ಶ್ರೀನಿವಾಸಪುರ: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀನಿವಾಸಪುರ ಪಟ್ಟಣದಲ್ಲಿ ಯುಗಾದಿ ಹಬ್ಬದಂದು ಶ್ರೀನಿವಾಸಪುರದ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಹಾಗು ಸಪ್ತಮಾತೃಕೆಯರ ಪಲ್ಲಕಿ ಉತ್ಸವಳ ಜಾತ್ರಾ ಮಹೋತ್ಸವದಂದು ರಾತ್ರಿ ಕರಗ ನಡೆಸುವುದು ಇಲ್ಲಿ ಸಂಪ್ರದಾಯವಾಗಿದ್ದು ಈ ಬಾರಿ ಕರಗವನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ.
ವಿಜೃಂಭಣೆಯಿಂದ ನಡೆದ ಹಸಿ ಕರಗ
ಯುಗಾದಿಯಂದು ನಡೆಯುವ ಹಸಿಕರಗದ ಉತ್ಸವ ಯುಗಾದಿ ಮುನ್ನಾ ದಿನ ರಾತ್ರಿ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇಗುಲದಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಪೂಜೆ ನೆರವೇರಿಸಿ ಆರಂಭವಾಯಿತು ಮಲ್ಲಿಗೆ ಹೂವಿನಿಂದ ಶೃಂಗಾರ ಮಾಡಿದ ಕಳಶದ ಆಕೃತಿಯ ಹಸಿಕರಗಕ್ಕೆ ಕರಗದ ಪೂಜಾರಿಗಳು ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು ಕರಗ ಹೊರಲಿರುವ ಕರಗದ ಪೂಜಾರಿ ಹೋಳೂರಿನ ವೆಂಕಟೇಶಪ್ಪ ಹಾಗು ಸಂಗಡಿಗರು ಹಸಿ ಕರಗ ಮಡಿಲಲ್ಲಿ ಇರಿಸಿಕೊಂಡು ಮೆರವಣಿಗೆಯಲ್ಲಿ ಸಾಗಿ ಬಂದರು. ಶ್ರೀ ಚೌಡೇಶ್ವರಿ ದೇವಾಲಯದಿಂದ ಆರಂಭವಾದ ಹಸಿ ಕರಗ ಕಟ್ಟೆಕೆಳಗಿನ ಪಾಳ್ಯ ಅಲ್ಲಿನ ಶ್ರೀನಿವಾಸನ ದೇವಸ್ಥಾನ,ವಲ್ಲಭಾಯ್ ರಸ್ತೆ ಶಂಕರಮಠ ವೃತ್ತ ಹಳೇಪೇಟೆ ಮುಳಬಾಗಿಲು ವೃತ್ತ ಎಂ.ಜಿ.ರಸ್ತೆ ಸಾಗಿ ಕನ್ಯಾಕಪರಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕರಗಧಾರಿಗಳು ತಮಟೆ ಸದ್ದಿಗೆ ಹೆಜ್ಜೆ ಇಡುತ್ತ ಸಂಚರಿಸಿದರು.ಕರಗದ ಮುಂದೆ ಸಾಗಿದ ಕಿಲುಕುದರೆ ,ಆಂಧ್ರಪ್ರದೇಶದ ಬುಟ್ಟ ಬೊಮ್ಮಲು ಗಾರಡಿಗೊಂಬೆಗಳು, ದೇವರ ಮುಖವಾಡಗಳು ಹಾಗಿದ್ದ ಬೊಂಬೆಗಳ ನೃತ್ಯ ಸಂಭ್ರಮ ಜನಾಕರ್ಷಣೆಯಾಗಿತ್ತು.
ಶೃಂಗರಿಸಿದ್ದ ರಸ್ತೆಗಳು
ಹಸಿಕರಗ ಸಾಗಿ ಬಂದ ದಾರಿ ಉದ್ದಕ್ಕೂ ರಂಗೋಲಿ ಹಾಕಿ ವಿದ್ಯತ್ ದೀಪಾಲಂಕಾರ ಮಾಡಿ ತಳಿರು ತೋರಣಗಳಿಂದ ಶೃಂಗರಿಸಿ ಸಾರ್ವಜನಿಕರು ಹಸಿ ಕರಗವನ್ನು ಸ್ವಾಗತಿಸುವ ಮೂಲಕ ಹಸಿ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26