ಮುಲಕಲೆಚೆರುವು:- ಅದೊಂದು ಸಣ್ಣ ಹಳ್ಳಿ. ಮುಂಜಾನೆ ಹೊತ್ತಿ ಉರಿಯುತ್ತಿರುವ ಬೆಂಕಿ ಜ್ವಾಲೆಯೊಂದಿಗೆ ಯುವತಿಯೊಬ್ಬಳು ನರಳುತ್ತ ಮನೆಯೊಂದರಿಂದ ಹೋರ ಬರುತ್ತಾಳೆ ಅದೇ ಮನೆಯಲ್ಲಿ ಮೂರು ನಾಯಿಗಳು, ಬೆಕ್ಕು ಮತ್ತು 30 ಕೋಳಿಗಳು ವಿಷಪ್ರಾಷನದಿಂದ ಸಾವನ್ನಪ್ಪಿವೆ. ಈ ಮನ ಕಲಕುವ ಘಟನೆ ನಡೆದಿರುವುದು ಚಿಂತಾಮಣಿ ಮತ್ತು ಶ್ರೀನಿವಾಸಪುರ ತಾಲೂಕಿನ ಗಡಿಯಾಚಗಿನ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮುಲಕಲೆಚೇರುವು ಮಂಡಲದ ಸೋಮಪಲ್ಲೆ ಪಂಚಾಯಿತಿ ವ್ಯಾಪ್ತಿಯ ಗುಟ್ಟುಕಿಂದಪಲ್ಲೆ ಗ್ರಾಮದಲ್ಲಿ,ಎಲ್ಲವೂ ಸರಿಯಾಗಿದ್ದರೆ ಈ ತಿಂಗಳ 25 ರಂದು ಮದುವೆಯಾಗಿ ಮತ್ತೊಬ್ಬರ ಜೀವನದಲ್ಲಿ ಪ್ರವೇಶಿಸಬೇಕಾದ ಮಧುಮಗಳು ಸುಮತಿ ಜೀವ ತೆತ್ತಿದ್ದಾಳೆ. ಸುಮತಿ ಬೆರೋಬ್ಬನನ್ನು ಮದುವೆಯಾಗುತ್ತಿದ್ದಾನೆ ಎಂದು ಸುಮತಿ ಸ್ವಂತ ಅಕ್ಕನ ಗಂಡ ಭಾವ ವೆಂಕಟೇಶ್ ಅಸೂಯೆಯಿಂದ ಕೃತ್ಯ ಎಸಗಿದ್ದು ಆಕೆ ಮಲಗಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುತ್ತಾನೆ ಮನೆಯಲ್ಲಿ ಜಾನುವಾರಗಳಿಗೆ ವಿಷವಿಕ್ಕಿದ್ದಾನೆ ಇದರಿಂದ ಮದುವೆ ಸಂಭ್ರಮದಲ್ಲಿರಬೇಕಾದ ಸುಮತಿ ಕುಟುಂಬ ದುರಂತದಲ್ಲಿ ಮುಳುಗಿದೆ. ಈ ಘಟನೆಯಿಂದ ಒಮ್ಮೆಲೆ ಗ್ರಾಮಸ್ಥರು ಭಯಭೀತರಾಗಿದ್ದು. ಸ್ಥಳೀಯರು ಪೂರ್ಣ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಒತ್ತಾಯಿಸಿರುತ್ತಾರೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7


