ನ್ಯೂಜ್ ಡೆಸ್ಕ್:ರೈತ ಕಾರ್ಮಿಕನೊರ್ವ ಕೃಷಿ ಕೆಲಸಕ್ಕೆ ಹೋಗುತ್ತಿರುವಾಗ ಅವನಿಗೆ ಅದೃಷ್ಟ ಕುಲಾಯಿಸಿದೆ ಇತನಿಗೆ ಅಪರೂಪದ ವಜ್ರದ ಹರಳು ದೊರೆತಿದೆ.
ಇದು ಎಲ್ಲೋ ವಿದೇಶದಲ್ಲಿ ನಡೆದಿರುವುದಲ್ಲ ಇಲ್ಲೆ ಪಕ್ಕದ ಆಂಧ್ರಪ್ರದೇಶದಲ್ಲಿ ರಾಯಲಸಿಮೆ ಪ್ರಾಂತ್ಯದ ಕರ್ನೂಲು ಜಿಲ್ಲೆಯ ತುಗ್ಗಲಿ ಮಂಡಲದ ಸೂರ್ಯತಾಂಡದಲ್ಲಿ ರೈತನೊಬ್ಬ ಹೊಲಕ್ಕೆ ಕೆಲಸಕ್ಕೆ ಹೋಗುತ್ತಿದ್ದಾಗ ಕಣ್ಣಿಗೆ ಬಿದದ್ದು ಹೊಳೆಯುತ್ತಿದ್ದ ಬಿಳಿ ಬಣ್ಣದ ಕಲ್ಲು ತಕ್ಷಣ ಹತ್ತಿರ ಹೋಗಿ ಪರೀಕ್ಷಿಸಿದಾಗ.ಬೆಳ್ಳಗೆ ಮಿರಮಿರನೆ ಕಣ್ಣಿಗೆ ರಾಚಿದೆ ತಕ್ಷಣ ಅದನ್ನು ಕೈಗೆ ತೆಗೆದುಕೊಂಡು ನೋಡಿದ್ದಾನೆ ಅವನಿಗೆ ಅದು ಏನು ಎಂಬುದು ಅರ್ಥವಾಗಿಲ್ಲ ತನ್ನ ಸಹೋದ್ಯೋಗಿಗಳು ತೋರಿಸಿದ್ದಾನೆ ಅವರು ಇದು ವಜ್ರ ಇರಬಹುದು ಎಂದು ಅಂದಾಜಿನಲ್ಲಿ ಹೇಳಿದ್ದು ರೈತ ಕಾರ್ಮಿಕನಿಗೆ ಆನಂದಕ್ಕೆ ಮಿತಿಯೇ ಇಲ್ಲದಂತಾಗಿದೆ ಇದು ಹೊರ ಜಗತ್ತಿಗೆ ಗೊತ್ತಾಗಿ ರೈತನ ಕೂಲಿಕಾರನ ಮನೆಗೆ ಚಿನ್ನದ ವ್ಯಾಪಾರಿಗಳು ಅದನ್ನು ಖರೀದಿಸಲು ಸಾಲುಗಟ್ಟಿ ನಿಂತಿದ್ದಾರೆ, ಕೆಲವು ವ್ಯಾಪಾರಿಗಳು ವಜ್ರವನ್ನು ಪರೀಕ್ಷಿಸಿ ಅದು 8 ಕ್ಯಾರೆಟ್ ಎಂದು ತೀರ್ಮಾನಿಸಿ ವಜ್ರ ಖರೀದಿಗೆ ಪೈಪೋಟಿಗೆ ಬಿದ್ದಿದ್ದಾರೆ ಎನ್ನೂ ಅರಿಯದ ಕಾರ್ಮಿಕ ನನಗೆ ಯಾರು ಹೆಚ್ಚು ಮೊತ್ತ ಕೊಟ್ಟರೆ ಮಾತ್ರ ಕೊಡುತ್ತೇನೆ ಎಂದಿರುತ್ತಾನೆ, ಕಡಿಮೆ ಬೆಲೆಗೆ ಕೊಳ್ಳಲು ವರ್ತಕರು ಯತ್ನಿಸಿದ ವ್ಯಾಪಾರಿಗಳು ಏಕಾಏಕಿ ಸುಸ್ತಾಗಿದ್ದಾರೆ ಕೊನೆಗೆ ಪೆರವಲಿಯ ವ್ಯಾಪಾರಿಯೊಬ್ಬ ರೈತನ ವರ್ಜಕ್ಕೆ 5 ಲಕ್ಷ ರೂ.ಗಳನ್ನು ಕೊಟ್ಟು ಖರೀದಿಸಿದ್ದಾನೆ.
ನಂತರದಲ್ಲಿ ಮತ್ತೊಬ್ಬ ರೈತನಿಗೆ ವಜ್ರ ಸಿಕ್ಕಿದೆ ರಾಯಲಸಿಮೆ ಪ್ರಾಂತ್ಯವಾದ ಕರ್ನುಲೂ ಹಾಗು ಅನಂತಪುರ ಜಿಲ್ಲೆಗಳಲ್ಲಿ ಮಳೆಯಾದರೆ ಸ್ಥಳೀಯ ಜನತೆ ವಜ್ರ ಬೇಟೆ ನಡೆಸುತ್ತಾರೆ ಅದೃಷ್ಟ ಎನ್ನುವಂತೆ ರೈತರು, ಕೃಷಿ ಕಾರ್ಮಿಕರು ಮತ್ತು ಸ್ಥಳೀಯರಿಗೆ ಸಿಗುತ್ತವೆ. ಈ ಹಿಂದೆಯೂ ಬೆಲೆಬಾಳುವ ವಜ್ರಗಳು ರೂ. ಕರ್ನೂಲ್ ಜಿಲ್ಲೆಯ ತುಗ್ಗಲಿ, ಜೊನ್ನಗಿರಿ, ಪೆರವಲಿ, ಪಗಿದಿರೈ, ಅಗ್ರಹಾರ, ಹಂಪಾ, ಯಡವಳಿ, ಕೊತ್ತಪಲ್ಲಿ ಮತ್ತು ಮಡ್ಡಿಕೇರಾ ಪ್ರದೇಶಗಳಲ್ಲಿ ಹಾಗು ಅನಂತಪುರ ಜಿಲ್ಲೆಯ ವಜ್ರಕರೂರು ಮಂಡಲದ ರಾಗುಳಪಾಡು, ಪೊಟ್ಟಿಪಾಡು, ಗಂಜಿಕುಂಟಾ, ತತ್ರಕಲ್ಲು, ಕಮಲಪಾಡು, ಗುಲ್ಪಾಳ್ಯಂ ಹಾಗೂ ಎನ್ಎಂಪಿ ತಾಂಡಾಗಳಲ್ಲಿ ವಜ್ರಗಳು ಹೆಚ್ಚಾಗಿ ಸಿಗುತ್ತದೆ.
ಈ ವರ್ಷ ಹಿಂಗಾರು ಹಂಗಾಮಿನ ಮಳೆಯಿಂದಾಗಿ ವಜ್ರಗಳ ಅಭಿವೃದ್ಧಿ ಆರಂಭವಾಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ಮಳೆ ಬೀಳುತ್ತಿದ್ದಂತೆ ಕರ್ನೂಲು, ಅನಂತಪುರ ಜಿಲ್ಲೆಗಳಲ್ಲಿ ವಜ್ರ ಬೇಟೆ ಶುರುವಾಗುತ್ತದೆ ಗುಂಪುಗುಂಪಾಗಿ ಹೋಗುವಂತ ರೈತರು, ಕೃಷಿ ಕಾರ್ಮಿಕತಿಗೆ ಸಿಕ್ಕಿವೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26