ಶ್ರೀನಿವಾಸಪುರ:ಸಾರ್ವಜನಿಕ ಜೀವನದಲ್ಲಿ ಇರುವಂತ ವ್ಯಕ್ತಿಗಳ ಹುಟ್ಟುಹಬ್ಬದ ಕಾರ್ಯಕ್ರಮಗಳು ಸಾರ್ವಜನಿಕವಾಗಿ ಆಚರಿಸಿಕೊಂಡಾಗ ಅವರ ಬದುಕಿನಲ್ಲಿ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ ಹೇಳಿದರು ಅವರು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣರವರ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಕಾರ್ಯಕರ್ತರು ಮತ್ತು ರಾಜಣ್ಣ ಅಭಿಮಾನಿಗಳು ತಾಲೂಕಿನ ಅರಿಕುಂಟೆ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಸ್ವೇಟರ್ ಹಾಗು ಇತರೆ ಪರಿಕರಗಳನ್ನು ವಿತರಿಸಿ ಮಾತನಾಡಿ ಹುಟ್ಟುಹಬ್ಬದ ಆಚರಣೆ ಅರ್ಥ ಪೂರ್ಣವಾಗಿದ್ದಾಗ ಅದಕ್ಕೆ ಗೌರವ ಹೆಚ್ಚಾಗುತ್ತದೆ ಎಂದರು.
ಇಂದಿರಾಭವನ್ ರಾಜಣ್ಣ ಮಾತನಾಡಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅಭಿಮಾನದಿಂದ ಆಯೋಜಿಸುವ ಕಾರ್ಯಕ್ರಮಗಳಿಗೆ ಬೆಲೆ ಕಟ್ಟಲಾಗದ್ದು ಅವರಿಗೆ ಚಿರಋಣಿ ಎಂದರು ಇದೇ ಸಂದರ್ಭದಲ್ಲಿ ಇಂದಿರಾಭವನ್ ವೃತ್ತದಲ್ಲಿ ಕೆಕ್ ಕತ್ತರಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸದಸ್ಯ ಮಂಜುನಾಥಗೌಡ,ಜಗದೀಶ್,ಕಾರ್ ಬಾಬು,ಉದ್ಯಮಿ ಅಂಬೇಡ್ಕರ್ ಪಾಳ್ಯ ರವಿ, ಗೋರವಿಮಾಕಲಹಳ್ಳಿಶ್ರೀನಿವಾಸ್,ಗುರುಮೂರ್ತಿ,ಅವಲಕುಪ್ಪರಾಮಚಂದ್ರ,ಜಗನ್,ಬಿ.ಎಲ್.ದುರ್ಗ,ಪ್ರೇಮ್,ಪೂಲುಶಿವಾರೆಡ್ಡಿ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



