ಶ್ರೀನಿವಾಸಪುರ:ಸಮಾಜದಲ್ಲಿನ ಜಾತಿ ಅನಿಷ್ಟತೆ ತೊಲಗಿಸಿ ಸಾಮಾಜಿಕ ಸೌಹಾರ್ದತೆ ಮೂಡಿಸಿದ ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ಸಂತರಾಗಿದ್ದರು ಬಸವಣ್ಣನವರು ಸಮಾನತೆಯ ತಳಹದಿಯ ಮೇಲೆ ನವ ಸಮಾಜದ ನಿರ್ಮಾಣ ಮಾಡಿದರು ಎಂದು ತಾಲೂಕು ತಹಶೀಲ್ದಾರ್ ಸುಧೀಂದ್ರ ಹೇಳಿದರು.
ಅವರು ಶ್ರೀನಿವಾಸಪುರ ತಾಲೂಕು ಆಡಳಿತದ ಸಹಯೋಗದೊಂದಿಗೆ ಶ್ರೀ ನಗರೇಶ್ವರ ಸ್ವಾಮಿ ಸೇವಾ ಸಮಿತಿ, ನಗರ್ತ ಮಹಿಳಾ ಮಂಡಳಿ ಹಾಗು ತಾಲೂಕು ವಿರಶೈವ ಒಕ್ಕೂಟ ಸಂಯುಕ್ತವಾಗಿ ಆಯೋಜಿಸಿದ್ದ ಬಸವಣ್ಣನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪರಿಶುದ್ಧ ಮನಸ್ಸಿನ ಶರಣರ ವಚನಗಳು ಸರ್ವಕಾಲಕ್ಕೂ ಅನ್ವಯವಾಗುತ್ತವೆ ಎಂದು ಬಣ್ಣಿಸಿದರು.
ತಾಲೂಕು ವಿರಶೈವ ಒಕ್ಕೂಟದ ಅಧ್ಯಕ್ಷ ಹಾಗು ರೈತ ಮುಖಂಡ ದಳಸನೂರು ವೀರಭದ್ರಸ್ವಾಮಿ ಮಾತನಾಡಿ 12ನೇ ಶತಮಾನದಲ್ಲಿ ಜಾತಿಗಳ ನಡುವಿನ ಅಸಮಾನತೆಯನ್ನು ತೊಲಗಿಸಿ ಶಕ್ತಿಶಾಲಿ ಸಮಾಜವನ್ನು ನಿರ್ಮಾಣ ಮಾಡಲು ಬಸವಣ್ಣ ಮುಂದಾದವರು ಎಂದರು.ಕುಲದ ಮಹತ್ವ ಕಳೆಯಲು ತಾನೂ ಕೂಡ ಎಲ್ಲರಲ್ಲಿ ಒಬ್ಬನು ಎಂದು ಬಿಂಬಿಸಿಕೊಂಡ ಮಹಾನ್ ಸಂತ, ಅವರು ನುಡಿದಂತೆ ನಡೆದವರಾಗಿದ್ದು ಅವರ ಬದುಕೆ ನಮಗೆ ಆದರ್ಶ ಎಂದು ತಿಳಿಸಿದರು.
ಶಿವಚಾರ್ಯ ನಗರ್ತ ಮಂಡಳಿ ರಾಜ್ಯ ನಿರ್ದೇಶಕ ಶಿವಕುಮಾರ್ ಮಾತನಾಡಿ ವಚನದ ಸಾಹಿತ್ಯದ ಮೂಲಕ ಲೋಕದ ಸತ್ಯವನ್ನು ಅರ್ಥವಾಗುವಂತೆ ತಿಳಿಸಿ ಸಮಾಜದಲ್ಲಿ ಹೊಸ ಶಕೆಗೆ ನಾಂದಿ ಹಾಡಿದ ಬಸವಣ್ಣನವರು,ಎಲ್ಲಾ ಹಂತದ ಜನರು ಆಧ್ಯಾತ್ಮಿಕ ಮತ್ತು ಸಾಮಾಜಿಕ ವಿಚಾರಗಳನ್ನು ಚರ್ಚಿಸಬಹುದಾದ ವೇದಿಕೆಯಾಗಿ ಅನುಭವ ಮಂಟಪವನ್ನು ಸ್ಥಾಪಿಸಿದ್ದರು ಇದನ್ನು ಈಗಿನ ಪ್ರಜಾಪ್ರಭುತ್ವದ ವ್ಯಸ್ಥೆಗೆ ಮಾದರಿ ಎನ್ನಬಹುದಾಗಿದೆ,ಅವರ ನಡೆ-ನುಡಿ ಹಾಗೂ ಅವರು ತೋರಿದ ಹಾದಿ ನಮಗೆ ಆದರ್ಶ ಎಂದರು.
ತಹಶೀಲ್ದಾರ್ ಕಚೇರಿಯಲ್ಲಿ ವೇದಿಕೆ ಕಾರ್ಯಕ್ರಮದ ನಂತರ ಬೃಹತ್ ಬಸವಣ್ಣನವರ ಭಾವಚಿತ್ರ ಹೊತ್ತ ಪಲ್ಲಕ್ಕಿಯ ಶೋಭಾಯಾತ್ರೆ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ನಗರೇಶ್ವರ ಸೇವಾಸಮಿತಿ ಮುಖ್ಯಸ್ಥ ಗೀರಿಶ್,ಹಿರಿಯರಾದ ಕಪಾಲಿ ಮೋಹನ್, ಪುಷ್ಪಮ್ಮರಾಜಣ್ಣ,ರಾಜಶೇಖರ್, ಕಪಾಲಿಮಂಜು,ರಾಮಲಿಂಗಪ್ಪ,ಮಂಜುನಾಥ್, ಮಾಡಿ ವೀರಣ್ಣಮಂಜು,ರಾಜೇಶ್,ನಗರ್ತ ಮಹಿಳಾ ಸಂಘದ ಮುಖಂಡರಾದ ಅಮುದಾ,ಅನಿತಾ ಮುಂತಾದವರು ಇದ್ದರು.
Breaking News
- ಸ್ವಾತಂತ್ರ್ಯ ನಂತರ 10ನೇ ತರಗತಿ ಪಾಸ್ ಆದ ಗ್ರಾಮದ ಮೊದಲ ಯುವಕ!
- 65 ಸಾವಿರ ಶಿಕ್ಷಕರ ನೇರವಿನಿಂದ ಒಳಮೀಸಲಾತಿ ಸಮೀಕ್ಷೆ CM ಸಿದ್ದರಾಮಯ್ಯ
- ಶ್ರೀನಿವಾಸಪುರ:ಬಳಸದೆ ಹಳೆಯದಾಗುತ್ತಿದೆ ksrtc ಬಸ್ ನಿಲ್ದಾಣ!
- ಶ್ರೀನಿವಾಸಪುರ:ಅರ್ಥಪೂರ್ಣ ಬಸವ ಜಯಂತಿ ಆಚರಣೆ
- ಶ್ರೀನಿವಾಸಪುರ:ಪ್ರಾಥಮಿಕ ಶಾಲಾ ಶಿಕ್ಷಕರ ನೂತನ ಅಧ್ಯಕ್ಷ ರೆಡ್ಡಪ್ಪ
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
Wednesday, May 7