ಶ್ರೀನಿವಾಸಪುರ:ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶ್ರೀನಿವಾಸಪುರ ತಾಲ್ಲೂಕು ನೂತನ ಅಧ್ಯಕ್ಷರಾಗಿ ಆರ್.ಎಸ್.ರೆಡ್ಡಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ರಘುನಾಥ್ರೆಡ್ಡಿ ಹಾಗೂ ಜಿಲ್ಲಾ ಖಜಾಂಚಿಯಾಗಿ ಸಿ.ಬಿ. ಶಿವಣ್ಣ ಆಯ್ಕೆಯಾಗಿದ್ದಾರೆ.
ನೂತನ ಪಧಾದಿಕಾರಿಗಳು ಪಟ್ಟಣದ ನೌಕರರ ಭವನದಲ್ಲಿ ಪದಗ್ರಹಣ ಮಾಡಿದರು ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ರೆಡ್ಡಪ್ಪ ಮಾತನಾಡಿ ವೇತನ,ವೈದ್ಯಕೀಯ ಬಿಲ್ಲುಗಳ ಮಂಜೂರಾತಿ ಸೇರಿದಂತೆ,ಶಿಕ್ಷಕರ ಸಮಸ್ಯೆಗಳಿಗೆ ಸದಾಕಾಲ ಸ್ಪಂದಿಸುವುದಾಗಿ ಹೇಳಿದರು.
ಶಿಕ್ಷಕರು ನೀಡಿರುವ ಅಧಿಕಾರಿವನ್ನು ಜವಾಬ್ದಾರಿ ಎಂದು ಭಾವಿಸಿ ಕೆಲಸ ಮಾಡುವುದಾಗಿ ಶಿಕ್ಷಕರ ಸೇವೆಯೇ ನನ್ನ ಪರಮೋಚ್ಚ ಗುರಿ ಎಂಬಂತೆ ಶಿಕ್ಷಕರಿಗೆ ಗೌರವ ತರುವ ರಿತಿಯಲ್ಲಿ ಸಂಘದ ಘನತೆ ಎತ್ತಿಹಿಡಿಯುವ ರೀತಿಯಲ್ಲಿ ಸಂಘವನ್ನು ಮುನ್ನೆಡಿಸಿಕೊಂಡು ಹೋಗುವುದಾಗಿ ತಿಳಿಸಿದರು.
ಹಿಂದಿನ ಅಧ್ಯಕ್ಷರು,ಪದಾಧಿಕಾರಿಗಳು, ಹಾಲಿ ಪದಾಧಿಕಾರಿಗಳೊಂದಿಗೆ ಸಮನ್ವಯತೆ ಕಾಯ್ದುಕೊಂಡು ಶಿಕ್ಷಕರೊಂದಿಗೆ ಸೌಹಾರ್ದತೆಯಿಂದ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಸರ್ವ ಸದಸ್ಯರು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಈ ಆಯ್ಕೆ ನಡೆದಿದ್ದು, ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರುಗಳಾದ ವಿ ಬಯ್ಯಾರೆಡ್ಡಿ ಸಂಘಟನಾ ಕಾರ್ಯದರ್ಶಿ ಡಿವಿ ವೆಂಕಟರಮರೆಡ್ಡಿ ಸಹ ಕಾರ್ಯದರ್ಶಿ ಶ್ರೀರಾಮ್.ಎಲ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಕಾಳಾಚಾರಿ ಮಹಿಳಾ ಉಪಾಧ್ಯಕ್ಷೆ ಶೋಭಾ ರಮೇಶ್, ಅನಿತಾ ಶಿವಾರೆಡ್ಡಿ, ಕೊಟ್ರಗೂಳಿ ರಮೇಶ್, ಗುರುಮೂರ್ತಿ,ನಂಬಿಹಳ್ಳಿರಮೇಶ್,ಆರ್.ಎಸ್. ಹರಿನಾಥ್, ಬಿ.ಪಿ.ವೆಂಕಟರಮಣ, ಶಂಕರಪ್ಪ, ಜಯರಾಮರೆಡ್ಡಿ ,ಮಂಜುನಾಥ್, ವೆಂಕಟೇಶ ಜಿ, ಚಂದ್ರಶೇಖರ್ ರೆಡ್ಡಿ ಎಂ.ಎನ್. ಸುಧಾಕರ್, ಶ್ರೀನಿವಾಸ ಹಾಗೂ ಸಂಘದ ಸರ್ವ ಸದಸ್ಯರು ಹಾಜರಿದ್ದರು.
ತಹಶೀಲ್ದಾರ್ ಭೇಟಿ ರೆಡ್ಡಪ್ಪ ಮನವಿ
ಅಧಿಕಾರ ವಹಿಸಿಕೊಂಡ ಶಿಕ್ಷಕರ ಸಂಘದ ಅಧ್ಯಕ್ಷ ರೆಡ್ಡಪ್ಪ ತಹಸೀಲ್ದಾರ್ ಸುಧೀಂದ್ರ ಅವರನ್ನು ಭೇಟಿ ಮಾಡಿ ಸರ್ಕಾರ ನಡೆಸುತ್ತಿರುವ ಜಾತಿ ಗಣತಿ ಸಮೀಕ್ಷೆ ಕಾರ್ಯದಲ್ಲಿ ಕೆಲಸ ಮಡುವಂತೆ ಶಿಕ್ಷಕರಿಗೆ ಗಳಿಗೆ ರಜೆ, ಗೌರವಧನ, ತರಬೇತಿ ಸಂದರ್ಭದಲ್ಲಿ ಹಾಗು ಸಮರ್ಪಕವಾಗಿ ಊಟದ ವ್ಯವಸ್ಥೆ ಕಲ್ಪಿಸಲು ಕೋರಿದರು.

ಇದಕ್ಕೆ ಸ್ಪಂದಿಸಿದ ಶ್ರೀನಿವಾಸಪುರ ತಹಸೀಲ್ದಾರ್ ಸುಧೀಂದ್ರ ಅವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ಇತ್ತರು.