ಶ್ರೀನಿವಾಸಪುರ:ಆಂಧ್ರದ ಗಡಿಭಾಗದಲ್ಲಿರುವ ಶ್ರೀನಿವಾಸಪುರದ ವಿದ್ಯಾರ್ಥಿಗಳು ಕನ್ನಡವನ್ನು ಆಡು ಭಾಷೆಯಾಗಿ ಬಳಸುವ ಮೂಲಕ ಗಡಿ ಗ್ರಾಮಗಳಲ್ಲಿ ಕನ್ನಡ ಭಾಷೆಯನ್ನು ಬೆಳಸ ಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಕುಬೇರಗೌಡ ಕರೆ ಇತ್ತರು.
ಅವರು ಶ್ರೀನಿವಾಸಪುರ ಪಟ್ಟಣದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಹೆಚ್.ಎನ್.ಎಸ್ ಬೇಕರಿ ಮಾಲಿಕ ರಾಘವೇಂದ್ರ ಅವರು ಶ್ರೀಭುವನೇಶ್ವರಿ ಗೆಳೆಯರ ಬಳಗದ ಸಹಕಾರದೊಂದಿಗೆ ಆಯೋಜಿಸಿದ್ದ ಕನ್ನಡ ರಾಜೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆಂಧ್ರದ ಗಡಿಯಲ್ಲಿನ ನಮ್ಮ ರಾಜ್ಯದ ಗಡಿ ಗ್ರಾಮಗಳಲ್ಲಿ ವಿಶೇಷವಾಗಿ ಪರ ರಾಜ್ಯದ ಮಕ್ಕಳು ಬಂದು ಕನ್ನಡ ಕಲಿಯುತ್ತಿದ್ದಾರೆ ಇದೊಂದು ವಿಶೇಷವಾದ ಕನ್ನಡ ಸೇವೆಯಾಗಿದೆ ಎಂದರು, ನಾಡಿನ ಒಳಗೆ ಕನ್ನಡ ಸಾಹಿತ್ಯ ಮತ್ತು ಬರವಣಿಗೆಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಭಾಷಾ ಸಾಹಿತ್ಯದ ಬಗ್ಗೆ ಅರಿವು ಪಡೆದುಕೊಳ್ಳುವಂತೆ ಹೇಳಿದರು.
ಈ ಕಾರ್ಯಕ್ರಮದಲ್ಲಿ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ನವ್ಯಶ್ರೀ.ಬಿ, ದರ್ಶನ್.ಡಿ.ಎಂ, ಹರ್ಷಿತ.ಬಿ.ಎನ್, ತನುಶ್ರೀ.ಜಿ.ವಿ, ಸಿಂದೂರಾಣಿ.ಜಿ ಮತ್ತು ರಾಷ್ಟ್ರೀಯ ಸಾರಿಗೆ ಇಲಾಖೆಯ ಆಯೋಜಿಸಿದ್ದ ರಾಷ್ಟ್ರೀಯ ಶೇಟಲ್ ಬ್ಯಾಟ್ಮಿಂಟನ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ವಿಜೇತರಾದ ರಾಜ್ಯ ಸಾರಿಗೆ ಸಂಸ್ಥೆ ಚಾಲಕ ಜಗನ್ನಾಥ್.ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಬ್ರಾಹ್ಮಣ ಸಂಘದ ಮುಖ್ಯಸ್ಥರಾದ ಗೋಪಿನಾಥ್, ಪುರಸಭೆ ಮಾಜಿ ಅಧ್ಯಕ್ಷ ಮುನಿಯಪ್ಪ, ಸತ್ಯನಾರಾಯಣ, ನಾಗಪ್ಪ, ಉಪನ್ಯಾಸಕ ಅಬ್ದುಲ್ ವಾಜೀದ್ ಸಾಬ್,ನರಸಿಂಹಮೂರ್ತಿ ಇತರರು ಉಪಸ್ಥಿತರಿದ್ದರು.
ಕನ್ನಡದ ಸೇವಕ ಬೇಕರಿ ಮಾಲಿಕ ರಾಘವೇಂದ್ರ
ರಾಘವೇಂದ್ರ ಮೂಲತಃ ಬೇಕರಿ ವ್ಯಾಪಾರಸ್ಥ ತನ್ನ ಆದಾಯದ ಇತಿಮಿತಿಯಲ್ಲಿ ಹಲವಾರು ವರ್ಷಗಳಿಂದ ಕನ್ನಡ ಸೇವೆ ಮಾಡುತ್ತ ಬಂದಿದ್ದಾರೆ,ಪ್ರತಿವರ್ಷ ನವೆಂಬರ್ 1 ರಂದು ತನ್ನ ಅಂಗಡಿಯ ಮುಂಬಾಗದಲ್ಲಿ ಕನ್ನಡತಾಯಿ ಶ್ರೀ ಭುವನೇಶ್ವರಿಯನ್ನು ಪ್ರತಿಷ್ಠಾಪಿಸಿ ಪುಜೆಗೈದು ಕನ್ನಡದ ಕಲಿಗಳನ್ನು ಸನ್ಮಾನಿಸಿ ವೈಶಿಷ್ಟಪೂರ್ವಕವಾಗಿ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿ ತನ್ನ ಸ್ನೇಹಿತರೊಂದಿಗೆ ಸಂಭ್ರಮಿಸುತ್ತಾರೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



