ಶ್ರೀನಿವಾಸಪುರ:ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಸವಾರರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಕಮತಂಪಲ್ಲಿ ಕ್ರಾಸ್ ನಲ್ಲಿ ನಡೆದಿರುತ್ತದೆ.
ತಾಲೂಕಿನ ಕಡಪ- ಬೆಂಗಳೂರು ಹೆದ್ದಾರಿಯಲ್ಲಿ ತಾಡಿಗೋಳ್ ನಂತರದ ಕಮತಂಪಲ್ಲಿ ಕ್ರಾಸ್ ನಲ್ಲಿ ನಡೆದಿರುವ ಅಪಘಾತ ನಡೆದಿದ್ದು ಮೃತ ದುರ್ದೈವಿಗಳನ್ನು ತಾ.ಬೈರಗಾನಪಲ್ಲಿ ಗ್ರಾಮದ ಗೋಪಾಲಪ್ಪ(58) ಹಾಗು ಚಿಂತಾಮಣಿ ತಾ.ಕೊನಪ್ಪಲ್ಲಿ ನಿವಾಸಿ ವೆಂಕಟೇಶ್ (45) ಎಂದು ಗುರುತಿಸಲಾಗಿದೆ.ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿರುತ್ತದೆ.
ಬೆಂಗಳೂರು ನೊಂದಣಿ ಹೊಂದಿರುವ ಮಾರುತಿ ಎಸ್ ಕ್ರಾಸ್ ಹೈಬ್ರಿಡ್ ನಿಲಿ ಬಣ್ಣದ ಕಾರು ಚಿಂತಾಮಣಿ ಕಡೆಗೆ ವೇಗವಾಗಿ ಹೋಗುತಿದ್ದು ಚಾಲಕನ ನಿಯಂತ್ರಣ ತಪ್ಪಿ ಚಿಂತಾಮಣಿಯಲ್ಲಿ ಸಂತೆ ಮುಗಿಸಿ ಬೈರಗಾನಪಲ್ಲಿಗೆ ಹೋರಟಿದ್ದ ಇಬ್ಬರಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ ಅಪಘಾತ ನಡೆದಿದೆ ಎನ್ನುಲಾಗಿದ್ದು, ಡಿಕ್ಕಿಯಾದ ರಭಸಕ್ಕೆ ಕಾರು ಮತ್ತು ಸವಾರರ ಸಮೇತ ದ್ವಿಚಕ್ರ ವಾಹನ ಸುಮಾರು 15 ಅಡಿಗಳ ಆಳದ ಕಂದಕಕ್ಕೆ ಬಿದ್ದಿದ್ದು ಹಳ್ಳದಲ್ಲಿದ್ದ ಕಲ್ಲು ಬಂಡೆಗಳಿಗೆ ಬಡಿದು ದ್ವಿಚಕ್ರ ಸವಾರರು ಸ್ಥಳದ್ಲ್ಲೆ ಮೃತಪಟ್ಟಿರುತ್ತಾರೆ.
ರಸ್ತೆ ಮಾರ್ಗ ಸೂಚಿ ಇಲ್ಲದ್ದೆ ಅಪಘಾತಕ್ಕೆ ಕಾರಣ!
ಚಿಂತಾಮಣಿಯ ಮಾಡಿಕೆರೆ ಕ್ರಾಸ್ ನಿಂದ ಆಂಧ್ರದ ಗಡಿಯಂಚಿನ ವರಿಗೂ ಕರ್ನಾಟಕ ಸರ್ಕಾರದ ಕೆ ಶಿಪ್ ರಸ್ತೆ ನಿರ್ಮಾಣವಾಗುತ್ತಿದೆ ರಸ್ತೆ ನಿರ್ಮಾಣದ ಗುತ್ತಿಗೆದಾರ ಸಂಸ್ಥೆ ಅಪಘಾತ ಆಗಿರುವ ಜಾಗದಲ್ಲಿ ತಿರುವು ಇರುವ ಬಗ್ಗೆ ಹಾಗು ಕಂದಕ ಇರುವ ಬಗ್ಗೆ ಮಾರ್ಗ ಸೂಚಿ ಅಳವಡಿಸದೆ ಇರುವುದರಿಂದ ಅಪಘಾತ ನಡೆದಿದೆ ಎನ್ನುತ್ತಾರೆ ಸ್ಥಳಿಯರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



