ಚಿಂತಾಮಣಿ:ಚಿಂತಾಮಣಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸರ್ಕಾರಿ ನೌಕರರ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ರಾಜ್ಯಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿಶಿವಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡ ಭಾಷೆ ಸಮೃದ್ಧವಾದ ಭಾಷೆ ಸಾಹಿತ್ಯದಲ್ಲಿ ಆಳವಾಗಿ ಬೇರೂರಿದೆ,ತಾಲೂಕು ಕಸಾಪ ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕನ್ನಡ ಕಟ್ಟುವ ಕೆಲಸ ಮಾಡುವಂತೆ ಕರೆ ಇತ್ತರು.
ಚಿಕ್ಕಬಳ್ಳಾಪುರ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೋಡಿರಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಚಿಂತಾಮಣಿ ಸಾಹಿತ್ಯ ಲೋಕಕ್ಕೆ ಉತ್ತಮ ಸಾಹಿತಿಗಳು,ಬರಹಗಾರನ್ನು ನೀಡಿದೆ ಇದು ಹೀಗೆ ಮುಂದುವರಿಯಬೇಕು ಇದಕ್ಕಾಗಿ ಇಲ್ಲಿ ಇನ್ನೂ ಹೆಚ್ಚಿನ ರಿತಿಯಲ್ಲಿ ಕನ್ನಡದ ಕೆಲಸಗಳು ಆಗಬೇಕು ಇದಕ್ಕೆ ಶೈಕ್ಷಣಿಕ ವ್ಯವಸ್ಥೆಯ ಸಹಕಾರ ಪಡೆದು ಉತ್ತಮ ಕನ್ನಡ ಸೇವೆಯನ್ನು ನಾವೆಲ್ಲರೂ ಕೂಡಿ ಮಾಡೊಣ ಎಂದರು.
ನಿಕಟ ಪೂರ್ವ ಅಧ್ಯಕ್ಷ ಎಂ ಎ ಪ್ರಕಾಶ್ ನೂತನ ಅಧ್ಯಕ್ಷ ಶ್ರೀನಿವಾಸನ್.ಎನ್.ವಿ ಅವರಿಗೆ ಕಸಾಪ ಧ್ವಜ ಹಸ್ತಾಂತರ ಮಾಡಿ ಶುಭ ಹಾರೈಸಿದರು.ಕನ್ನಡಾಂಬೆಯ ಸೇವೆಯನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಮಾಡೋಣ ಇದಕ್ಕೆ ನನ್ನ ಸಹಕಾರ ಸದಾಕಾಲ ಇರುತ್ತದೆ ಎಂದರು.
ಧ್ವಜ ಸ್ವೀಕರಿಸಿ ಮಾತನಾಡಿದ ಕಸಾಪ ನೂತನ ಅಧ್ಯಕ್ಷ ಶ್ರೀನಿವಾಸನ್ ಕನ್ನಡದ ಸೇವೆ ಮಾಡಲು ಸಿಕ್ಕ ಅವಕಾಶವನ್ನು ಬಳಸಿಕೊಂಡು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಕನ್ನಡ ಕಾರ್ಯಗಳನ್ನು ಹಮ್ಮಿಕೊಂಡು ಭಾಷೆ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.ಚಿಂತಾಮಣಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವಂತೆ ಕಸಾಪ ಜಿಲ್ಲಾಧ್ಯಕ್ಷರಿಗೆ ಮನವಿ ಮಾಡಿದರು.
ಚಿಂತಾಮಣಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಮುನಿರೆಡ್ಡಿ ಮಾತನಾಡಿ ತಾಲ್ಲೂಕು ಕಸಾಪಗೆ ಪೂರ್ಣ ಸಹಕಾರ. ನೀಡುವುದಾಗಿ ತಿಳಿಸಿದರು
ಕಾರ್ಯಕ್ರಮದಲ್ಲಿ ಕುಮಾರಿ ಜಾನ್ಹವಿ ಯಾದವ್ ಸ್ವಾಗತ ನೃತ್ಯ ಮಾಡಿದರು,ಕಾಗತಿ ವಿ ವೆಂಟಟರತ್ನಂ ಪ್ರಾಸ್ತಾವಿಕ ನುಡಿಗಳನ್ನು ಆಡಿದರು,ದಾಕ್ಷಾಯಣಿ ಭಜನ ಮಂಡಳಿಯವರಿಂದ ಕನ್ನಡ ಗೀತೆಗಳ ಗಾಯನ ನಡೆಯಿತು.ಲೀಲಾ ಲಕ್ಷ್ಮೀನಾರಾಯಣ್ ಪ್ರಾರ್ಥನೆ ಮಾಡಿದರು.ಎಂ ಎಸ್ ಶ್ರೀನಿವಾಸನಪ್ಪ ನಿರೂಪಿಸಿ ಪಿ ಅರ್ ವೆಂಕಟೇಶ್ ಸ್ವಾಗತಿಸಿ ಬೇಟರಾಯಪ್ಪ ವಂದಿಸಿದರು.ಈ ಸಂದರ್ಭದಲ್ಲಿ ಮುನಿಕೃಷ್ಣಪ್ಪ, ಕೆ ಎನ್ ರಮಣಾರೆಡ್ಡಿ,ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅರ್ ಮಂಜುನಾಥ್,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅರ್ ಅಶೋಕ್ ಕುಮಾರ್ ,ಕೆ ರವಣಪ್ಪ, ಜಿಲ್ಲಾ ಕಸಾಪದ ಪದಾಧಿಕಾರಿಗಳಾದ ಮುನಿನಾರಾಯಣಪ್ಪ, ಶಿಕ್ಷಕ ಚಲಪತಿಗೌಡ,ನಾರಾಯಣಸ್ವಾಮಿ, ವೆಂಕಟಾಚಲಪತಿ ಕುಂಟಿಗಡ್ಡೆ ಎಂ ಲಕ್ಷಣ್ ಮುಂತಾದವರು ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27