ಸಿನಿ ಡೆಸ್ಕ್:ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂಧನದ ಎಪಿಸೋಡ್ ನಲ್ಲಿ ಬಹು ದೊಡ್ಡ ಟ್ವಿಸ್ಟ್ ಸಿಕ್ಕಿದೆ ಒಂದಡೆ ನಾಂಪಲ್ಲಿ ನ್ಯಾಯಾಲಯ 14 ದಿನಗಳ ಬಂಧನವನ್ನು ಘೋಷಿಸಿತ್ತು ಆದರೆ ಅವರಿಗೆ ಹೈಕೋರ್ಟ್ ನಲ್ಲಿ ಮಧ್ಯಂತರ ಜಾಮೀನು ಸಿಕ್ಕಿದೆ.
ಪುಷ್ಪ 2 ಸಿನಿಮಾದ ಪ್ರಥಮ ಪ್ರದರ್ಶನದ ವೇಳೆ ಸಂಧ್ಯಾ ಥಿಯೇಟರ್ ರೇವತಿ ಎಂಬ ಮಹಿಳೆ ಸಾವಿಗಿಡಾಗಿದ್ದು ಇದಕ್ಕೆ ಸಂಬಂದಿಸಿದಂತೆ ಅಲ್ಲು ಅರ್ಜುನ್ ಸೇರಿದಂತೆ ಸಿನಿಮಾ ತಂಡದ ವಿರುದ್ಧ ಪೊಲೀಸರು ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದರು ಅದರಂತೆ ಶುಕ್ರವಾರ ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್ನನ್ನು ಬಂಧಿಸಿದ್ದು ಮೊದಲು ಬನ್ನಿಯನ್ನು ಚಿಕ್ಕಡ್ ಪಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದರು.. ಪೊಲೀಸರು ಆತನ ಹೇಳಿಕೆಯನ್ನು ದಾಖಲಿಸಿಕೊಂಡು ಅಲ್ಲಿಂದ ಗಾಂಧಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ನಾಂಪಲ್ಲಿ ಕೋರ್ಟಿನಲ್ಲಿ ಹಾಜರುಪಡಿಸಿದ್ದು ಅಲ್ಲಿ ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯ ಅಲ್ಲು ಅರ್ಜುನ್ಗೆ 14 ದಿನಗಳ ಕಾಲ ರಿಮಾಂಡ್ ನೀಡಿತ್ತು ಅದರಂತೆ ಪೊಲೀಸರು ಆತನನ್ನು ಚಂಚಲ್ ಗುಡಾ ಜೈಲಿಗೆ ಕರೆದೊಯ್ದರು.
ಸಿನಿಮಾಕ್ಕೂ ಮೀರಿದ ಟ್ವಿಸ್ಟ್!
ಪುಷ್ಪಾ ಸಿನಿಮಾವನ್ನೆ ಮೀರಿಸಿದಂತೆ ಶುಕ್ರವಾರ ಅಲ್ಲು ಅರ್ಜುನ್ ನಿಜ ಜೀವನದಲ್ಲೂ ಬಂಧನದ ಸಮಯದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ ಜೈಲಿಗೆ ಕರೆದುಕೊಂಡು ಹೋದ ತಕ್ಷಣ ಹೈಕೋರ್ಟ್ ಅನಿರೀಕ್ಷಿತ ತೀರ್ಪು ಪ್ರಕಟಿಸಿದ್ದು ಅಲ್ಲು ಅರ್ಜುನ್ಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ಸಿಕ್ಕಿದೆ.
ಅಲ್ಲು ಅರ್ಜುನ್ ರನ್ನು ಪೊಲೀಸರು ಬಂಧಿಸುತ್ತಿದ್ದಂತೆ ಅಲ್ಲುಅರ್ಜುನ್ ಅವರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದು ಅಲ್ಲಿ ಅಲ್ಲುಅರ್ಜುನ್ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸುವಂತೆ ಅವರು ಅರ್ಜಿ ಸಲ್ಲಿಸಿದ್ದರು.ಸಂಜೆ 4 ಗಂಟೆ ಸಮಯದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಎರಡು ಕಡೆ ವಕೀಲರು ವಾದ ಮಂಡಿಸಿದರು. ಬಳಿಕ ಅಲ್ಲು ಅರ್ಜುನ್ಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ ವೈಯಕ್ತಿಕ ಬಾಂಡ್ ತೆಗೆದುಕೊಂಡು ಅವರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ಪೀಠ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದೆ. ಅಲ್ಲು ಅರ್ಜುನ್ ಪರವಾಗಿ ಖ್ಯಾತ ವಕೀಲ ನಿರಂಜನ್ ರೆಡ್ಡಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಸಾವಿನ ಪ್ರಕರಣದಲ್ಲಿ ಎಲ್ಲವೂ ಅನ್ವಯಿಸುವುದಿಲ್ಲ
ಈ ಪ್ರಕರಣದಲ್ಲಿ ಹಾಕಲಾದ ಎಲ್ಲಾ ಸೆಕ್ಷನ್ಗಳು ನಟ ಅಲ್ಲು ಅರ್ಜುನ್ಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅದೆ ರಿತಿ ನಟ ಎಂಬ ಕಾರಣಕ್ಕೆ ಸಾಮಾನ್ಯ ನಾಗರಿಕನಿಗೆ ಅನ್ವಯವಾಗುವ ವಿನಾಯಿತಿಗಳನ್ನು ನಿರಾಕರಿಸಲಾಗುವುದಿಲ್ಲ ಎಂದು ಹೇಳಿರುವ ನ್ಯಾಯಲಯ ಅಲ್ಲುಅರ್ಜುನ್ಗೂ ಬದುಕುವ ಹಕ್ಕಿದೆ.. ಸೆಕ್ಷನ್ 105(ಬಿ) ಮತ್ತು 118 ರ ಅಡಿಯಲ್ಲಿರುವ ಅಪರಾಧಗಳನ್ನು ಅಲ್ಲು ಅರ್ಜುನ್ ನಟ ಎಂಬ ಕಾರಣಕ್ಕೆ ಹೇಳಬೇಕಾ..? ಪ್ರಶ್ನೆಗಳನ್ನು ಕೇಳಿಬಂದಿದೆ,ಮೃತ ಮಹಿಳೆ ರೇವತಿ ಕುಟುಂಬಕ್ಕೆ ಸಹಾನುಭೂತಿ ಇದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಎನ್ನಲಾಗಿದ್ದು ಈ ಆದೇಶದಲ್ಲಿ ಸರ್ಕಾರ ಮತ್ತು ಅಲ್ಲು ಅರ್ಜುನ್ ಪರ ವಾದ ಆಲಿಸಿದ ನ್ಯಾಯಾಲಯ ರದ್ದು ಅರ್ಜಿಯನ್ನು ಜನವರಿ 21ಕ್ಕೆ ಮುಂದೂಡಿದೆ.ಒಟ್ಟಿನಲ್ಲಿ ಅಲ್ಲು ಅರ್ಜುನ್ ಪ್ರಕರಣಕ್ಕೆ ಹೈಕೋರ್ಟ್ ಜಾಮೀನು ನೀಡಿದ ಬಳಿಕ ಭಾರೀ ರಿಲೀಫ್ ಸಿಕ್ಕಂತಾಗಿದೆ.
ಅಲ್ಲು ಅರ್ಜುನ್ ನಿವಾಸಕ್ಕೆ ಚಿರಂಜಿವಿ ಸಹೋದರರು
ಅಲ್ಲು ಅರ್ಜುನ್ ಬಂಧನದ ವಿಚಾರ ತಿಳಿದ ತಕ್ಷಣ ಚಿರಂಜೀವಿ ವಿಶ್ವಂಭರ ಸಿನಿಮಾದ ಶೂಟಿಂಗ್ ಕ್ಯಾನ್ಸಲ್ ಮಾಡಿ ನೇರವಾಗಿ ಅಲ್ಲು ಅರ್ಜುನ್ ಮನೆಗೆ ತೆರಳಿ ಕುಟುಂಬಸ್ಥರ ಸಮಧಾನ ಮಾಡುತ್ತಿದ್ದಂತೆ ಮೆಗಾ ಬ್ರದರ್ ನಾಗಬಾಬು ಸಹ ಅಲ್ಲು ಅರ್ಜುನ್ ನಿವಾಸಕ್ಕೆ ತೆರಳಿದ್ದಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27