ನ್ಯೂಜ್ ಡೆಸ್ಕ್:ಹಲವು ದಶಕಗಳ ಹಿಂದೆ ಸರ್ವೆ ಕಾರ್ಯ ಮುಗಿಸಿದ್ದ ಬೆಂಗಳೂರು-ಕೋಲಾರ-ಕಡಪ ರೈಲು ಮಾರ್ಗವನ್ನು ಬದಲಾಯಿಸುವ ಮೂಲಕ ಹೊಸ ಮಾರ್ಗದ ರೂಪ ನೀಡಲು ಆಂಧ್ರ ಸರ್ಕಾರ ಮುಂದಾಗಿದೆ.
ಭೂಸ್ವಾಧೀನದ ಸಮಸ್ಯೆ ಮುಂದಿಟ್ಟುಕೊಂಡು, ಹೊಸ ಮಾರ್ಗದ ಪ್ರಸ್ತಾವನೆಯನ್ನು ಮುನ್ನೆಲೆಗೆ ತಂದಿರುವ ಆಂಧ್ರಪ್ರದೇಶ ಸರ್ಕಾರ 255 ಕಿ.ಮೀ ದೂರದ ಮಾರ್ಗಕ್ಕೆ ಪರ್ಯಾಯವಾಗಿ, ಕೇವಲ 75 ಕಿ.ಮೀ ಕಾಮಗಾರಿ ನಿರ್ಮಾಣದೊಂದಿಗೆ ಕಡಪ-ಬೆಂಗಳೂರು ಮಾರ್ಗದ ಯೋಜನೆ ಸಿದ್ಧಪಡಿಸಲಾಗಿರುವ ರೈಲ್ವೆ ಇಲಾಖೆ ಜಾರಿಗೆ ತರಲು ಸದ್ದಿಲ್ಲದೆ ಸಿದ್ಧತೆ ನಡೆಸುತ್ತಿದೆ. ಕಡಪ-ಕೋಲಾರ-ಬೆಂಗಳೂರು ಮಾರ್ಗದ ರೈಲ್ವೆ ಯೋಜನೆಯನ್ನು 2008-09 ರಲ್ಲಿ ಮಂಜೂರು ಮಾಡಿದ್ದು ಅದಕ್ಕೆ ಸರ್ವೆ ಕಾರ್ಯ ಮಾಡಲಾಯಿತು.ಇದರ ಮೂಲ ರೂಪ ಇದದ್ದು ಕಡಪ – ಪೆಂಡ್ಲಿಮರಿ – ರಾಯಚೋಟಿ – ಮದನಪಲ್ಲಿ-ಮುಳಬಾಗಲು-ಬಂಗಾರಪೇಟೆ-ಕೋಲಾರದ ಮೂಲಕ ಹಾದುಹೋಗುತ್ತದೆ. ಇದು ಒಟ್ಟು ದೂರ 255 ಕಿ.ಮೀ. ಇದರಲ್ಲಿ 207 ಕಿ.ಮೀ. ಆಂಧ್ರಪ್ರದೇಶದಲ್ಲಿ ಬರುತ್ತದೆ. ರಾಜ್ಯ ಸರ್ಕಾರ ಇದರ ವೆಚ್ಚದ ಶೇಕಡಾ 50 ರಷ್ಟು ಭರಿಸುತ್ತದೆ. ಆದರೆ, 2017 ರ ವೇಳೆಗೆ, ಕೇವಲ 21.30 ಕಿ.ಮೀ. (ಕಡಪ-ಪೆಂಡ್ಲಿಮರ್ರಿ) ಮಾತ್ರ ಪೂರ್ಣಗೊಂಡಿದ್ದು ಉಳಿದ 1,917 ಎಕರೆ ಭೂಮಿಯನ್ನು ಸ್ವಾಧೀನಪಡಿಸಿ ಕೊಳ್ಳಬೇಕಾಗಿದ್ದು ಭೂಮಿ ಬೆಲೆ ಏರಿಕೆಯಿಂದಾಗಿ, ಇದು ರಾಜ್ಯದ ಮೇಲೆ ದೊಡ್ಡ ಹೊರೆಯಾಗುತ್ತದೆ ಎಂದು ಆಂಧ್ರ ಸರ್ಕಾರ ಹೊಸ ಮಾರ್ಗದತ್ತ ಅಸಕ್ತಿ ತೋರಿಸುತ್ತಿದೆ.

ಇದು ಹೊಸ ಯೋಜನೆಯಂತೆ
ಹಿಂದಿನ ಹಳೆಯ ಯೋಜನೆ ಕಾರ್ಯಗತ ವಾಗದ ಕಾರಣ, ಸರ್ಕಾರ ಪರ್ಯಾಯ ಮಾರ್ಗದತ್ತ ಮುಖ ಮಾಡಿದ್ದು ಕಡಪದಿಂದ ಎರ್ರಗುಂಟ್ಲ ಮತ್ತು ಮುದ್ದನೂರಿಗೆ ರೈಲು ಮಾರ್ಗವಿದೆ. ಸತ್ಯ ಸಾಯಿ ಜಿಲ್ಲೆಯಲ್ಲಿ ಮುದ್ದನೂರಿನಿಂದ ಮುದಿಗುಬ್ಬಕ್ಕೆ ಯಾವುದೇ ರೈಲು ಮಾರ್ಗವಿಲ್ಲ.ಈಗ ಹೊಸದಾಗಿ ಮುದ್ದನೂರು-ಮುದಿಗುಬ್ಬ’ ಲಿಂಕ್ ಮಾರ್ಗದ ನಡುವಿನ 75 ಕಿಲೋಮೀಟರ್. ಈ ಸಣ್ಣ ಮಾರ್ಗವನ್ನು ಜೋಡಿಸಿದರೆ, ಕಡಪದಿಂದ ಬೆಂಗಳೂರಿಗೆ ನೇರವಾಗಿ ಮಾರ್ಗವನ್ನು ಸಂಪರ್ಕಿಸಬಹುದು ಎನ್ನುವುದು ಆಂಧ್ರದ ವಾದ.
ಕಡಪ ಮತ್ತು ಬೆಂಗಳೂರು ರೈಲು ಹೊಸ ಮಾರ್ಗ
ಕಡಪ – ಎರ್ರಗುಂಟ್ಲ – ಮುದ್ದನೂರು ಮಾರ್ಗ ಇದೆ ಮುದ್ದನೂರು ನಿಂದ ಧರ್ಮಾವರಂ ನಡುವೆ ಸುಮಾರು 75 ಕೀ.ಮಿ ಗಳಷ್ಟು ನೂತನ ಮಾರ್ಗ ನಿರ್ಮಾಣವಾದರೆ ಕಡಪಾ-ಬೆಂಗಳೂರು ಬಹುತೇಕ ನಿರ್ಮಾಣವಾದಂತೆ ಎನ್ನುವುದು ಆಂಧ್ರದವರ ವಾದ.
ಕಡಪಾ-ಬೆಂಗಳೂರು ರೈಲು ಮಾರ್ಗ ರೈಲ್ವೆ ಮಂಡಳಿಯೊಂದಿಗೆ ಚರ್ಚೆಗೆ ಸಿದ್ಧ
ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇತ್ತೀಚೆಗೆ ಹೇಳಿರುವಂತೆ ರೈಲ್ವೆ ವಲಯದ ವ್ಯವಸ್ಥಾಪಕರನ್ನು ಭೇಟಿಯಾಗಿದ್ದು ಈ ಸಂದರ್ಭದಲ್ಲಿ, ಮುದ್ದನೂರು-ಮುದಿಗುಬ್ಬ ಮಾರ್ಗದ ಪ್ರಸ್ತಾವನೆಯನ್ನು ಮಂಡಿಸಿದ್ದೇವೆ ಇದು ಹಳೆಯ ಯೋಜನೆಯಡಿಯಲ್ಲಿ ಬರುವುದಿಲ್ಲ ಮತ್ತು ಹೊಸ ಪ್ರಸ್ತಾವನೆಯಾಗಲಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದು ಇನ್ನೂ ದೆಹಲಿಯಲ್ಲಿರುವ ರೈಲ್ವೆ ಮಂಡಳಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಲು ಆಂಧ್ರ ಸಿಎಂ ಮುಂದಾಗಿದ್ದು ಲಿಂಕ್ ಮಾರ್ಗ 75 ಕಿ.ಮೀ. ಮಾರ್ಗಕ್ಕೆ ಅಗತ್ಯವಿರುವ ಭೂಸ್ವಾಧೀನವನ್ನು ತ್ವರಿತವಾಗಿ ಮಾಡುವ ಮೂಲಕ ರಾಜ್ಯ ಸರ್ಕಾರವು ಎಲ್ಲ ರೀತಿಯಲ್ಲೂ ಸಹಕರಿಸುತ್ತದೆ. ಆಂಧ್ರ ಸರ್ಕಾರದ ಅಧಿಕಾರಿಗಳು ಹೇಳುವಂತೆ ಹಳೆಯ ಯೋಜನೆಗೆ ಹೋಲಿಸಿದರೆ ಈ ಹೊಸ ಮಾರ್ಗದ ಮೂಲಕ ವೆಚ್ಚ ಮತ್ತು ಭೂಸ್ವಾಧೀನ ಹೊರೆ ಕಡಿಮೆಯಾಗುತ್ತದಿಯಂತೆ.



