ಶ್ರೀನಿವಾಸಪುರ:ಹಳ್ಳ ಕೊಳ್ಳಗಳಿಂದ ಕೂಡಿ ಹಾಳಾದ ರಸ್ತೆಗೆ ಮಣ್ಣು ಹಾಕಿ ಹಳ್ಳ ಮುಚ್ಚಿ ಮೆಲ್ನೋಟಕ್ಕೆ ಮೇಕಪ್ ಮಾಡಿದರೆ ಸಾಕ ಅಧಿಕಾರಿಗಳೆ ಹಿಗೇಂದು ಈ ರಸ್ತೆಯಲ್ಲಿ ಓಡಾಡುವ ದ್ವೀಚಕ್ರ ವಾಹನ ಸವಾರರ ಮಾತು.
ಈ ರಸ್ತೆ ಗ್ರಾಮವೊಂದರ ರಸ್ತೆಯಲ್ಲ ಬದಲಾಗಿ ಶ್ರೀನಿವಾಸಪುರ ತಾಲೂಕಿನ ಗಡಿಯಂಚಿನ ಆಂಧ್ರದ ಚಂಬಕೂರು,ರಾಮಸಮುದ್ರಂ ಮದನಪಲ್ಲಿ ಭಾಗಕ್ಕೆ ಹೊಂದಿಕೊಂಡಿರುವ ತಾಲೂಕಿನ ಸೋಮಯಾಜಲಹಳ್ಳಿ,ಪುಲಗೂರಕೋಟೆ ಲಕ್ಷ್ಮೀಪುರ ಭಾಗದ ಜನತೆ ಶ್ರೀನಿವಾಸಪುರ ಪಟ್ಟಣಕ್ಕೆ ಬರಲು ಈ ರಸ್ತೆಯನ್ನು ಬಳಸುತ್ತಾರೆ ಈಗ ರಸ್ತೆ ಹಳ್ಳಬಿದ್ದು ಹಾಳಾಗಿದೆ ಗುಂಡಿಗಳಿಂದ ತುಂಬಿದ್ದು ತಿರುವುಗಳಲ್ಲಿ ದ್ವಿಚಕ್ರವಾಹನ ಸವಾರ ಅನಾಮತ್ತು ಕೆಳಗೆ ಬೀಳುವಷ್ಟು ಡಾಂಬರು ಕಿತ್ತುಹೋಗಿದೆ.
ನನಬಾರ್ಡ್ ಯೋಜನೆಯಲ್ಲಿ ನಿರ್ಮಾಣ ಗ್ರಾಮೀಣ ಸಂಪರ್ಕ ರಸ್ತೆಯನ್ನು ಹಿಂದಿನ ಶಾಸಕರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿಯ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ಇಲಾಖೆ ನಿರ್ಮಿಸಿದ್ದು ಈಗ ರಸ್ತೆ ಹಾಳಾಗಿದೆ, ಗ್ರಾಮೀಣ ರಸ್ತೆಯಲ್ಲಿ ಸೋಮಯಾಜಲಹಳ್ಳಿ ಭಾಗದ ಜಲ್ಲಿಕ್ರಷರ್ ನಿಂದ ಬರುವಂತ ಟಿಪ್ಪರ್ ಲಾರಿಗಳು,ಮರಳು ಟ್ರಾಕ್ಟರಗಳು ಓಡಾಡುವ ಪರಿಣಾಮ ಸಂಪೂರ್ಣವಾಗಿ ಹಾಳಾಗಿದೆ ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಗದ್ದೆಯಂತಾಗುತ್ತದೆ ಒಣಗಿದೆ ಮೇಲೆ ಮಣ್ಣಿನ ದೂಳು ದ್ವಿಚಕ್ರ ವಾಹನ ಸವಾರರ ಮುಖಕ್ಕೆ ಬಡಿಯುತ್ತದೆ.ರಸ್ತೆಯ ಬದಿಯ ಮುಳ್ಳುಗಂಟಿಗಳು ರಸ್ತೆ ವರಿಗೂ ಬೆಳೆದು ಬಂದಿವೆ,ರಾತ್ರಿ ವೇಳೆ ಒಡಾಡುವ ದ್ವಿಚಕ್ರ ವಾಹನ ಸವಾರರಿಗೆ ಮುಳ್ಳುಗಂಟಿಗಳಲ್ಲಿ ಅಡಗಿರುವ ಮುಳ್ಳಹಂದಿ, ಮೊಲ,ಕಾಡು ಬೆಕ್ಕುಗಳುವಾಹನದ ಬೆಳಕು ಕಂಡ ತಕ್ಷಣ ಅವು ಗಲಿಬಿಲಿಯಿಂದ ರಸ್ತೆ ದಾಟಿದರೆ ವಾಹನ ಸವಾರರಿಗೆ ಸಮಸ್ಯೆಯಾಗಿ ಕಾಡುತ್ತದೆ ಎನ್ನುವುದು ಇಲ್ಲಿ ಒಡಾಡುವಂತವರ ಅಳಲು. ಈ ರಸ್ತೆಗೆ ಮಣ್ಣು ಹಾಕುವುದು ತೇಪೆ ಹಾಕುವಂತ ಮೇಕಪ್ ಕಾರ್ಯ ಬೇಕಿಲ್ಲ ಅರ್ಜೆಂಟ್ ಆಗಿ ಸಂಪೂರ್ಣವಗಿ ಡಾಂಬರಿಕರಣ ಆಗಬೇಕು ಎನ್ನುವುದು ಅವಲಕುಪ್ಪ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



