ಶ್ರೀನಿವಾಸಪುರ: ತಾಲೂಕಿನ ಯರ್ರಂವಾರಿಪಲ್ಲಿ PDO ಏಜಾಜ್ ಪಾಷ ಪಂಚಾಯಿತಿಯ ಲಕ್ಷಾಂತರ ಹಣವನ್ನು ಅಕ್ರಮ ಎಸಗಿದ್ದಾರೆ ಎಂದು ಪಂಚಾಯಿತಿ ಸದಸ್ಯರು ತಾಲೂಕು ಪಂಚಾಯಿತಿ ಇವೊ ಗೆ ದೂರು ನೀಡಿದ್ದಾರೆ.
ರಾಯಲ್ಪಾಡು ಹೋಬಳಿಯ ಯರ್ರಂವಾರಿಪಲ್ಲಿ ಪಂಚಾಯಿತಿ ಪಿಡಿಒ ಏಜಾಜ್ ಪಾಷ ಕಚೇರಿಗೆ ಬಾರದೆ ತಮ್ಮ ಮನೆಯನ್ನು ಕಚೇರಿಯನ್ನಾಗಿಸಿಕೊಂಡು ಲಕ್ಷಾಂತರ ಹಣದ ಅವ್ಯವಹಾರ ನಡೆಸಿದ್ದಾರೆ ಈ ಬಗ್ಗೆ ಸರ್ಕಾರ ತನಿಖೆ ಮಾಡುವಂತೆ ಗ್ರಾ.ಪಂ. ಉಪಾಧ್ಯಕ್ಷ ವೈ.ಆರ್.ಶ್ರೀನಿವಾಸರೆಡ್ಡಿ ಅಗ್ರಹಿಸಿರುತ್ತಾರೆ.
ಯರ್ರಂವಾರಿಪಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಹಾಗೂ ಸದಸ್ಯರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಪ್ರವೃತ್ತಿ ವಿರುದ್ಧ ಗ್ರಾ.ಪಂ ಕಚೇರಿ ಮುಂದೆ ಪ್ರತಿಭಟಿಸಿ ನಡೆಸಿ ಮಾತನಾಡಿದರು.
ಸರ್ಕಾರಗಳು ಗ್ರಾಮೀಣ ಭಾಗದ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಿದೆ ಆದರೆ ಯರ್ರಂವಾರಿಪಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಣವನ್ನು ಚುನಾಯಿತ ಮಂಡಳಿ ಗಮನಕ್ಕೆ ತಾರದೇ ಡ್ರಾ ಮಾಡಿ ಸರ್ಕಾರ ಹಾಗೂ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.
ಕಳೆದ 4 ತಿಂಗಳಿನಿಂದ ತಂಬ್ ಕೊಟ್ಟಿಲ್ಲ ,ಈ ಬಗ್ಗೆ ಇಒ ಗಮನಕ್ಕೆ ತರಲಾಗಿದೆ. ಪಿಡಿಒ ಅಧಿಕಾರಿಯ ಕಾರ್ಯವೈಖರಿ ಕುರಿತಾಗಿ ಹಾಗು ಲಕ್ಷಾಂತರ ಹಣ ಲೋಟಿಯಾಗುತ್ತಿರುವ ಬಗ್ಗೆ ದಾಖಲೆ ಸಮೇತ ಸಿಇಒ ಹಾಗೂ ಇಒ ರವರ ಗಮನಕ್ಕೆ ತರಲಾಗಿದೆ ಅದರೂ ಇದುವರಿಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು .
ನರೇಗಾ ಹಾಗೂ ಇತರೆ ಕಾಮಗಾರಿಗಾಗಿ ಹಣ ಬಿಡುಗಡೆ ಮಾಡಲು ಸರ್ಕಾರದಿಂದ ಡ್ಯಾಂಗಲ್ನ್ನು ಅಧ್ಯಕ್ಷರಿಗೊಂದು, ಪಿಡಿಒ ಗೊಂದು ನೀಡಲಾಗಿದೆ . ಪಿಡಿಒ ರವರು ಅಧ್ಯಕ್ಷೆ ಅನಕ್ಷಸ್ಥರಾಗಿದ್ದು, ಪತಿಗೆ ಆಸೆ, ಆಮೀಷಗಳನ್ನು ಒಡ್ಡಿ ಅಧ್ಯಕ್ಷರ ಡ್ಯಾಂಗಲ್ನ್ನು ಸಹ ಪಡೆದುಕೊಂಡು ಲಕ್ಷಾಂತರ ಹಣವನ್ನು ಡ್ರಾ ಮಾಡಿ ಸರ್ಕಾರದ ಹಣವನ್ನು ಕೊಳ್ಳೆ ಹೋಡೆಯಲಾಗಿದೆ.
ಸರ್ಕಾರದ ಯಾವುದೇ ಅನುದಾನ ಬಂದರೂ ಚುನಾಯಿತ ಮಂಡಳಿ ಸದಸ್ಯರ ಗಮನಕ್ಕೆ ತರುವುದಿಲ್ಲ. ಕಳೆದ 6 ತಿಂಗಳಿನಿಂದ ಸಾಮಾನ್ಯ ಸಭೆ ನಡೆದಿಲ್ಲ. ವಾರ್ಡ್ ಸಭೆ, ಗ್ರಾಮಸಭೆಗಳನ್ನು ಮಾಡಿರುವುದಿಲ್ಲ ವಸತಿ ಯೋಜನೆಗೆ ಸಂಬಂದಿಸಿದಂತೆ ವಸತಿ ರಹಿತರ 162 ಫಲಾನುಭವಿಗಳ ಪಟ್ಟಿ ಮಾಡಲಾಗಿದೆ ಪಟ್ಟಿಯಲ್ಲಿ ಪಕ್ಷ ರಾಜಕೀಯಕ್ಕೆ ಒತ್ತು ನೀಡಿ ತಮಗೆ ಇಷ್ಟ ಬಂದವರನ್ನು ಪಟ್ಟಿಗೆ ಸೇರಿಸಿದ್ದಾರೆ 1 ಕೋಟಿ 30ಲಕ್ಷ ಹಣದ ಕಾಮಾಗಾರಿಯನ್ನು ಗ್ರಾಮಪಂಚಾಯಿತಿ ಸದಸ್ಯರ ಗಮನಕ್ಕೆ ಬಾರದೆ 3,4 ಗ್ರಾಮಗಳಿಗೆ ಹಂಚಿಕೆ ಮಾಡಿ ಹಣವನ್ನು ಡ್ರಾ ಮಾಡಿದ್ದಾರೆ ವರ್ಷಕೊಮ್ಮೆ ನಡೆಯುವ ಪಂಚಾಯಿತಿಯ ಖರ್ಚು ವೆಚ್ಚಗಳ ಜಮಾಬಂದಿ ಸಹ ನಡೆಸಿಲ್ಲ.
PDO ಕಾಂಗ್ರೆಸ್ ಪಕ್ಷದ ಎಜೆಂಟ್
ಪಿಡಿಒ ಏಜಾಜಪಾಷ ಸರ್ಕಾರಿ ಅಧಿಕಾರಿಯಾಗಿ ರಾಜಕೀಯ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಪಂಚಾಯಿತಿಯಲ್ಲಿ ಕಾಮಗಾರಿ ಬೇಕೆಂದರೆ ಕಾಂಗ್ರೆಸ್ ಸೇರ್ಪಡೆಯಾಗುವಂತೆ ಆಮೀಷವನ್ನು ಒಡ್ಡಿ ಸೇರ್ಪಡೆಯಾದವರಿಗೆ ಕಾಮಗಾರಿ ಹಂಚುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಗ್ರಾ.ಪಂ ಸದಸ್ಯೆ ಮಂಜುಳ ಮಾತನಾಡಿ ನಮ್ಮನ್ನು ಪರಿಗಣಿಸದೆ 15 ನೇ ಕಾಸಿನ ಯೋಜನೆಡಿಯಲ್ಲಿ ಒಟ್ಟು 93 ಲಕ್ಷವನ್ನು ದೂರಪಯೋಗಪಡಿಸಿಕೊಂಡಿದ್ದಾರೆ. ಪಂಚಾಯಿತಿಯಲ್ಲಿ ಇರಬೇಕಾದ ದಾಖಲೆ ಪುಸ್ತಕಗಳು ಪಿಡಿಒ ಮನೆಯಲ್ಲಿ ಇರಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮುಖಂಡ ಪದ್ಮನಾಭರೆಡ್ಡಿ ಮಾತನಾಡಿ ನನ್ನ ಹೆಂಡತಿ ರಾಧಮ್ಮ ಯರ್ರಂವಾರಿಪಲ್ಲಿ ಪಂಚಾಯಿತಿಯಲ್ಲಿ 2015-2020 ರ ಅಧ್ಯಕ್ಷರಾಗಿ ಕಾರ್ಯನಿರ್ವಹಿದ್ದರು. ಈ 5 ವರ್ಷದ ಸಮಯದಲ್ಲಿ ಅಧ್ಯಕ್ಷರು ಸಹಿತ ಇದುವರೆಗೂ ಯಾರಿಗೂ ಗೌರವಧನ ನೀಡಿಲ್ಲವೆಂದು ದೂರಿದ್ದಾರೆ.
ಗ್ರಾ.ಪಂ.ಸದಸ್ಯರಾದ ರಾಜ, ಗೌರಿಶಂಕರ್, ಕವಿತ, ಶಿವಾರೆಡ್ಡಿ, ಮುಖಂಡರಾದ ಸುಧಾಕರ, ಪದ್ಮನಾಭರಡ್ಡಿ, ಪಾತೂರು ಬಾಬುರೆಡ್ಡಿ, ಹರ್ಷವರ್ಧನ ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27