ನ್ಯೂಜ್ ಡೆಸ್ಕ್:ದುಬೈನಲ್ಲಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮತ್ವದ ಪಂದ್ಯದಲ್ಲಿ ಇಂಡಿಯಾ-ಪಾಕಿಸ್ತಾನ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ 6 ವಿಕೆಟ್ಗಳ ಭಾರಿ ಅಂತರದಿಂದ ಗೆಲವನ್ನು ತನ್ನದಾಗಿದಿಕೊಂಡಿದೆ.
ಹಲವು ದಿನಗಳ ನಂತರ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ Virat Kohli ಉತ್ತಮ ಪ್ರದರ್ಶನ ನೀಡಿ ಶತಕ ಬಾರಿಸಿದ್ದು ಟೀಮ್ ಇಂಡಿಯಾ ಗೆಲುವಿಗೆ ಸಹಕಾರಿಯಾಗಿದೆ. ಕಿಂಗ್ ಕೊಹ್ಲಿ ಶತಕ ತಮ್ಮ ವೃತ್ತಿಜೀವನದ 51 ನೇ ಸೆಂಚುರಿ ಗಳಿಸಿ “ಪಂದ್ಯದ ಆಟಗಾರ”plyer of match ಎಂದು ಗುರುತಿಸಲಾಗಿದೆ ಕೊಹ್ಲಿಯೊಂದಿಗೆ ಶ್ರೇಯಸ್ ಅಯ್ಯರ್ (56) ಮತ್ತು ಶುಭಮನ್ ಗಿಲ್ (46) ಉತ್ತಮವಾಗಿ ಆಟವಾಡಿ ನೆರವು ನೀಡಿದ್ದಾರೆ ರೋಹಿತ್ ಶರ್ಮಾ (20) ಮತ್ತು ಹಾರ್ದಿಕ್ (8) ಬೇಗನೆ ಔಟಾಗಿದ್ದು ಪ್ರೇಕ್ಷಕರನ್ನು ಆತಂಕಕ್ಕೆ ಈಡು ಮಾಡಿತ್ತಾದರು ಗಿಲ್ ಮತ್ತು ಶ್ರೇಯಸ್ ಪಿಚ್ ಅನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ರನ್ ಗಳಿಸಿದರು.
ಕೊಹ್ಲಿ ಮತ್ತು ಶ್ರೇಯಸ್ ಉತ್ತಮ ಸಮನ್ವಯದಿಂದ ಆಡಿದರು, ಪಾಕಿಸ್ತಾನಿ ಬೌಲರ್ಗಳಿಗೆ ಯಾವುದೇ ಅವಕಾಶ ನೀಡಲಿಲ್ಲ. ಅದರಲ್ಲೂ ಕೊಹ್ಲಿ ಬಹಳ ದಿನಗಳ ನಂತರ ತಮ್ಮ trademark ಹೋಡೆತಗಳಿಂದ ವಿಜೃಂಭಿಸಿದರು. ಅತ್ಯುತ್ತಮ ಕವರ್ ಡ್ರೈವ್ಗಳೊಂದಿಗೆ ಆತ್ಮವಿಶ್ವಾಸದಿಂದ ಪ್ರದರ್ಶನ ನೀಡಿದರು ಅದರಲ್ಲೂ ಪಾಕಿಸ್ತಾನಿ ಫೀಲ್ಡರ್ಗಳು ಕ್ಯಾಚ್ಗಳನ್ನು ಬಿಟ್ಟಿದ್ದು ಕೊಹ್ಲಿಗೆ ಅವಕಾಶ ಸಿಕ್ಕಿತು. ಜೊತೆಗೆ ಶ್ರೇಯಸ್ ಪ್ರದರ್ಶನ ಸಮರ್ಥವಾಗಿ ಇತ್ತು ಅನಗತ್ಯ ಹೊಡೆತಗಳನ್ನು ತೆಗೆದುಕೊಳ್ಳದೆ ಸಮಯಪ್ರಜ್ಞೆ ಮೆರೆಯುವುದರ ಮೂಲಕ 56 ರನ್ ಗಳಿಸಿ ಕೊನೆಯಲ್ಲಿ ಔಟಾದರು.
ಪಾಕಿಸ್ತಾನಿ ಬೌಲರ್ಗಳು ಹೆಚ್ಚಿನ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಭಾರತ ತಂಡ ಪಾಕಿಸ್ತಾನ ನೀಡಿದ್ದ ಗುರಿಯನ್ನು ಕೇವಲ 42.3 ಓವರ್ಗಳಲ್ಲಿ ತಲುಪಿತು. ಟಾಸ್ ಗೆದ್ದ ಪಾಕಿಸ್ತಾನ ನಾಯಕ ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ ಆಯ್ದುಕೊಂಡು 49.4 ಓವರ್ಗಳಲ್ಲಿ 241 ರನ್ಗಳಿಗೆ ಪಾಕಿಸ್ತಾನ ಆಲೌಟ್ ಆಯಿತು. ನಾಯಕ ರಿಜ್ವಾನ್ (77 ಎಸೆತಗಳಲ್ಲಿ 46) ಮತ್ತು ಶಕೀಲ್ (76 ಎಸೆತಗಳಲ್ಲಿ 62) ಗಮನಾರ್ಹ ಸ್ಕೋರ್ಗಳನ್ನು ಗಳಿಸಿದರು. ಕುಲ್ದೀಪ್ ಮೂರು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ ಎರಡು ವಿಕೆಟ್ ಪಡೆದರು. ಹರ್ಷಿತ್ ರಾಣಾ, ಜಡೇಜಾ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಅದ್ಭುತ ಫೀಲ್ಡಿಂಗ್ ಮಾಡಿ ಎರಡು ರನ್ ಔಟ್ ಮಾಡಿದರು. ಈ ಟೂರ್ನಿಯಲ್ಲಿ ಭಾರತ ತನ್ನ ಮುಂದಿನ ಪಂದ್ಯವನ್ನು ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26