೆಯಾಗಿದೆ ಇದು ಭಗವಾನ್ ರಾಮನಿಗೆ ಸಮರ್ಪಿತವಾಗಿರುವ ವಿಶಿಷ್ಟ ದೇವಾಲಯವಾಗಿ “ಶ್ರೀ ಸೀತಾರಾಮಚಂದ್ರ ಸ್ವಾಮಿ ದೇವಾಲಯ” ಕ್ಕೆ ಹೆಸರುವಾಸಿಯಾಗಿದೆ. ಇದು ಪ್ರಸ್ತುತ ಭಾರಯದಲ್ಲಿ ಅಯೋಧ್ಯೆಯ ನಂತರ ಅತಿದೊಡ್ಡ ಶ್ರೀರಾಮಕ್ಷೇತ್ರವಾಗಿದೆ
ಈಗ ಇಂತಹುದೆ ಭದ್ರಾಚಲಂ ಶ್ರೀಸೀತಾರಾಮ ದೇವಸ್ಥಾನವನ್ನು ಸಪ್ತಸಾಗರದಾಚೆ ದೂರದ ಅಮೆರಿಕಾ ದೇಶದ ಅಂಟ್ಲಾಂಟ ನಗರದ ಹೈವೆಯಲ್ಲಿ ನಿರ್ಮಾಣವಾಗಲಿದೆ. ಶ್ರೀರಾಮ ಸಂಸ್ಥಾನ ಇನ್ಕಾರ್ಪೋರೇಟೆಡ್ ಸಂಸ್ಥೆ ಭಕ್ತರ ಸಹಕಾರದೊಂದಿಗೆ ಸುಮಾರು 250 ಕೋಟಿ ದೇಣಿಗೆಯೊಂದಿಗೆ ದೇವಾಲಯ ನಿರ್ಮಾಣಮಾಡಲಿದ್ದಾರೆ ಎಂದು ಶ್ರೀರಾಮ ಸಂಸ್ಥಾನದ ಅಧ್ಯಕ್ಷ ಪದ್ಮನಾಭಾಚಾರ್ಯ ಹೇಳಿದ್ದಾರೆ. 2019ರಲ್ಲಿ ಅಮೆರಿಕದ ಅಟ್ಲಾಂಟಾದ ಹೆದ್ದಾರಿಯಲ್ಲಿ 33 ಎಕರೆ ಪ್ರದೇಶದಲ್ಲಿ ದೇವಸ್ಥಾನ ನಿರ್ಮಿಸಲು ನಿರ್ಧರಿಸಲಾಗಿದ್ದು 2025ರ ಶ್ರೀರಾಮ ನವಮಿ ವೇಳೆಗೆ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದ್ದು 200 ಶಿಲ್ಪಿಗಳು, 15 ಎಂಜಿನಿಯರ್ಗಳು ಮತ್ತು ವಾಸ್ತುಶಿಲ್ಪಿಗಳು ಕಡಪ ಜಿಲ್ಲೆಯ ಅಲ್ಲಗಡ್ಡದ ಖ್ಯಾತ ಶಿಲ್ಪಿ ಡಿ ರಾಮಕೃಷ್ಣಮಾಚಾರ್ಯರ ಮೇಲ್ವಿಚಾರಣೆಯಲ್ಲಿ ಅವಿರತವಾಗಿ ಕಾರ್ಯಗಳು ನಡೆಯುತ್ತಿರುವುದಾಗಿ ಹೇಳುತ್ತಾರೆ ಸಂಸ್ಥಾನದ ಪ್ರತಿನಿಧಿಗಳಾದ ಜಡಾ ಕಾಶಿವಿಶ್ವನಾಥ ಶರ್ಮಾ ಮತ್ತು ಎಂ ಸಂತೋಷ ಶರ್ಮಾ ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26