ಶ್ರೀನಿವಾಸಪುರ:ಕರೋನಾ ಸಂಕಷ್ಟದಲ್ಲಿ ಜನತೆ ನರಳುತ್ತಿದ್ದರೆ ಕೇಂದ್ರ ಸರ್ಕಾರ ಜನರಿಗೆ ಮೊಂಬತ್ತಿ ಬೆಳಗಿಸಿ ದೀಪ ಹಚ್ಚಿಡಿ ಎಂದು ಯಾಮಾರಿಸಿದರು ಎಂದು ಮೋದಿ ಸರ್ಕಾರದ ವಿರುದ್ದ ಶಾಸಕ ರಮೇಶ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು ಅವರು ವಿವಿಧ ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ ಕರೋನಾ ಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡು ಎಷ್ಟೊ ಮಕ್ಕಳು ಅನಾಥರಾಗಿದ್ದಾರೆ ಮಕ್ಕಳನ್ನು ಕಳೆದುಕೊಂಡ ಎಷ್ಟೊ ಪೋಷಕರು ಬೀದಿಪಾಲಾಗಿದ್ದರೆ ಚಾಮರಾಜನಗದ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮರ್ಪಕವಾಗಿ ಸರಬರಾಜು ಮಾಡಲಾಗದ ಬಿಜೆಪಿ ಸರ್ಕಾರದ ಹೊಣಗೇಡಿತನದಿಂದ ಮೂವತ್ತಕ್ಕು ಹೆಚ್ಚು ವಗಳು ಪ್ರಾಣಬಿಟ್ಟಿದೆ ಎಂದು ತೀವ್ರ ಧಾಟಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಆರೋಪಿಸಿದ ಅವರು ಅದ್ಯಾರೋ ಆರೋಗ್ಯ ಮಂತ್ರಿಯಂತೆ ನನ್ನನ್ನು ಸೋಲಿಸಲು ನೂರು ಬಾರಿ ಶ್ರೀನಿವಾಸಪುರಕ್ಕೆ ಬರ್ತಾನಂತೆ ಈಗ ಒಂದು ಬಾರಿ ಬರಲಿ ನೋಡೋಣ ಎಂದ ಅವರು ಸ್ವಾರ್ಥ ರಾಜಕೀಯಕ್ಕೆ ಚುನಾವಣೆಗೋಸ್ಕರ ಜನರನ್ನು ರೊಚ್ಚಿಗೇಬ್ಬಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರಾಮನ ಹೇಸರಿನಲ್ಲಿ ರಾಜಕೀಯ ಮಾಡುವಂತ ಬಿಜೆಪಿಗರೆ ನಿಮ್ಮ ರಾಮ ಯಾರು ತೋಟರಾಮುಡ,ದೊಂಗರಾಮುಡ,ಅಗ್ಗಿರಾಮುಡ ಆಯೋದ್ಯರಾಮನ ಯಾರು ನಿಮ್ಮ ರಾಮ ಆಯೋದ್ಯರಾಮನಾದರೆ ಆತನ ತಂದೆ ಡಶರಥ ತಾಯಿ ಕೌಸಲ್ಯಾಮಾತೆ ಸಹೋದರ ಲಕ್ಷ್ಮಣ ಇಂತಹ ರಾಮನ ತ್ಯಾಗದ ಆದರ್ಶದ ಅರಿವು ಇದಿಯಾ ನಿಮಗೆ ನಾವು ದೇವರಾಜಅರಸು,ಕೆ.ಹೆಚ್.ರಂಗನಾಥ್ ರಂತಹ ಮಹಾಪುರುಷರ ರಾಜಕೀಯ ಸಿದ್ದಾಂತದಲ್ಲಿದ್ದೀವಿ,ನೀವು
ದೇಶಕ್ಕೆ ತಮ್ಮ ಸರ್ವಸ್ವವನ್ನು ತ್ಯಾಗಮಾಡಿದ ರಾಜಿವ್ ಗಾಂಧಿ,ಇಂದಿರಾಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿಯನ್ನು ಸಂಸದ ಸದಸ್ಯತ್ವದಿಂದ ಅನರ್ಹತೆ ಮಾಡುತ್ತೀರಿ ಇದು ಯಾವ ನ್ಯಾಯ,ಇದೇನಾ ಮೋದಿ ಆಡಳಿತ ಇದೇನಾ ನಿಮ್ಮ ರಾಜಕೀಯ ಪಕ್ಷದ ಸಿದ್ದಾಂತ ನಿಮಗೆ ಜನರ ಧರ್ಮಗಳ ನಡುವಿನ ಸೌಹಾರ್ದತೆ ಬೇಕಿಲ್ಲ ನಿಮ್ಮದೂ ಆರ್.ಎಸ್.ಎಸ್. ಸಿದ್ದಾಂತ, ನಿಮ್ಮದು ಒಂದು ರಾಜಕೀಯ ಒಂದು ಪಕ್ಷವಾ ನೀವು ಪ್ರಜಾಪ್ರಭತ್ವವ ವ್ಯವಸ್ಥೆಯಲ್ಲಿ ಇದ್ದೀರಾ ಎಂದರು. ಕೆ.ಸಿ.ವ್ಯಾಲಿ ಪೈಪ್ ಲೈನ್ ಕಾಮಗಾರಿ ವಿರೋಧಿಗಳಿಗೆ ನಡುಕ
ಕೆ.ಸಿ.ವ್ಯಾಲಿ ಪೈಪ್ ಲೈನ್ ಕಾಮಗಾರಿ ನೋಡಿ ವಿರೋಧ ಪಕ್ಷದವರಿಗೆ ಆತಂಕ ಮನೆ ಮಾಡಿದೆ ಇದು ನನ್ನ ಸಾಧನೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ,ನಾನು ಕಾಂಗ್ರೆಸ್ ಶಾಸಕ ಡಬಲ್ ಇಂಜಿನ್ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ತಂದು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಿನಿ ನಿಮಗೆ ತಾಕತ್ತು ಇದ್ದರೆ ನಿಲ್ಲಿಸಿ ನಾನಂತು ತಗ್ಗೋದೆ ಇಲ್ಲ ಎಂದು ಸವಾಲ್ ಹಾಕಿದರು.
ಪ್ರಭಾವಿ ಮುಖಂಡ ಪ್ರಕಾಶ್ ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಗೆ ವಾಪಸ್ಸು
ತಾಲೂಕಿನ ಪ್ರಭಾವಿ ಯುವ ಮುಖಂಡ ಬಿ.ಎಂ.ಪ್ರಕಾಶ್ ಕಳೆದ ವಿಧಾನಸಭಾ ಚುನಾವಣೆ ನಂತರ ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಮುನಿಸಿಕೊಂಡು ಪಕ್ಷದ ಚಟುವಟಿಕೆಯಿಂದ ದೂರ ಉಳಿದು ಕೆಲ ದಿನಗಳ ಕಾಲ ಪಕ್ಷೇತರ ಅಭ್ಯರ್ಥಿ ಗುಂಜೂರು ಶ್ರೀನಿವಾಸರೆಡ್ಡಿಯವರೊಂದಿಗೆ ಗುರುತಿಸಿಕೊಂಡಿದ್ದರು. ಇತ್ತಿಚಿನ ಬೆಳವಣಿಗೆಯಲ್ಲಿ ಬಿ.ಎಂ.ಪ್ರಕಾಶ್ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ಚರ್ಚಿಸಿ ಮತ್ತೆ ಕೈ ಪಾಳಯಕ್ಕೆ ವಾಪಸ್ಸಾಗಿದ್ದಾರೆ. ಶಾಸಕ ರಮೇಶ್ ಕುಮಾರ್ ಅವರನ್ನು ಮತ್ತು ಅವರ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು ಈ ಸಂದರ್ಭದಲ್ಲಿ ಹಲವಾರು ಮುಸ್ಲಿಂ ಯುವಕರು ಕಾಂಗ್ರೆಸ್ಗೆ ಸೇರ್ಪಡೆಯಾದರು.ಬಳಿಕ ಮಾತನಾಡಿದ ಶಾಸಕ ರಮೇಶ್ ಕುಮಾರ್, ಪ್ರಕಾಶ್ ಅವರ ವಾಪಸಾತಿಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28