ನ್ಯೂಜ್ ಡೆಸ್ಕ್: ಹೆತ್ತ ತಾಯಿಯನ್ನು ಮಗನೇ ಕೊಂದಿದ್ದಾನೆ, ಆಂಧ್ರದ ಅನ್ನಮಯ್ಯ ಜಿಲ್ಲೆ ರಾಯಚೂಟಿ ಮಂಡಲ ಪೆದ್ದಮಂಡೆಂ ಎಸ್ಐ ಪಿ.ವಿ.ರಮಣ ಮಂಗಳವಾರ ತಿಳಿಸಿರುವ ಮಾಹಿತಿಯಂತೆ, ಸಿ.ಗೊಲ್ಲಪಲ್ಲಿಯಲ್ಲಿ ವಾಸವಿರುವ ಓಬುಳಮ್ಮ (72) ಅವರು ಮಗ ಓಬುಲೇಸುಗೆ ಪೆನ್ಷನ್ ಹಣ ನೀಡದ ವಿಚಾರವಾಗಿ ಈ ತಿಂಗಳ 24 ರಂದು ತಾಯಿ ಮಗನ ನಡುವೆ ಜಗಳ ಆಗಿದೆ ಈ ಸಂದರ್ಭದಲ್ಲಿ ಮಗ ಓಬುಲೇಸು ತನ್ನ ತಾಯಿಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಇದರಿಂದ ತೀವ್ರವಾಗಿ ಗಾಯಗೊಂಡು ನಿತ್ರಾಣವಾಗಿ ಬಿದ್ದ ಅಕೆಯನ್ನು ರಾಯಚೋಟಿಯಲ್ಲಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರಾದರೂ ಆಕೆಯ ಸ್ಥಿತಿ ಹದಗೆಟ್ಟು ಸೋಮವಾರ ಮಧ್ಯರಾತ್ರಿ ಓಬುಳಮ್ಮ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮಗ ಓಬುಲೀಸನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27