ಮುಳಬಾಗಿಲು: ಅರ್ಚಕರ ಸಂಘದ ಸ್ಥಾಪನೆಯಾಗಿ ನಿರಂತರ ಹೋರಾಟ ಮಾಡಿದ ಫಲ ಕೇವಲ 2 ರೂಪಾಯಿಂದ 500 ರೂಪಾಯಿ ಇದ್ದ ತಸ್ಥೀಕ್ ಪಡೆಯುತ್ತಿದ್ದ ದೇವಾಲಯಗಳಿಗೆ ಈ ಮೊದಲು 6000 ರೂಪಾಯಿಂದ 12000 ತನಕ ಆಗಿದೆ ಮತ್ತೇ 24000 ಹಾಗು 36000 ಹಾಗೇ 48000 ರೂಪಾಯಿತನ ಏರಿಕೆ ಆಗಿದೆ ಈ ವರ್ಷದ ಬಜೆಟ್ ನಲ್ಲಿ 60000 ರೂಪಾಯಿಗಳಗೆ ಸರ್ಕಾರ ಹೇಚ್ಚಿಸಿದೆ. ಇದು ನಮ್ಮ ಸಂಘದ ಸಾಧನೆ ಎಂದು ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ,ಆಗಮಿಕರ ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ ಹೇಳಿದರು ಅವರು ಮುಳಬಾಗಿಲು ತಾಲೂಕು ಕಚೇರಿಯಲ್ಲಿ ಮುಳಬಾಗಿಲು ತಾಲೂಕು ತಹಶೀಲ್ದಾರ್ ಶೋಭಿತಾ ಅವರ ಸಮಕ್ಷಮದಲ್ಲಿ ನೂತನ ಸಂವತ್ಸರದ ಕ್ಯಾಲೆಂಡರ್ ಲೋಕಾರ್ಪಾಣೆ ಮಾಡಿ ಮಾತನಾಡಿದರು.
ತಸ್ಥೀಕ್ ಹಣವನ್ನು ಒಂದು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ನಮ್ಮ ಸಂಘವು ಮುಜರಾಯಿ ಸಚಿವೆ ಶಶಿಕಲಾ ಜೋಲ್ಲೆ, ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗು ಮುಜರಾಯಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂದೂರಿ ಅವರ ಬಳಿ ಮನವಿ ಮಾಡಲಾಗಿತ್ತು ಮನವಿಗೆ ಸ್ಪಂದಿಸಿರುವ ಮಂತ್ರಿ ಹಾಗು ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದು ಈ ವಿಚಾರ ಬಜೆಟ್ ನಲ್ಲೂ ಮಂಡನೆಯಾಗಿದೆ ಅದರೆ ಕೊರೋನಾ ಸಂಕ್ರಮಣದ ಹಿನ್ನಲೆಯಲ್ಲಿ ಅರ್ಥಿಕ ಮುಗ್ಗಟ್ಟಿನ ಕಾರಣ ಮುಂದಿನ ಆರ್ಥಿಕ ವರ್ಷದಲ್ಲಿ 1 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುತ್ತೆವೆ ಎಂಬ ಬರವಸೆ ಸಿಕ್ಕಿದೆ.
ರಾಜ್ಯದ ಕೆಲವು ಮುಜರಾಯಿ ದೇವಾಲಯಗಳಲ್ಲಿ ಖಾಸಗಿ ವ್ಯಕ್ತಿಗಳು ಕಾನೂನು ಬಾಹಿರವಾಗಿ ಟ್ರಸ್ಟ್ ರಚಿಸಿಕೊಂಡು ಹುಂಡಿ ಹಣ ಹಾಗು ದೇವಾಲಯಗಳ ಆಸ್ತಿ ಅಂಗಡಿಗಳ ಆದಾಯ ದುರುಪಯೋಗವಾಗುತ್ತಿವೆ ಈ ಬಗ್ಗೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಆಯುಕ್ತರು ಸುತೋಲೆ ಹೊರಡಿಸಿದ್ದಾರೆ ಕೂಡಲೇ ಇಂತಹ ದೇವಾಲಯಗಳನ್ನು ಗುರುತ್ತಿಸಿ ಕಾನೂನು ಬಾಹಿರ ಟ್ರಸ್ಟ್ ಸಮಿತಿ ಗಳನ್ನು ಕಿತ್ತು ಹಾಕಿ ಹುಂಡಿಗಳನ್ನು ತಮ್ಮ ವಶಕ್ಕೆ ಪಡೆದು ಸಿಜ್ ಮಾಡಿ ಬಂದ ಹಣವನ್ನು ದೇವಾಲಯಗಳ ಖಾತೆಗಳಿಗೆ ಜಮಾ ಮಾಡಲು ಕೈಗೊಳ್ಳಬೇಕು ಪ್ರತಿ ಬಾರಿ ತಸ್ಥೀಕ್ ಹಣ ಪಡೆಯಲು ಬಹಳಷ್ಟು ಕಷ್ಟ ಪಡತ್ತಿದ್ದಾರೆ ದಳ್ಳಾಳಿಗಳು ಮದ್ಯವರ್ತಿಗಳು ಮುಜರಾಯಿ ಗುಮಾಸ್ತರುಗಳು ತಸ್ಥೀಕ್ ಹಣ ನಿಡುವಾಗ ಅರ್ಚಕರುಗಳಿಂದ ಹಣ ವಸೂಲಿ ಮಾಡಿ ವಂಚಿಸುತ್ತಿರುವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಅರ್ಚಕರಿಗೆ ಸಮವಸ್ತ್ರ ನೀಡಲು ಅಯಾಯ ದೇವಾಲಯಗಳ ನಿಧಿಯಿಂದ ಭರಿಸಲು ಸುತೋಲೆ ಹೊರಡಿಸಿದೆ ಇದರಂತೆ ಅರ್ಚಕರಿಗೆ ಸಮವಸ್ತ್ರ ನೀಡಲು ತಹಶೀಲ್ದಾರ್ ರವರಿಗೆ ತಿಳಿಸಿ ಕೂಡಲೇ ಇವುಗಳನ್ನು ಜಾರಿಗೆ ತರಲು ಮನವಿ ಮಾಡಿದರು.
ಮುಳಬಾಗಿಲು ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ಅದ್ಯಕ್ಷ ಗುರುಮೂರ್ತಿ ದಿಕ್ಷೀತ್ ಮಾತನಾಡಿ ಹಿಂದೂ ಸಂಸ್ಕೃತಿಯ ಪದ್ಧತಿಯಂತೆ ನೂತನ ಸಂವತ್ಸರ ಯುಗಾದಿ ಯಿಂದ ಯುಗಾದಿ ವರಿಗೆ ಹೊಸ ವರ್ಷದ ಕ್ಯಾಲೆಂಡರ್ ಮುದ್ರಿಸಿದ್ದು ಇದನ್ನು ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ,ಆಗಮಿಕರ ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ ಅವರಿಂದ ಬಿಡುಗಡೆ ಆಗಿರುವುದು ನಮಗೆ ಹೆಮ್ಮೆ ಎಂದರು.
ತಹಶೀಲ್ದಾರ್ ಶೋಭಿತಾ ಮಾತನಾಡಿ ನೂತನ ಸಂವತ್ಸರ ಯುಗಾದಿ ಯಿಂದ ಯುಗಾದಿ ವರಿಗೆ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ರಾಜ್ಯ ಮುಜರಾಯಿ ಅರ್ಚಕರ ಸಂಘದ ಸಂಚಾಲಕ ಗುರುಮೂರ್ತಿ ದೀಕ್ಷಿತ್, ಕಾರ್ಯದರ್ಶಿ ರಘುಬಾರದ್ವಾಜ್ ಗೋಪಾಲಕೃಷ್ಣ ಮೂರ್ತಿ ಚೇತನ್ ಕುಮಾರ್ ಮಂಜುನಾಥ್.ರಘುಕುಮಾರ್. ಅರ್ಚಕಂ ಅನಂತಾಚಾರ್ ಕೆ ಎನ್. ಪ್ರಸಾದ್.. ನಾಗರಾಜ್. ರಾಜೇಂದ್ರ ಪ್ರಸಾದ್.ನಾಗೇಶ್ ಸಂಘದ ಪಧಾದಿಕಾರಿಗಳು ಅರ್ಚಕರು ಬಾಗವಹಿಸಿದ್ದರು
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27