ಶ್ರೀನಿವಾಸಪುರ: ಆಂಧ್ರದ ಗಡಿಬಾಗದಲ್ಲಿದ್ದು ಜನರ ಬದುಕಿನಲ್ಲಿ ಆಂಧ್ರದ ಸಂಸೃತಿ ಅನಾವರಣವಾಗಿದ್ದರು ತಾಲೂಕಿನ ಜನತೆ ಕನ್ನಡ ಭಾಷೆ ಮೇಲಿನ ಪ್ರಿತಿ ಅಭಿಮಾನ ಕಡಿಮೆಯಾಗಿಲ್ಲ ಕನ್ನಡವನ್ನು ಆಡಳಿತಾತ್ಮಕವಾಗಿ ಇನ್ನೂ ಹೆಚ್ಚು ಬಳಸುವ ಮೂಲಕ ಕನ್ನಡ ಭಾಷೆಗೆ ಹೆಚ್ಚು ಮಹತ್ವನೀಡಬೇಕೆಂದು ತಹಶೀಲ್ದಾರ್ ಶೀರಿನ್ತಾಜ್ ಮನವಿ ಮಾಡಿದರು.
ಅವರು ತಮ್ಮ ಕಚೇರಿ ಸಂಬಾಂಗಣದಲ್ಲಿ ತಾಲೂಕಿನ ಯಲ್ದೂರಿನಲ್ಲಿ ನಡೆಯಲಿರುವ ಶ್ರೀನಿವಾಸಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಮಾಡಿ ಮಾತನಾಡಿದರು ಈ ತಿಂಗಳ 9 ರಂದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಿನ 12 ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಡೆಯಲಿದೆ ಎಂದರು.ಭಾಷೆಯ ಉಳಿವಿಗಾಗಿ ಸಾಹಿತ್ಯ ಪರಿಷತ್ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮಾನಸದಲ್ಲಿ ಸಾಗುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು 12 ನೇ ಸಮ್ಮೇಳನವೂ ವೈಭವೂರಿತವಾಗಿ ಆಚರಿಸಲು ಮುಂದಾಗಿದ್ದು ಎಲ್ಲರ ಸಹಕಾರ ಅಗತ್ಯವಾಗಿ ಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಗೋಪಾಲಗೌಡ ಮಾತನಾಡಿ ಡಿಸಂಬರ್ 9ರಂದು ತಾಲೂಕಿನ ಯಲ್ದೂರಿನ ನ್ಯಾಷನಲ್ ಪ್ರೌಡಶಾಲೆ ಆವರಣದಲ್ಲಿ 12 ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾಗಿ ಕವಿಗಳು ಹಾಗು ಇದೆ ಯಲ್ದೂರು ಹೋಬಳಿ ನಿವಾಸಿಗಳಾದ ಪಾತಮುತಕಪಲ್ಲಿ ಚಲಪತಿಗೌಡ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಇದು ತಾಲ್ಲೂಕಿನ ಸಮಸ್ತ ಕನ್ನಡ ಮನಸ್ಸುಗಳು ಹೆಮ್ಮೆ ಪಡುವಂತ ವಿಚಾರ ಈ ಸಮ್ಮೇಳನ ಯಶಸ್ಸಿಗೆ ತಾಲೂಕಿನ ಕನ್ನಡಪರ,ಪ್ರಗತಿಪರ,ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಹಾಗು ಸಮಾಜಗಳ ಮುಖಂಡರು ಹೆಚ್ಚಿನ ಸಹಕಾರ ನೀಡುವುದರೊಂದಿಗೆ ದೊಡ್ದ ಸಂಖ್ಯೆಯಲ್ಲಿ ಪಾಲ್ಗೋಂಡು ಕನ್ನಡ ನುಡಿ ಹಬ್ಬವನ್ನ ಯಶಸ್ವಿಗೋಳಿಸೋಣ ಎಂದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಮಾಯಾಬಾಲಚಂದ್ರ ,ಕಸಾಪ ತಾಲೂಕು ಅಧ್ಯಕ್ಷೆ ಉಪನ್ಯಾಸಕಿ ಮಂಜುಳ, ಕಾರ್ಯದರ್ಶಿ ಬೈರೇಗೌಡ, ಶ್ರೀರಾಮೇಗೌಡ, ಖಜಾಂಚಿ ಮುರಳಿ,ಪ್ರತಿನಿಧಿ ಜಿ.ವಿ.ಚಂದ್ರಪ್ಪ, ಜಿಲ್ಲಾ ಸಂಚಾಲಕ ರವಿಕುಮಾರ್,ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ನಾಗರಾಜ್, ಸದಸ್ಯರಾದ ವೆಂಕಟರಮಣ, ಅನಿಲ್ಕುಮಾರ್ ಮುಂತಾದವರು ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27