ಶ್ರೀನಿವಾಸಪುರ: ಶ್ರೀನಿವಾಸಪುರ ಕೇಂದ್ರವಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳಯುವ ಶ್ರೀನಿವಾಸಪುರದಲ್ಲಿ ಪ್ರಕೃತಿ ವಿಕೋಪದಿಂದ ಮಾವು ಬೆಳೆಗಾರರು ನಷ್ಟಕ್ಕೆ ಒಳಗಾಗಿದ್ದಾರೆ ಈ ಬಗ್ಗೆ ನಾನು ಮಾವಿನ ತೋಟಗಳಿಗೆ ಬೇಟಿ ನೀಡಿ ನಷ್ಟಕ್ಕೆ ಒಳಗಾಗಿರುವುದನ್ನು ಖುದ್ದು ಪರಿಶೀಲಿಸಿದ್ದೇನೆ ಎಂದು ವಿಧಾನಪರಿಷತ್ ಮುಖ್ಯಸಚೇತಕ ಡಾ. ವೈ.ಎ.ನಾರಾಯಣಸ್ವಾಮಿ ಹೇಳಿದರು.
ಅವರು ಪ್ರತಿಕಾಗೋಷ್ಟಿ ನಡೆಸಿ ಮಾತನಾಡಿ ಈ ವರ್ಷ ಮಾವು ಆರಂಭದಿಂದಲೆ ಪ್ರಾಕೃತಿಕ ಅವಕೃಪೆಗೆ ಒಳಗಾಗಿ ಶೇ30% ರಷ್ಟು ಮಾತ್ರ ಫಸಲು ಬಂದಿತ್ತು ಅದು ಸಹ 3-4 ದಿನಗಳಿಂದ ಬೀಸುತ್ತಿರುವ ಗಾಳಿ ಆಲಿಕಲ್ಲು ಮಳೆಯಿಂದಾಗಿ ಅರ್ದ ಫಸಲು ನಷ್ಟಕ್ಕೆ ಒಳಗಾಗಿದೆ ಇದರಿಂದ ಮಾವಿನ ಬೆಳೆಗಾರರು ಸಂಕಷ್ಟಲ್ಲಿ ಇದ್ದಾರೆ .ಅವರಿಗೆ ಎನ್ಡಿಆರ್ಎಫ್,ಎಸ್ಡಿಆರ್ಎಫ್ ಅಡಿಯಲ್ಲಿ ಪರಿಹಾರ ಕೊಟ್ಟರೆ ಅವರಿಗೆ ರೈತರಿಗೆ ಏನು ಪ್ರಯೋಜನವಾಗುವುದಿಲ್ಲ ಇದಕ್ಕೆ ಭಾರತೀಯ ಜನತಾ ಪಕ್ಷದ ಸರ್ಕಾರ ವಿಶೇಷವಾಗಿ ರೈತರ ಪರ ಕಾಳಜಿ ವಹಿಸಿ ಕಳೆದ ವರ್ಷ ಎನ್ಡಿಆರ್ಎಫ್ನ ಗೈಡಲೈನ್ಸ್ ಮೀರಿ ಹೆಕ್ಟೇರ್ಗೆ 18ಸಾವಿರ ರೂಪಾಯಿಗಳನ್ನು ಇತರೆ ಬೆಳೆ ನಾಶದ ಸಂದರ್ಭದಲ್ಲಿ ನೀಡಿತ್ತು ಅದರಂತೆ ಮಾವಿನ ಬೆಳೆಗಾರರರು ಬಿಜೆಪಿ ಸರ್ಕಾರ ಹೆಚ್ಚು ಪರಿಹಾರ ಕೊಡಲಿದೆ ಎಂದು ರೈತರ ನಂಬಿಕೆ ಇದಕ್ಕೆ ಬದ್ದರಾಗಿರುತ್ತೆವೆ ಎಂದರು.
ಜಿಲ್ಲಾ ಕೆಡಿಪಿ ಸಭೆಯಲ್ಲಿ ಮಾವು ಬೆಳೆನಷ್ಟವಾಗಿರುವುದರ ಬಗ್ಗೆ ಚರ್ಚೆ ಮಾಡಲಾಗಿದೆ. ಈ ಹಿಂದನ ಸರ್ಕಾರಗಳಂತೆ ರೈತರು ಬೆಳೆ ನಷ್ಟ ಪರಿಹಾರಕ್ಕಾಗಿ ಕಾಯಬೇಕಾಗಿಲ್ಲ. ನಮ್ಮ ಸರ್ಕಾರದಲ್ಲಿ ರೈತರು ಬೆಳೆ ನಷ್ಟವಾಗಿರುವ ಪೋಟು ಹಾಗೂ ಇತರೆ ದಾಖಲೆಗಳನ್ನು ಸಂಬಂದಪಟ್ಟ ಇಲಾಖೆಗೆ ನೀಡಿದರೆ ಅತಿ ಶೀಘ್ರವಾಗಿ ಸರ್ಕಾರದಿಂದ ಬೆಳೆ ನಷ್ಟ ಪರಿಹಾರವು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮ ಆಗುತ್ತದೆ ಎಂದರು.
ಈ ಸಂಬಂದ ನಾನು ಖುದ್ದು ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ನಮ್ಮ ಭಾಗದಲ್ಲಿ ಮಾವು ರೈತಾಪಿ ಕುಟುಂಬದ ಜೀವನಾಡಿ ನಮ್ಮ.ಎನ್ಡಿಆರ್ಎಫ್ ಗೈಡ್ಲೈನ್ಸ್ ಮೀರಿ ಒಂದು ಎಕರೆಗೆ 25 ಸಾವಿರ ರೂಗಳ ಪರಿಹಾರವನ್ನು ಕೊಡಬೇಕೆಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳು ಇದಕ್ಕೆ ಸಕಾರತ್ಮಕವಾಗಿ ಸ್ಪಂದಿಸಿ ಬೆಳೆ ನಷ್ಟವಾಗಿರುವುದು ನನ್ನ ಗಮನಕ್ಕೆ ಬಂದಿದೆ ಸಾಧ್ಯವಾಷ್ಟು ಬೇಗ ಪರಿಹಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಸರ್ಕಾರದಿಂದ 2 ರಿಂದ 3 ದಿನಗಳ ಒಳಗಾಗಿ ರೈತರಿಗೆ ಬೆಳನಷ್ಟ ಪರಿಹಾರವು ನೇರವಾಗಿ ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರ ಹಣವು ಸಿಗಲಿದೆ ಎಂದು ಭರವಸೆ ನೀಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಅಶೋಕರೆಡ್ಡಿ,ಪುರಸಭೆ ನಾಮನಿರ್ದೇಶನ ಸದಸ್ಯ ರಾಮಾಂಜಿ,ಹಳೇಪೇಟೆ ರಮೇಶ್,ಷೇಕ್ಶಫೀವುಲ್ಲಾ ,ಸುರೇಶ್ನಾಯಕ್ ಶಿಕ್ಷಕ ದೇವರೆಡ್ಡಿ ಮುಂತಾದವರು ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27