ಶ್ರೀನಿವಾಸಪುರ:ಮೊನ್ನೆಯಷ್ಟೆ ರಾಯಲ್ಪಾಡು ಪೋಲಿಸ್ ಠಾಣೆ ವ್ಯಾಪ್ತಿಯ ಸುಣ್ ಕಲ್ಲು ಅರಣ್ಯ ಪ್ರದೇಶ ಬಳಿ ಬೊಲೊರೋ ಜೀಪಲ್ಲಿ ಸುಮಾರು 40 ವರ್ಷದ ವ್ಯಕ್ತಿಯೊಬ್ಬನ ಶವ ಸಿಕ್ಕಿದ್ದು ಈ ಬಗ್ಗೆ ರಾಯಲ್ಪಾಡು ಪೋಲಿಸರು ಅದರ ಜಾಡು ಹಿಡಿದು ಹೋದಾಗ ಕೊಲೆಯ ರಹಸ್ಯವೊಂದು ಬಯಲಾಗಿದೆ.
ಕಾರಿನಲ್ಲಿ ಪತ್ತೆಯಾದ ಮೃತದೇಹ ಪೊಲೀಸರು ಪರಿಶೀಲನೆ ಮಾಡಿದಾಗ ಅಚ್ಚರಿ ವಿಷಯ ಬೆಳಕಿಗೆ ಬಂದಿದೆ ಮೃತ ವ್ಯಕ್ತಿಯ ಕೈ ಕಾಲುಗಳನ್ನು ವೈಯರ್ ನಿಂದ ಕಟ್ಟಿದ್ದು ಗಮನಿಸಿದರೆ ದೂರದಲ್ಲಿ ಎಲ್ಲೋ ಕೊಂದು ಕಾರಿನಲ್ಲಿ ಮೃತದೇಹ ಇಟ್ಟು ಪರಾರಿಯಾದ ಬಗ್ಗೆ ಪೊಲೀಸರು ಶಂಕಿಸಿದ್ದರು ಅದರಂತೆ ಮೃತದೇಹ 40 ವರ್ಷದ ವೆಂಕಟರವಣ ಎಂಬುದು ಎಂದು ಪತ್ತೆ ಹಚ್ಚಿದ್ದಾರೆ.
ಸುಣ್ ಕಲ್ಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಎಸ್. ಗೊಲ್ಲಪಲ್ಲಿ ನಿವಾಸಿ ವೆಂಕಟರವಣ ಎಂದು ಗುರುತಿಸಿದ್ದು ಈತ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಇತನದು ಮೂಲತಃ ಮುಳಬಾಗಿಲು ತಾಲೂಕು ಬೆಟ್ಟೆವಾರಿಪಲ್ಲಿ ನಿವಾಸಿ ಸುಮಾರು 20 ವರ್ಷಗಳ ಹಿಂದೆ ಎಸ್. ಗೊಲ್ಲಪಲ್ಲಿ ಗ್ರಾಮದ ಕದಿರಮ್ಮ ಎಂಬಾಕೆಯನ್ನು ವಿವಾಹವಾಗಿ ಹೆಂಡತಿ ಮನೆಯಲ್ಲಿ ವಾಸಕ್ಕೆ ಬಂದು ಎಸ್. ಗೊಲ್ಲಪಲ್ಲಿ ಗ್ರಾಮದಲ್ಲಿಯೆ ಸಂಸಾರ ಇದ್ದ, ಮುಂದೆ ಇವರಿಗೆ ಎರಡು ಗಂಡು ಮಕ್ಕಳಾಗುತ್ತದೆ ಎಲ್ಲವೂ ಚನ್ನಾಗಿಯೇ ಇತ್ತು ಆದರೆ ಕಳೆದ 6 ವರ್ಷದಿಂದ ದಂಪತಿ ನಡುವೆ ಪ್ರತಿ ನಿತ್ಯ ಜಗಳ ಮನಸ್ತಾಪ ಜಟಾಪಟಿ ನಡೆಯುತಿತ್ತು ಇದರಿಂದ ಬೆಸೆತ್ತ ಗಂಡ ವೆಂಕಟರವಣ ನೊಂದು ಇದಕ್ಕಾಗಿ ಊರಿನವರ ಬಳಿ ಕಾಡಿಬೇಡಿ ಹೆಂಡತಿಯೊಂದಿಗೆ ರಾಜಿ ಪಂಚಾಯ್ತಿ ನಡೆಸಿ ಬುದ್ದಿ ಹೇಳಿಸಿದ್ದಾನೆ ಆದರೂ ಪತ್ನಿ ಕದಿರಮ್ಮ ಗಂಡನಿಗೆ ಕ್ಯಾರೆ ಎನ್ನಲಿಲ್ಲ ಅನ್ಯೋನ್ಯತೆ ಕಾಣದಂತಾಗಿದೆ ಇದು ಮುಂದೆ ಗಂಡ ವೆಂಕಟರಮಣ ಮದ್ಯಕ್ಕೆ ದಾಸನಾಗಿದ್ದಾನೆ ಹಗಲು ಕೂಲಿನಾಲಿ ಮಾಡುವುದು ಸಂಜೆಹೊತ್ತು ಮದ್ಯ ಸೇವಿಸಿಕೊಂಡು ದಿನದೂಡುತ್ತಿದ್ದ.
ಅಕ್ರಮ ಸಂಭಂದ ಕೊಲೆಗೆ ಕಾರಣವಾಯಿತ?
ಇತ್ತ ವೆಂಕಟರವಣ ಕೊಲೆಯಾಗಿದ್ದಾನೆ ಇದು ಇನ್ನಷ್ಟು ಕೂತಹಲಕ್ಕೆ ಕಾರಣವಾಗಿದೆ ಹತ್ಯೆ ಹಿಂದೆ ಪತ್ನಿ ಕದಿರಮ್ಮಳ ಕೈವಾಡ ಇದಿಯಾ ಅಕೆಯ ಅಕ್ರಮ ಸಂಬಂದಕ್ಕೆ ವೆಂಕಟರವಣ ಅಡ್ಡಿಯಾಗಿದ್ದನ ಎನ್ನುವ ಪ್ರಶ್ನೆ ಗ್ರಾಮಸ್ಥರನ್ನು ಕಾಡಿತ್ತು,ಇದನ್ನು ಹುಡುಕಿ ಹೋರಟ ಪೋಲಿಸರಿಗೆ ಸಿಕ್ಕಿದ್ದು ವೆಂಕಟರಮಣನ ಪತ್ನಿ ಕದಿರಮ್ಮನಿಗೆ ಎಸ್. ಗೊಲ್ಲಪಲ್ಲಿ ಗ್ರಾಮದ ವೇಣು ಎಂಬಾತನ ಜೊತೆಗೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದು ಇದಕ್ಕಾಗಿ ಗಂಡನೊಂದಿಗೆ ಜಗಳ ಕಾದು ವೇಣುನೊಂದಿಗೆ ಸುಖ ಪಡೆಯುತ್ತಿದ್ದ ವಿಷಯ ಹೊರ ಬಿದ್ದಿದೆ.

ಕದಿರಮ್ಮನ ಮನ ಗೆದ್ದು ಸುಖ ಕೊಡುತ್ತಿದ್ದ ವೇಣು ಪೈನಾನ್ಸ್ ಕಂಪನಿಯೊಂದರ ಉದ್ಯೋಗಿ ರೋಮಿಯೋಗೆ ಒಂದೂವರೆ ತಿಂಗಳಲ್ಲಿ ಮಾವನ ಮಗಳನ್ನೆ ವೇಣು ಮದುವೆಯಾಗುವ ಬಗ್ಗೆ ಮಾತುಕತೆ ಆಗಿತ್ತು ಆದರೂ ಕದಿರಮ್ಮನೊಂದಿಗೆ ಪ್ರೇಮ್ ಕಹಾನಿ ಮುಂದುವರೆದಿತ್ತು ಮೂರು ತಿಂಗಳ ಹಿಂದೆ ಈ ಜೋಡಿ ಓಡಿಹೋಗಿದ್ದು ವೆಂಕಟರಮಣ ಪತ್ನಿಯ ಬಳಿ ಅಂಗಲಾಚಿ ಮಕ್ಕಳಿಗಾಗಿ ಮನೆಗೆ ಬರುವಂತೆ ಅಲವತ್ತುಕೊಂಡಿದ್ದನಂತೆ ಅದಕ್ಕಾಗಿ ಮನೆಗೆ ಬಂದಿದ್ದ ಕದಿರಮ್ಮ, ಪ್ರಿಯಕರನ ಜೊತೆ ಲವ್ವಿಡವ್ವಿ ಮುಂದುವರೆಸಿದ್ದಳಂತೆ ಎಂದು ತನ್ನ ಆಪ್ತರ ಬಳಿ ವೆಂಕಟರಮಣ ಹಂಚಿಕೊಂಡಿದ್ದಾನೆಂದು ಹೇಳಲಾಗುತ್ತಿದೆ. ಕುಡಿದಾಗ ಪತ್ನಿಯ ಅಕ್ರಮ ಸಂಬಂದ ಪ್ರಸ್ತಾಪಿಸಿ, ನಿಂದಿಸುತ್ತಿದ್ದ ಎನ್ನಲಾಗಿದ್ದು, ಇದರಿಂದ ಕೋಪಗೊಂಡ ಪತ್ನಿ ಕದಿರಮ್ಮ ಹಾಗು ಪ್ರಿಯಕರ ವೇಣು, ಇಬ್ಬರು ಸೇರಿ ಕೊಲೆಗೈದಿರುವ ಬಗ್ಗೆ ಪೊಲೀಸ್ ವಿಚಾರಣೆಯಲ್ಲಿ ಕದಿರಮ್ಮ ಬಾಯಿಬಿಟ್ಟಿರುವುದಾಗಿ ಹೇಳಲಾಗಿದೆ ವೇಣು ವಿರುದ್ಧವೂ ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.

ಕೊಲೆ ಹೇಗೆ ಬಯಲಾಯಿತು?
ಲವರ್ ಬಾಯ್ ವೇಣು ತನ್ನ ಆಪ್ತನೊಬ್ಬನ ಸಹಕಾರ ಪಡೆದು ಮೂವರು ಸೇರಿ ವೆಂಕಟರವಣ ನನ್ನು ಕೊಲೆಗೈದಿದ್ದು ಕೈಕಾಲು ಕಟ್ಟಿಹಾಕಿ ಮೃತ ದೇಹವನ್ನು ಸುಟ್ಟು ಹಾಕಲು ಪ್ಲಾನ್ ಮಾಡಿ,ಗ್ರಾಮದ ವಿನೋದ್ ಎಂಬುವರ ಬಳಿ,ಆಸ್ಪತ್ರೆಗೆ ಹೋಗಬೇಕೆಂದು ಸುಳ್ಳು ಹೇಳಿ ಬೊಲೆರೊ ವಾಹನ ಪಡೆದು ಕಾರಿನ ನಂಬರ್ ಪ್ಲೇಟ್ ಮೇಲೆ ಕಪ್ಪು ಬಣ್ಣದ ಟೇಪ್ ಹಾಕಿ, ನಂಬರ್ ಗುರ್ತು ಕಾಣದಂತೆ ಮಾಡಿದ್ದಾನೆ, ಬಳಿಕ ಪೆಟ್ರೋಲ್ ಕ್ಯಾನ್ ಸಮೇತ, ಗ್ರಾಮದಿಂದ ಸೀದಾ ಚಿಂತಾಮಣಿ ಹಾಗು ಶಿಡ್ಲಘಟ್ಟ ತಾಲೂಕಿನ ಸುತ್ತಮುತ್ತ ಕಾಡು ಅಲೆದಿದ್ದು ಎಲ್ಲಿಯೂ ಅವಕಾಶ ಸಿಗದಿದ್ದಾಗ ಮತ್ತೆ ವಾಪಸ್ಸು ಸುಣ್ ಕಲ್ಲು ಅರಣ್ಯ ಪ್ರದೇಶದ ಕಡೆಗೆ ಬಂದಿದ್ದಾರೆ, ಅಲ್ಲಿ ಮೃತದೇಹದ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕೋ ಪ್ಲಾನ್ ಮಾಡಿದ್ದನಾದರೂ, ಅದೆ ಸಮಯಕ್ಕೆ ರಾಯಲ್ಪಾಡು ಪೊಲೀಸರ ಗಸ್ತು ವಾಹನ ಬರುತ್ತಿದ್ದನ್ನು ಗಮನಿಸಿ,ರಸ್ತೆ ಬದಿಯಲ್ಲೆ ವಾಹನ ಬಿಟ್ಟು ಪರಾರಿಯಾಗಿದ್ದಾನೆ,ಅನಾಮಧೇಯವಾಗಿ ನಿಂತಿದ್ದ ವಾಹನವನ್ನು ಪೊಲೀಸರು ಪರಶೀಲನೆ ಮಾಡಿದಾಗ, ಕಾರಿನ ಡಿಕ್ಕಿಯಲ್ಲಿ ಕೈ ಕಾಲು ಕಟ್ಟಿ ಹಾಕಿದ್ದ ಸ್ತಿತಿಯಲ್ಲಿ ಮೃತದೇಹ ಪತ್ತೆಯಾಗಿದೆ, ಕಾರಿನ ನಂಬರ್ ಆಧರಿಸಿ ಮಾಲೀಕನನ್ನ ಕರೆಸಿ ವಿಚಾರಣೆ ನಡೆಸಿದಾಗ, ವೇಣು ಕಾರು ಪಡೆದು ಕೊಂಡು ಹೊಗಿರೊದಾಗಿ ಕಾರು ಮಾಲೀಕ ವಿನೋದ್ ಹೇಳಿದ್ದಾರೆ, ಇದರಿಂದ ವೆಂಕಟರಮಣನ ಕೊಲೆ ಆರೋಪ ಬಯಲಾಗಿದೆ.
ಘಟನ ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್, ಡಿವೈಎಸ್ಪಿ ಇತರೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುದ್ಧಿ ಸಹಕಾರ: ನಂಬಿಹಳ್ಳಿ ಸುರೇಶ್



