ಶ್ರೀನಿವಾಸಪುರ:Srinivaspur ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ವಿಐಪಿ ಶಾಲೆಯ ವಿದ್ಯಾರ್ಥಿಗಳು ಸಿಬಿಎಸ್ಇ 10ನೇ ತರಗತಿ ಪರಿಕ್ಷೆಯಲ್ಲಿ ಶೇ100 ಫಲಿತಾಂಶ ಸಾಧಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಈ ಕುರಿತು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ವಿಐಪಿ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಹಾಗು ಖ್ಯಾತ ವೈದ್ಯ ಡಾ.ವೇಣುಗೋಪಾಲ್ ಶಾಲೆಯ ಬೋದಕ ಸಿಬ್ಬಂದಿ ಹಾಗು ಪೋಷಕರ ಸಹಕಾರದಿಂದ ನಮ್ಮ ಶಾಲೆಯ 10 ನೇ ತರಗತಿ ಸಿ.ಬಿ.ಎಸ್.ಇ ವಿದ್ಯಾರ್ಥಿಗಳು ಸತತ ಐದನೆ ಬಾರಿಗೆ ಶೇ 100 ಫಲಿತಾಂಶ ಸಾಧಿಸಿ ಕೋಲಾರ ಜಿಲ್ಲೆಯಲ್ಲೆ ಪ್ರಥಮ ಸ್ಥಾನ ಗಳಿಸಿದೆ ಎಂದರು.
ದಶಕದ ಸಂಭ್ರಮದಲ್ಲಿರುವ ವಿಐಪಿ ಶಾಲೆ VISION INDIA PUBLIC SCHOOL ಸಿಬಿಎಸ್ಇ 10ನೇ ತರಗತಿಯ ಐದನೇಯ ಬ್ಯಾಚ್ ವಿದ್ಯಾರ್ಥಿಗಳು ನೂರರಷ್ಟು ಫಲಿತಾಂಶ ಸಾಧಿಸಿದ್ದಾರೆ.

ಈ ಬಾರಿ 5ನೇ ಬ್ಯಾಚ್ ನಲ್ಲಿ 58 ವಿದ್ಯಾರ್ಥಿಗಳು ಸಿಬಿಎಸ್ಇ 10ನೇ ತರಗತಿ ಪರಿಕ್ಷೆ ತಗೆದುಕೊಂಡಿದ್ದು ಅದರಲ್ಲಿ 12 ಅತ್ಯುನ್ನತ ಶ್ರೇಣಿ,16 ಉನ್ನತ ಶ್ರೇಣಿ, 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 11 ವಿದ್ಯಾರ್ಥಿಗಳು ದ್ವಿತೀಯಶ್ರೇಣಿಯಲ್ಲಿ ಉತ್ತೀರ್ಣರಾಗಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.ಧರನೀಶ್ 480 ಅಂಕಗಳಿಸಿದ್ದರೆ,ಕವನ 478ಅಂಕ,ನಂದಿತ 477 ಅಂಕ,ಪೂಜಿತರೆಡ್ಡಿ 472ಅಂಕ,ಮಧುಕರ್ ನಾರಯಣ್469ಅಂಕ ಹಾಗು ಮೇಘಾಶ್ರೀ465 ಅಂಕ ಗಳಿಸಿದ್ದಾರೆ.
ಸುದ್ಧಿಗೋಷ್ಟಿಯಲ್ಲಿ ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಕವಿತಾ,ಪ್ರಾಂಶುಪಾಲೆ ಅಸ್ಮತ್ ತಬ್ಸಮ್,ದೀಪ,ಸೋಗ್ರ ಜಬೀಮ್ ಮುಂತಾದವರು ಇದ್ದರು.



