ಕೋಲಾರ:ಕಾಲೇಜು ಹುಡುಗರು ಪರಸ್ಪರ ಬೈದಾಡುಕೊಳ್ಳುವುದು ಹೊಡೆದಾಡುವುದು ಸಾಮನ್ಯ ಇದನ್ನು ಎಲ್ಲರೂ ಕೇಳಿರುತ್ತಾರೆ ನೋಡಿರುತ್ತಾರೆ ಆದರೆ ಇಬ್ಬರು ಕಾಲೇಜು ಉಪನ್ಯಾಸಕರು ಕಾಲೇಜು ಆವರಣದಲ್ಲೇ ಕೈಕೈ ಮಿಲಾಯಿಸಿಕೊಂಡು ಬಡಿದಾಡಿಕೊಂಡಿರುವ ದಾರುಣ ಘಟನೆ ಕೋಲಾರ ನಗರದ ಸರ್ಕಾರಿ ಜೂನಿಯರ್ ಕಾಲೇಜು ನಡೆದಿದೆ.
ಇಬ್ಬರು ಉಪನ್ಯಾಸಕರು ಒಂದು ಕಾಲದಲ್ಲಿ ಆಪ್ತ ಸ್ನೇಹಿತರು ಕನ್ನಡ ಸೇವೆಗೆ ಟೊಂಕಕಟ್ಟಿ ನಿಂತು ಸೇವೆ ಮಾಡಿದವರು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇಬ್ಬರು ಅಧ್ಯಕ್ಷರಾಗಿದ್ದವರು, ಈಗ ಅದೆ ವಿಚಾರದಲ್ಲಿ ವೈಯುಕ್ತಿಕ ದ್ವೇಷ ಬೆಳೆಸಿಕೊಂಡು ಇಬ್ಬರು ಶತೃಗಳಾಗಿದ್ದಾರೆ ಅವರೆ ನಾಗಾನಂದ ಕೆಂಪರಾಜ್ ಮತ್ತು ಜೆ.ಜಿ.ನಾಗರಾಜ್, ಇವರು ಹಳೇಯ ದ್ವೇಶಕ್ಕೆ ಜೀವ ಕೊಟ್ಟು ಮಂಗಳವಾರ ಎಲ್ಲರೂ ನೋಡನೊಡುತ್ತಿದ್ದಂತೆ ಹೋಡೆದಾಡಿಕೊಂಡು ಸಣ್ಣಪುಟ್ಟ ಗಾಯಮಾಡಿಕೊಂಡಿರುವ ಉಪನ್ಯಾಸಕರು ಕೋಲಾರದ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಜೆ.ಜೆ.ನಾಗರಾಜ್ ಕೋಲಾರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಮತ್ತೊಬ್ಬರು ನಾಗನಂದ ಕೆಂಪರಾಜ್ ಅದೇ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕ ಇಬ್ಬರು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾಗಿದ್ದವರು.
ಮಂಗಳವಾರ ಎಂದಿನಂತೆ ಕಾಲೇಜಿಗೆ ಹಾಜರಾದ ನಾಗಾನಂದ ಕೆಂಪರಾಜ್ ಹಾಗೂ ಜೆ.ಜಿ.ನಾಗರಾಜ್ ಅವರು ಪರಸ್ಪರ ಎದುರಾಗಿದ್ದಾರೆ. ಸ್ವಲ್ಪ ಹೊತ್ತಿಗೆ ಕಚೇರಿಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಕೈಕೈ ಮಿಲಾಯಿಸಿಕೊಂಡಿದ್ದಾರೆ ಇದು ಕಾಲೇಜು ಪ್ರಾಂಶುಪಾಲ ಹಾಗು ಇತರೆ ಉಪನ್ಯಾಸಕರ ಸಮ್ಮುಖದಲ್ಲೇ ನಡೆದಿದೆ ಇವರ ನಡುವೆ ಕೋಲಾರ ಸಾಹಿತ್ಯ ಪರಿಷತ್ ಚುನಾವಣೆಯ ಸಂದರ್ಭದಿಂದಲೂ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ವೈರತ್ವ ಬೆಳೆದು ಮಂಗಳವಾರ ಸ್ಪೋಟಗೋಂಡಿದೆ ಮಂಗಳವಾರ ಇಬ್ಬರ ನಡುವಿನ ನಡೆದಂತ ಮಾತುಗಳ ವಿಡಿಯೋ ವೈರಲ್ ಆಗಿದೆ.
ಜಾಲತಾಣಗಳಲ್ಲಿ ನನ್ನ ಮಾನ ಹರಣ ನಾಗರಾಜ್ ಆರೋಪ
ಕಳೆದ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸೋತಿರುವ ವ್ಯಕ್ತಿ ಅದಕ್ಕೆ ನಾನೆ ಕಾರಣ ಎಂದು ನನ್ನ ವಿರುದ್ದ ಅಸಂಬದ್ಧ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದರು ಈ ಬಗ್ಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಘಟನೆ ಸಂಭವಿಸಿದಾಗ ಯಾರೂ ಸಹಾಯಕ್ಕೆ ಬರಲಿಲ್ಲ ಎಂದ ಅವರು, `ನನಗೆ ಏನಾದರು ಆದರೆ ನಾಗಾನಂದನೇ ಕಾರಣ’ ಎಂದು ನಾಗರಾಜ್ ಆರೋಪಿಸಿದರು.
ನನ್ನ ವೈಯುಕ್ತಿಕ ಏಳ್ಗೆ ಸಹಿಸದೆ ಕೃತ್ಯ ನಾಗಾನಂದ್
ಸಾಹಿತ್ಯ ಪರಿಷತ್ ಚುನಾವಣೆ ಸೋಲಿಗೆ ನಾಗರಾಜ್ ಆಡಿರುವ ಮಾತುಗಳೇ ಕಾರಣ. ರೋಟರಿ ಸಂಸ್ಥೆಯ ಅಧ್ಯಕ್ಷನಾಗಿ ಆಯ್ಕೆಯಾಗಿರುವುದನ್ನು ಸಹಿಸಿಕೊಳ್ಳಲಾಗದೆ ಈ ರೀತಿ ಮಾಡಿದ್ದಾರೆ ಎಂದು ನಾಗಾನಂದ ಕೆಂಪರಾಜ್ ಆರೋಪಿಸಿದರು. ಕಾಲೇಜಿಗೆ ಬಂದು ಹಾಜರಾತಿಗೆ ಸಹಿ ಹಾಕುತ್ತಿದ್ದಾಗ ಬ್ಯಾಗ್ ತೆಗೆದು ನನ್ನ ಕಡೆ ಬಿಸಾಡಿದರು, ನಾನು ಸುಮ್ಮನಿದ್ದೆ. ಬೇಕಾಗಿಯೇ ಅಡ್ಡಿಪಡಿಸಿದಾಗ ದೂರ ಹೋಗಿ ಎಂದೆ, ಪುನಃ ಹೊಡೆದು ತಳ್ಳಿದರು ಎಂದು ಆರೋಪಿಸಿರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Wednesday, April 30