ಶ್ರೀನಿವಾಸಪುರ:ನನ್ನ ಅಧಿಕಾರವದಿಯಲ್ಲಿ ಶ್ರೀನಿವಾಸಪುರ ಪಟ್ಟಣದಲ್ಲಿ ಅಂಬೇಡ್ಕರ್ ಪುತ್ತಳಿ ಅನಾವರಣ ಮಾಡಲಾಯಿತು,ಈಗ ಅಂದಾಜು 5 ಕೋಟಿ ರೂಗಳ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಶಿಘ್ರದಲ್ಲಿಯೇ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ G. K. Venkatashiva Reddy ತಿಳಿಸಿದರು. ಅವರು ತಾಲೂಕು ಕಚೇರಿ ಮುಂಬಾಗದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಡಾ.ಬಿ.ಅರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊಳ್ಳೂರು ಗ್ರಾಮಾ ಠಾಣಾ ವ್ಯಾಪ್ತಿಯಲ್ಲಿ 2 ಎಕರೆ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಮೀಸಲು ಇಡಸಲಾಗಿದೆ. ಅಲ್ಲಿ ಜಿಲ್ಲೆಯಲ್ಲೆ Kolar district ಮಾದರಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ಕುರಿತಾಗಿ ಸಮಾಜ ಕಲ್ಯಾಣ ಸಚಿವ ಮಹದೇವಪ್ಪನವರನ್ನು ಮನವಿ ಮಾಡಿರುತ್ತೇನೆ ಎಂದರು.
ಕೌನ್ಸಿಲರ್ ಶ್ರೀನಿವಾಸನ್ ನೆನೆದ ಶಾಸಕ
ದಿವಂಗತ ಕೌನ್ಸಿಲರ್ ಶ್ರೀನಿವಾಸನ್ ನನ್ನ ಜೊತೆಯಲ್ಲಿದ್ದಾಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು ಅವರೊಂದಿಗೆ ಕೂಡಿ ಅಂಬೇಡ್ಕರ್ ಉದ್ಯಾನವನ ನಿರ್ಮಿಸಿ ಅಂಬೇಡ್ಕರ್ ಪುತ್ತಳಿ ಅನಾವರಣ ಮಾಡಲಾಯಿತು ಎಂದು ಶ್ರೀನಿವಾಸನ್ ಅವರನ್ನು ಶಾಸಕ ವೆಂಕಟಶಿವಾರೆಡ್ಡಿ ನೆನಪಿಸಿಕೊಂಡರು.
ಇಂದಿನ ರಾಜಕಾರಣವೆ ವಿಭಿನ್ನ
ಕ್ಷೇತ್ರದ ಜನತೆ ನನ್ನನ್ನು 5 ಬಾರಿ ಶಾಸಕನನ್ನಾಗಿ ಮಾಡಿದರೆ ರಮೇಶ್ ಕುಮಾರ್ ರವರನ್ನು 6 ಬಾರಿ ಶಾಸಕರನ್ನಾಗಿ ಮಾಡಿದ್ದಾರೆ ನಾವು ಇಂದು ಕ್ಷೇತ್ರದ ಜನರ ಋಣದಲ್ಲಿ ಇದ್ದೀವಿ ಹಿಂದೆ ರಾಜಕಾರಣ ಬೇರೆಯಾಗಿತ್ತು ಇಂದಿನ ರಾಜಕಾರಣ ವಿಭಿನ್ನ, ಕ್ಷೇತ್ರದ ಅಭಿವೃದ್ಧಿಗೆ ವಿರೋಧ ಪಕ್ಷದವರು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮಾರ್ಮಿಕವಾಗಿ ನುಡಿದರು. ಹಿಂದೆ ಅಂಬೇಡ್ಕರ್ ಪುತ್ತಳಿ ಅನಾವರಣ ಸಂದರ್ಭದಲ್ಲಿ ಇದೆ ವೇದಿಕೆಯಲ್ಲಿ ನಾನು ಶಾಸಕನಾಗಿ ರಮೇಶ್ ಕುಮಾರ್ ಗೌರವಿಸಿದ್ದೇನೆ ಎಂದರು.
ಅಂಬೇಡ್ಕರ್ ಉಧ್ಯಾನವನ ಅದ್ಬುತವಾಗಿದೆ
ವೇದಿಕೆ ಕಾರ್ಯಕ್ರಮಕ್ಕೂ ಮುಂಚಿತವಾಗಿ ನವೀಕರಣಗೊಂಡ ಅಂಬೇಡ್ಕರ್ ಉದ್ಯಾನವನದಲ್ಲಿ ಡಾ.ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿದ ಶಾಸಕ ವೆಂಕಟಶಿವಾರೆಡ್ಡಿ ಪುರಸಭೆ ಸಹಯೋಗದಲ್ಲಿ ಅತ್ಯಂತ ಮುತುವರ್ಜಿಯಿಂದ ಅಂಬೇಡ್ಕರ್ ಉದ್ಯಾನವನ ನವೀಕರಣಮಾಡಿರುವುದು ಶ್ಲಾಘನೀಯ ಎಂದರು. ತಾಲೂಕಿನ ವಿವಿಧ ಪಂಚಾಯಿತಿಗಳಿಂದ ಡಾ.ಅಂಬೇಡ್ಕರ್ ಭಾವಚಿತ್ರ ಹೊತ್ತು ಆಗಮಿಸಿದ್ದ ಸುಮಾರು 15 ಬೆಳ್ಳಿ ಪಲ್ಲಕ್ಕಿಗಳ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೋಂಡಿದ್ದ ಶಾಸಕ ಪಾಲ್ಗೋಂಡಿದ್ದರು.
ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ದಿವಂಗತ ಶ್ರೀನಿವಾಸನ್ ಅವರ ಪತ್ನಿ ಖ್ಯಾತ ವೈದ್ಯೆ ಡಾ:ಚಂದ್ರಕಳ ಮಾತನಾಡಿ, ನನ್ನ ಪತಿ ಶ್ರೀನಿವಾಸನ್ ಮತ್ತು ತಾಲ್ಲೂಕಿನ ದಲಿತ ಸಂಘಟನೆಗಳ ಮುಖಂಡರ ಸಹಕಾರ ನೀಡಿದ ಹಿನ್ನಲೆಯಲ್ಲಿ ತಾಲ್ಲೂಕು ಕಚೇರಿಯ ಮುಂಭಾಗ ಅಂಬೇಡ್ಕರ್ ಉದ್ಯಾನವನ ಹಾಗು ಪುತ್ತಳಿ ಅನಾವರಣ ಕಾರ್ಯ ಅಗಿದೆ ಇದೊಂದು ಹೆಮ್ಮೆಯ ವಿಷಯ ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ನಮ್ಮ ನಡುವೆ ಶಕ್ತಿಯಾಗಿ ಇದ್ದಾರೆ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನ ಫಲ ಸಮಾಜದಲ್ಲಿ ಹಲವಾರು ಸುಧಾರಣೆಗಳನ್ನು ಬರಲು ಕಾರಣವಾಯಿತು ಮಹಿಳೆಯರ ಜೀವನ ಶೈಲಿ ಬದಲಾವಣೆಗೆ ಕಾರಣವಾಗಿದೆ ಮೀಸಲಾತಿ ಕಲ್ಪಿಸಿ ಇಡೀ ಜಗತ್ತಿಗೆ ಬೆಳಕು ನೀಡಿದ್ದಾರೆ ಎಂದರು.ನನ್ನ ಪತಿ ಕೊಲೆ ಪ್ರಕರಣ ಸಿ.ಬಿ.ಐ. ವಹಿಸಲು ನ್ಯಾಯಾಲಯ ಅದೇಶಿಸಿರುವುದು ಮಾಡಿರುವುದು ಸ್ವಾಗತಾರ್ಹ ವಿಚಾರ ಎಂದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸುಧೀಂದ್ರ, ತಾ.ಪಂ ಇ.ಒ. ಎಸ್. ಶಿವಕುಮಾರಿ, ಪುರಸಭಾ ಅಧ್ಯಕ್ಷ ಬಿ. ಆರ್. ಭಾಸ್ಕರ್, ಮುಖ್ಯಾಧಿಕಾರಿ ವಿ. ನಾಗರಾಜ್, ಬಿ.ಇ.ಒ ಮುನಿಲಕ್ಷಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ರಾಜೇಶ್,ಶ್ರೀನಿವಾಸಪುರ ಪೋಲಿಸ್ ಇಲಾಖೆ ಪ್ರೋಭೇಷನರಿ ಐ.ಪಿ.ಎಸ್ ಯಶಕುಮಾರ್ ಶರ್ಮ, ಸಿ.ಡಿ.ಪಿ.ಒ. ಜ್ಯೋತಿಲಕ್ಷ್ಮೀ ನೌಕರರ ಸಂಘದ ಅಧ್ಯಕ್ಷ ಬೈರೇಗೌಡ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಮುದಿಮೊಡಗು ವಾಸು, ಪುರಸಭಾ ನಾಮಿನಿ ಸದಸ್ಯ ನರಸಿಂಹಮೂರ್ತಿ,ಹೇಮಂತ್,ಪುರಸಭೆ ಮಾಜಿ ಅಧ್ಯಕ್ಷ ಅಂಬೇಡ್ಕರ್ ಪಾಳ್ಯ ಮುನಿಯಪ್ಪ, ಮಾಜಿ ಸದಸ್ಯ ಶಂಕರ್,ಕುಂಬಾರ ವೇಣು, ಕೆ.ಕೆ. ಮಂಜುನಾಥ್, ದಲಿತ ಮುಖಂಡರಾದ ದೊಡ್ಡ ಬಂದಾರ್ಲಹಳ್ಳಿ ಮುನಿಯಪ್ಪ, ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಈರಪ್ಪ,ನಾಗದೇನಹಳ್ಳಿ ಶ್ರೀನಿವಾಸ್, ರಾಮಾಂಜನಮ್ಮ, ಹೂವಳ್ಳಿ ಕೃಷ್ಣಪ್ಪ,ವರ್ತನಹಳ್ಳಿ ವೆಂಕಟೇಶ್,ಉನಿಕಿಲಿ ಪೂಜಪ್ಪ, ಆವಲಕುಪ್ಪಹನುಮಂತಪ್ಪ ಕಿರುವಾರ ನರಸಿಂಹಪ್ಪ, ಗಾಂಡ್ಲಹಳ್ಳಿ ಚಲಪತಿ,ಶಂಕರ್,ಗೋರವಿಮಾಕಲಹಳ್ಳಿ ಶ್ರೀನಿವಾಸ್ ಸೇರಿದಂತೆ ಮುಂತಾದವರು ಇದ್ದರು.


ಅಂಬೇಡ್ಕರ್ ಪುತ್ತಲಿಗೆ ಮಾಲಾರ್ಪಣೆ ಮಾಡಿದ ಮಾಜಿ ಸ್ಪೀಕರ್
ವೇದಿಕೆ ಕಾರ್ಯಕ್ರಮಕ್ಕೆ ಆಹ್ವಾನ ಇತ್ತಾದರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವೇದಿಕೆ ಬಳಿ ಹೊಗದೆ ಮುಖಂಡರೊಂದಿಗೆ ಹೋಗಿ ಅಂಬೇಡ್ಕರ್ ಪುತ್ತಲಿಗೆ ಮಾಲಾರ್ಪಣೆ ಮಾಡಿ ತೆರಳಿದರು. ಕೋಲಾರ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಡಾ.ವೇಣುಗೋಪಾಲ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಅಂಬೇಡ್ಕರ್ ಪುತ್ತಲಿಗೆ ಮಾಲಾರ್ಪಣೆ ಮಾಡಿದರು