ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿ ಇತ್ತಿಚಿಗೆ ಕಳ್ಳತನ ಹೆಚ್ಚುತ್ತಿದ್ದು ಇದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ,ನಿಲ್ಲಿಸಿದ್ದ ಜಾಗದಲ್ಲೆ ದ್ವಿಚಕ್ರವಾಹನ ಕ್ಷ್ಣಣಾರ್ಧದಲ್ಲಿ ಮಾಯವಾಗುತ್ತಿವೆ.
ಪಟ್ಟಣದ ವಿವೇಕಾನಂದ ವೃತ್ತದ ಬಳಿ ಇರುವ ಮೊಟ್ಟೆ ಅಂಗಡಿ ಮಾಲಿಕ ಮೂತ್ರ ವಿಸರ್ಜನೆಗೆ ಹೋಗಿದ್ದ ಸಮಯದಲ್ಲಿ ಯುವಕನೊರ್ವ ಅಂಗಡಿಗೆ ನುಗ್ಗಿ ಕ್ಯಾಷ್ ಬಾಕ್ಸ್ ನಲ್ಲಿದ್ದ ನಗದು ಮೂರು ಮೊಬೈಲ್ ಗಳನ್ನು ಕದ್ದುಕೊಂಡು ಹೋಗುತ್ತಿದ್ದಾನೆ ಅದೆ ಸಮಯಕ್ಕೆ ಅಂಗಡಿ ಮಾಲಿಕ ನಾಗರಾಜ್ ಬಂದಿದ್ದು ಕದ್ದು ಓಡಿ ಹೋಗುತ್ತಿದ್ದ ಯುವಕನನ್ನು ಸಾರ್ವಜನಿಕರ ಸಹಕಾರದೊಂದಿಗೆ ಅಟ್ಟಾಡಿಸಿಕೊಂಡು ಹೋಗಿ ಅಜಾದ ರಸ್ತೆಯ ಗಲ್ಲಿಯಲ್ಲಿ ಹಿಡಿದು ಮೊಬೈಲ್ ಮತ್ತು ನಗದು ವಾಪಸ್ಸು ಪಡೆದಿರುತ್ತಾನೆ.ತೀರಾ ಇತ್ತಿಚಿಗೆ ಇಂದಿರಾಭವನ್ ವೃತ್ತದಲ್ಲಿರುವ ಇಂತಹುದೆ ಘಟನೆ ನಡೆದಿದ್ದು ಕೃಷ್ಣಮೂರ್ತಿ ಎಂಬವರ ದಿನಸಿ ಅಂಗಡಿಯ ಕ್ಯಾಷ್ ಬಾಕ್ಸ್ ನಲ್ಲಿದ್ದ ಹತ್ತು ಸಾವಿರ ನಗದು ಹಾಡು ಹಗಲೆ ಕಳ್ಳತನ ಆಗಿರುವ ಬಗ್ಗೆ ಸಾರ್ವಜನಿಕರು ಹೇಳುತ್ತಾರೆ.
ಗುರುವಾರ ಮಧ್ಯಾಹ್ನ ಎಂ.ಜಿ.ರಸ್ತೆಯ ಸಂಗೀತಾ ಚಿತ್ರಮಂದಿರ ಬಳಿ ಇರುವಂತ ತೆಂಗಿನಕಾಯಿ ಹೊಲ್ ಸೇಲ್ ಅಂಗಡಿ ಮುಂಬಾಗ ನಿಲ್ಲಿಸಿದ್ದ ಅಕ್ಟಿವ್ ಹೊಂಡಾ ಸ್ಕೂಟರ್ ಕ್ಷಣಾರ್ದದಲ್ಲಿ ಕಳ್ಳತನವಾಗಿದ್ದಾಗಿದೆ ಎಂದು ವಾಹನ ಮಾಲಿಕ ವೇಣು ಶ್ರೀನಿವಾಸಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜಾತ್ರೆಯಲ್ಲಿ ಕಳ್ಳರ ಕೈಚಳಕ
ತಾಲೂಕಿನ ದ್ವಾರಸಂದ್ರ ಜಾತ್ರೆಯಲ್ಲಿ ಜನಸಂದಣಿ ನಡುವೆ ಕಳ್ಳರು ಕೈ ಚಳಕ ತೊರಿಸಿದ್ದು ಇಬ್ಬರು ಮಹಿಳೆಯರು ಸರ ಕಳೆದುಕೊಂಡಿದ್ದಾರೆ,ಒರ್ವ ಮಹಿಳೆ ದರ್ಶನಕ್ಕೆ ದೇವಾಲಯದ ಬಳಿ ನಿಂತಿದ್ದಾಗ ಸರ ಕಳ್ಳತನವಾಗಿದ್ದರೆ,ಮತ್ತೊಬ್ಬ ಮಹಿಳೆ ಜಾತ್ರೆಯಲ್ಲಿ ತಿಂಡಿಗಳನ್ನು ಕೊಳ್ಳುತ್ತಿದ್ದಾಗ ಸರ ಕಳ್ಳತನವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27