ನ್ಯೂಜ್ ಡೆಸ್ಕ್: 10 ಮತ್ತು 20 ರೂ. ಮುಖಬೆಲೆ ನಾಣ್ಯಗಳನ್ನು ನೀರಾಕರಿಸಿದರೆ ರಿಸರ್ವ್ ಬ್ಯಾಂಕ್ ಆದೇಶದಂತೆ ದೂರು ದಾಖಲಿಸಬಹುದಾಗಿದ್ದು ದೂರು ಸಾಬಿತಾದರೆ IPC ಸೆಕ್ಷನ್ 124A ಅಡಿಯಲ್ಲಿ ಜೈಲು ಶಿಕ್ಷೆ ಆಗಲಿದೆ ಎಂದು ಆದೇಶ ಆಗಿದೆ ಎಂದು ಹೇಳಲಾಗಿದ್ದು, ಮುಂದಿನ ದಿನಗಳಲ್ಲಿ 10 ಮತ್ತು 20 ರೂಪಾಯಿಯ ನಾಣ್ಯಗಳು ಅಮಾನ್ಯವಾಗಿದೆ ಎಂದು ಸಬೂಬು ಹೇಳಿ ನಾಣ್ಯಗಳನ್ನು ನೀರಾಕರಿಸಿದರೆ ನಾಣ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ ಶಿಕ್ಷೆ ಬೀಳಲಿದೆ.
ಆದ್ದರಿಂದ ಈ ರೀತಿಯ ತಪ್ಪನ್ನು ಮಾಡಲು ಹೋಗಬೇಡಿ ಎಂದು ಅವರು ಎಚ್ಚರಿಕೆ ಆರ್.ಬಿ.ಐ ಹೇಳಿದೆ. ಸಾಮಾಜಿಕ ಜಾಲತಾಣಗಳಲ್ಲಿ 10 ಮತ್ತು 20 ರೂಪಾಯಿ ನಾಣ್ಯಗಳು ಅಮಾನ್ಯವಾಗಿದೆ ಚಲಾವಣೆ ಆಗುವುದಿಲ್ಲ ಎಂಬ ಸುದ್ದಿ ಸಾಮಜಿಕ ಜಾಲ ತಾಣಗಳಲ್ಲಿ ಹಬ್ಬಿತ್ತು.
ಅಂಗಡಿ ಮಾಲೀಕರು ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದು ಮಾರುಕಟ್ಟೆಯಲ್ಲಿ ಚಿಲ್ಲರೆ ಸಮಸ್ಯೆಯಿಂದ ವ್ಯಾಪರಸ್ಥರು ಮತ್ತು ಸಾರ್ವಜನಿಕರು ನಾಣ್ಯಗಳ ವಿನಿಮಯ ನಿರಾಕರಣೆಯಿಂದಾಗಿ ತೊಂದರೆಗೆ ಒಳಗಾಗಿದ್ದರು ಈ ಬಗ್ಗೆ ಹೊಸ ಕಾನೂನು ಜಾರಿಗೆ ತಂದಿರುವ ಭಾರತ ಸರ್ಕಾರ 10 ಮತ್ತು 20 ರೂಪಾಯಿ ನಾಣ್ಯಗಳು ಪ್ರಮಾಣೀಕೃತ ಕರೆನ್ಸಿಗಳಾಗಿವೆ ಮತ್ತು ಅವುಗಳನ್ನು ತಿರಸ್ಕರಿಸುವ ಹಕ್ಕು ಯಾರಿಗೂ ಇಲ್ಲ ಯಾರಾದರೂ ಸ್ವೀಕರಿಸಲು ಅಥವಾ ನೀಡಲು ನಿರಾಕರಿಸಿದ್ದೆ ಆದರೆ ಕಾನೂನಿನ ಅಡಿಯಲ್ಲಿ ಅಪರಾಧವಾಗುತ್ತದೆ ಈ ರೀತಿ ತಪ್ಪು ಮಾಡಿದರೆ, ಅವರ ವಿರುದ್ಧ ಐಪಿಸಿ ಸೆಕ್ಷನ್ 124 ಎ ಅಡಿಯಲ್ಲಿ ದೂರು ದಾಖಲಿಸಬಹುದಾಗಿದ್ದು ಈ ಪ್ರಕರಣದಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯೂ ಇದೆ.
ನಾಣ್ಯಗಳ ವಿಚಾರದಲ್ಲಿ ಕಾನೂನು ಅವಶ್ಯಕವಾಗಿತ್ತು
ಹತ್ತು ರೂ. ನಾಣ್ಯಗಳನ್ನು ವ್ಯಾಪಾರಿಗಳಿಗೆ ನೀಡಿದರೆ ನಿರಾಕರಿಸುತ್ತಾರೆ ಇದರಿಂದ ಸಾರ್ವಜನಿಕರಲ್ಲಿ ಹಾಗೂ ವ್ಯಾಪಾರಿಗಳಲ್ಲಿ ಸಾಕಷ್ಟು ಗೊಂದಲಮಯ ವಾತವರಣ ಇದೆ ಈ ಬಗ್ಗೆ ಕೇಂದ್ರ ಸರ್ಕಾರ ಕಾನೂನು ಜಾರಿಮಾಡಿರುವ ಹೊಸ ಕಾನೂನಿನಿಂದ ನಾಣ್ಯಗಳ ವಿಚಾರವಾಗಿ ವ್ಯಾಪಾರಸ್ಥರು ಮತ್ತು ಸಾರ್ವಜನಿಕರಲ್ಲಿ ಇರುವ ಗೊಂದಲ ಬಗೆ ಹರೆಯುತ್ತದೆ ಎಂದು ರೈತ ನಲ್ಲಪಲ್ಲಿ ರೆಡ್ಡೆಪ್ಪ ಹೇಳುತ್ತಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27