ಶ್ರೀನಿವಾಸಪುರ:-ರಾಜ್ಯದಲ್ಲಿ ರೈತರ ಬಡವರ ಪರವಾಗಿ ಇರುವಂತ ಜೆ.ಡಿ.ಎಸ್ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಗ್ರಾಮೀಣಭಾಗದ ಯುವ ಕಾರ್ಯಕರ್ತರು ಸಂಘಟಿತರಾಗಿ ಕಾರ್ಯನಿರ್ವಹಿಸಿ ಪಕ್ಷವನ್ನು ಗೆಲ್ಲಿಸಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡೋಣ ಎಂದು ಶ್ರೀನಿವಾಸಪುರದ ಮಾಜಿ ಶಾಸಕ ಹಾಗು ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ದಿ ಹೇಳಿದರು ಅವರು ಇಂದು ತಾಲೂಕಿನ ಕಸಬಾ ಹೋಬಳಿ ಗಾಂಡ್ಲಹಳ್ಳಿ ಗ್ರಾಮದಲ್ಲಿ ನಡೆದ ದಳಸನೂರು ಮತ್ತು ಮಾಸ್ತೇನಹಳ್ಲಿ ಪಂಚಾಯಿತಿ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ವಿಶೇಷವಾಗಿ ರೈತರ ಸಾಲಮನ್ನಾ ಯೋಜನೆ ರೂಪಿಸಿ ಭಾರತದಲ್ಲಿ ಯಾರೂ ಮಾಡದಂತ ಅದ್ಭುತವಾದ ಕಾರ್ಯಕ್ರಮವನ್ನು ರೈತರಿಗೆ ನೀಡಿರುತ್ತಾರೆ ಎಂದರು.
ಭಗವಂತ ಕರುಣಿಸಿದ್ದು ವರುಣನ ಕೃಪೆಯಿಂದ ಕೋಲಾರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ ನಮ್ಮ ತಾಲ್ಲೂಕಿನಲ್ಲೂ ಬಹುತೇಕ ಕೆರೆಗಳು ತುಂಬಿ ಕೋಡಿಹರಿಯುತ್ತಿದೆ ಎಂದ ಅವರು ರೈತ ಉತ್ತಮ ಬೆಳೆ ತಗೆದು ಸಂತೃಪ್ತ ಜೀವನ ನಡೆಸುವಂತಾಗಲಿ ಎಂದರು.
ಮುಳಬಾಗಿಲು ತಾಲೂಕು ಜೆ ಡಿ ಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಮಾತನಾಡಿ ಮುಂಬರುವ ಜಿಲ್ಲಾಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳು ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗುತ್ತದೆ ಆ ಹಿನ್ನಲೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಎಲ್ಲಾ ತಾಲೂಕು ಪಂಚಾತಿಗಳು ಮತ್ತು ಕೋಲಾರ ಜಿಲ್ಲಾ ಪಂಚಾಯಿತಿ ಜೆ ಡಿ ಎಸ್ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸುವಂತೆ ಹೇಳಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಗಾಂಡ್ಲಹಳ್ಳಿ ಮತ್ತು ಶೆಟ್ಟಿಹಳ್ಳಿ ಕೆರೆಗಳಿಗೆ ಬಾಗಿನ ಅರ್ಪಿಸಿದರು
ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ,ಮಾಜಿ ಸದಸ್ಯ ನಂಜುಂಡಪ್ಪ,ಎಂ.ಶ್ರೀನಿವಾಸನ್,ಮುಖಂಡರಾದ ಸಿ.ಎಂ.ಅರ್ ಶ್ರೀನಾಥ್,ಭಿಮಗುಂಟಪಲ್ಲಿಶಿವಾರೆಡ್ಡಿ, ಸಹಕಾರಿ ಧುರೀಣ ರಾಮಚಂದ್ರೇಗೌಡ, ನಾಗೇಶ್,ಬಿ.ವೆಂಕಟರೆಡ್ಡಿ,ದಳಸನೂರು ಮಂಜುನಾಥ್,ತೆರ್ನಹಳ್ಳಿಮಂಜು ಮುಂತಾದವರು ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28