ಶ್ರೀನಿವಾಸಪುರ:ಶ್ರೀನಿವಾಸಪುರ ಪುರಸಭೆ ಅಧ್ಯಕ್ಷ ಬಿ. ಆರ್ .ಭಾಸ್ಕರ್ ಅಧ್ಯಕ್ಷತೆಯಲ್ಲಿ ನಡೆದ 2025 -26 ನೇ ಸಾಲಿನ ಪುರಸಭೆಯಆಯ-ವ್ಯಯ ಸಭೆಯಲ್ಲಿ ಸುಮಾರು 87 ಲಕ್ಷ ಬಜೆಟ್ ಮಂಡಿಸಲಾಯಿತು.
ಪುರಸಭೆ ಕಚೇರಿ ಸಭಾಂಗಣದಲ್ಲಿ ನಡೆದ ಬಜೆಟ್ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಭಾಸ್ಕರ್ ಪಟ್ಟಣದ ವ್ಯಾಪ್ತಿಯಲ್ಲಿನ ಕೆಲ ಖಾಸಗಿ ಶಿಕ್ಷಣ ಸಂಸ್ಥೆ ಮಾಲಿಕರು ಹಾಗು ಕೆಲ ವಾಣಿಜ್ಯ ಮಳಿಗೆಗಳ ಮಾಲೀಕರು ಅನೇಕ ವರ್ಷಗಳಿಂದ ಕಂದಾಯವನ್ನು ಕಟ್ಟಿಲ್ಲ ಇಂತವರು ಪಟ್ಟಣದ ಅಭಿವೃದ್ಧಿಗಾಗಿ ಸಹಕರಿಸಬೇಕೆಂದು ಮನವಿ ಮಾಡಿದರು. ಈ-ಸ್ವತ್ತು ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು,ಈ-ಸ್ವತ್ತು ಮಾಡಿಸಿಕೊಳ್ಳದವರು ನಿಗಧಿತ ಅವಧಿಯೊಳಗೆ ಈ-ಸ್ವತ್ತು ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಟ್ಟೆಕೆಳಗಿನ ಪಾಳ್ಯವನ್ನು ಕೊಳಚೆ ನಿರ್ಮೂಲನ ಪ್ರದೇಶ ಎಂದು ಘೋಷಣೆ ಮಾಡುವ ವಿಚಾರ ಸೇರಿದಂತೆ ಪಟ್ಟಣದ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಿಗೆ ಪುಟ್ಪಾತ್ ನಿರ್ಮಾಣ ಮಾಡುವುದು ಸಭೆಯಲ್ಲಿ ಸಂಕ್ಷಿಪ್ತವಾಗಿ ಚರ್ಚೆಸಲಾಯಿತು.
ಮನೆ ಕಂದಾಯ ಪರಿಷ್ಕರಣೆ,ಮಳಿಗೆ ಬಾಡಿಗೆ,ಕಟ್ಟಡ ಪರವಾನಿಗೆ ಶುಲ್ಕ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಗಳಿಂದ ಹೆಚ್ಚಿನ ಧನ ಸಹಾಯ ನಿರೀಕ್ಷಿಸಿರುವ ಪುರಸಭೆ ಅಧ್ಯಕ್ಷರು 2025-26ನೇ ಸಾಲಿನಲ್ಲಿ 87,56,000 ಉಳಿತಾಯ ಬಜೆಟ್ ಮಂಡಿಸಿದರು.
ಪಟ್ಟಣದ ಅಭಿವೃದ್ಧಿಗೆ ಸಹಕರಿಸಿ
ಪಟ್ಟಣದ ಅಭಿವೃದ್ಧಿಗೆ ಸಾರ್ವಜನಿಕರು ಸಹಕಾರ ನೀಡುವ ಮೂಲಕ ಸ್ವಚ್ಚ ಹಾಗು ಸುಂದರವಾದ ಪಟ್ಟಣವನ್ನಾಗಿಸಲು ಪುರಸಭೆಯೊಂದಿಗೆ ಕೈ ಜೊಡಿಸುವಂತೆ ಕರೆ ಇತ್ತರು.
ಪುಟ್ಬಾತ್ ಅತಿಕ್ರಮಕ್ಕೆ ಕಡಿವಾಣ
ಪುರಸಭೆ ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕಾರ ನೀಡುವಂತೆ ಕೋರಿದ ಅವರು ಪಟ್ಟಣದಲ್ಲಿ ಪುಟ್ಬಾತ್ ಅತಿಕ್ರಮಣ ದಿಂದ ಸಂಚಾರಕ್ಕೆ ತೊಂದರೆಯಾಗಿದ್ದು ವಿಶೇಷವಾಗಿ ರಾಜಾಜಿರಸ್ತೆ, ರಾಮಕೃಷ್ಣ ಬಡವಾಣೆ ಮುಖ್ಯ ರಸ್ತೆ ರಾಮಕೃಷ್ಣ ರಸ್ತೆಗಳಲ್ಲಿ ಕೆಲವರು ಪುಟ್ಪಾತ್ ಅತಿಕ್ರಮಿಸಿಕೊಂಡು ವ್ಯಾಪಾರ ವಹಿವಾಟು ಮಾಡುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಲಿದೆ.ಯಾವುದೇ ಕಾರಣಕ್ಕೂ ಪುಟ್ಪಾತ್ನಲ್ಲಿ ವ್ಯಾಪಾರ ವಹಿವಾಟು ನಡೆಸದಂತೆ ಕಟ್ಟನಿಟ್ಟಿನ ಕ್ರಮಕೈಗೊಂಡು ಕಡಿವಾಣ ಹಾಕುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಕೆ.ಎಸ್. ಸುನೀತಾ ಪುರಸಭಾ ಮುಖ್ಯಾಧಿಕಾರಿ ವಿ. ನಾಗರಾಜು ಕಂದಾಯ ಅಧಿಕಾರಿ ಎನ್.ಶಂಕರ್, ನಿರೀಕ್ಷಕ ಮಂಜುನಾಥ್, ಕಂದಾಯ ವಸೂಲಿಗಾರ ಪ್ರತಾಪ್, ಅರೋಗ್ಯ ನಿರೀಕ್ಷಕ ಸಿ. ಸುರೇಶ್, ಎಫ್ಡಿಎಗಳಾದ ಸಂತೋಷ, ನಾಗೇಶ್, ಇತರೆ ಸಿಬ್ಬಂದಿಗಳು ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26