ನ್ಯೂಜ್ ಡೆಸ್ಕ್:ಆಂಧ್ರದ ಪ್ರಭಾವಿ ಸಚಿವ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮಗ Andhra Pradesh ಶಿಕ್ಷಣ ಮತ್ತು ಐಟಿ ಇಲಾಖೆ ಮಂತ್ರಿ ನಾರಾಲೋಕೇಶ್ Nara Lokesh ಅವರು ಸಾಮಾಜಿಕ ಆಧ್ಯಾತ್ಮಿಕ ಕೇಂದ್ರವಾದ ನಾಗಂಗಲದ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನದ ಮಠ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿದ್ದರು
ಈ ಸಂದರ್ಭದಲ್ಲಿ ನಾರಾಲೋಕೇಶ್ www.naralokesh.in ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಗದ್ದುಗೆಗೆ ಪುಜೆ ಸಲ್ಲಿಸಿ ಕ್ಷೇತ್ರದ ಕ್ಷೇತ್ರಪಾಲಕ ಶ್ರೀ ಕಾಲಭೈರವೇಶ್ವರ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ನಂತರ ಮಠದ ಪೀಠಾಧಿಪತಿ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳ ಭೇಟಿ ಮಾಡಿದರು ಈ ಸಂದರ್ಭದಲ್ಲಿ ಮಠದ ಸಂಪ್ರದಾಯದಂತೆ ಶ್ರೀಗಳು ಮಂತ್ರಿಯನ್ನು ಗೌರವಿಸಿ ನೆನಪಿನ ಕಾಣಿಕೆ ನೀಡಿ ಆಶೀರ್ವಾದ ಮಾಡಿದರು.ಕೆಲ ಹೊತ್ತು ಮಾತುಕತೆ ನಡೆಸಿದರು.


ಮಠದ ಕಾರ್ಯಚಟುವಟಿಕೆಗಳ ಮಾಹಿತಿ ಪಡೆದ ಸಚಿವ
ಮಠದ ಆಶ್ರಯದಲ್ಲಿ ನಡೆಯುತ್ತಿರುವ ಶಾಲೆಗಳು, ಮೆಡಿಕಲ್ ಕಾಲೇಜು, ಆಸ್ಪತ್ರೆ, ವಿಶ್ವವಿದ್ಯಾಲಯಗಳಿಗೆ ಸಚಿವ ಭೇಟಿ ಇತ್ತು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಕೈಗೊಂಡಿರುವ ವಿವಿಧ ಸೇವಾ, ಆಧ್ಯಾತ್ಮಿಕ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು.
ಬಡ ವಿದ್ಯಾರ್ಥಿಗಳಿಗೆ ಯಾವುದೇ ವೆಚ್ಚವಿಲ್ಲದೆ 6ನೇ ತರಗತಿಯಿಂದ ಇಂಟರ್ಮೀಡಿಯೇಟ್ವರೆಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಶಿಕ್ಷಣ ನೀಡುತ್ತ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಸಂವಿತ್ ಶಾಲೆ ಕುರಿತಾಗಿ ವಿಶೇಷ ಆಸಕ್ತಿ ವಹಿಸಿ ವಿಚಾರಿಸಿದರು. ಈ ಸಂದರ್ಭದಲ್ಲಿ ಮಠದ ಅಧಿಕಾರಿಗಳು ಸಂವಿತ್ ಶಾಲೆ ಮಾಹಿತಿ ಕುರಿತು ಮಾಹಿತಿ ಒದಗಿಸಿ ಇಂಟರ್ಮೀಡಿಯೇಟ್ ನಂತರ ಯಾವ ರಾಜ್ಯದಲ್ಲಿ ಡಿಗ್ರಿ ಓದಲು ಬಯಸಿದರೂ ಮಠ ಆರ್ಥಿಕವಾಗಿ ಸಹಾಯ ಒದಗಿಸುತ್ತದೆ ಎಂಬುದಾಗಿ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ನಾರಾ ಲೋಕೇಶ್ ಆಂಧ್ರಪ್ರದೇಶದಲ್ಲಿಯೂ ಬಡ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಸಂವಿತ್ ಶಾಲೆಯನ್ನು ಆರಂಭಿಸುವಂತೆ ವಿನಂತಿಸಿದರು.ಇದಕ್ಕೆ ನಿರ್ಮಲಾನಂದನಾಥ ಸ್ವಾಮಿಗಳು ಸಮ್ಮತಿ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಪ್ರಸನ್ನನಾಥ ಸ್ವಾಮಿಜಿ, ಚೈತನ್ಯನಾಥಸ್ವಾಮಿಜಿ,ಮತ್ತು ಅಧಿಚುಂಚನಗಿರಿ ಡಾ.ಎ.ಟಿ.ಶಿವರಾಮರೆಡ್ಡಿ ಸೇರಿದಂತೆ ಪಠದ ಪ್ರಮುಖರು ಇದ್ದರು.



