ನ್ಯೂಜ್ ಡೆಸ್ಕ್:ಎರಡು ದಿನಗಳ ಹಿಂದೆ ಮಧ್ಯರಾತ್ರಿ ಸಮಯದಲ್ಲಿ ತಿರುಮಲ ಬೆಟ್ಟದಲ್ಲಿ ಕರಡಿಯೊಂದು ಅಬ್ಬರಿಸಿದೆ. ಶ್ರೀ ವೆಂಕಟೇಶ್ವರ ಮ್ಯೂಸಿಯಂ ಹಿಂಭಾಗದ ಕಾಡಿನಿಂದ ಬಂದ ಕರಡಿ ಜಿಂದಾಲ್ ಅತಿಥಿ ಗೃಹದ ಬಳಿ ಒಡಾಡಿರುವುದನ್ನು ಕಂಡ ಅತಿಥಿ ಗೃಹದ ಸಿಬ್ಬಂದಿ ಭಯದಿಂದ ಒಳಗೆ ಓಡಿಹೋಗಿದ್ದಾರೆ ನಂತರ ಬಾರಿ ಶಬ್ದಗಳನ್ನು ಮಾಡಿದ ಹಿನ್ನಲೆಯಲ್ಲಿ ಕರಡಿ ಅರಣ್ಯದ ಕಡೆ ಓಡಿ ಹೋಗಿದಿಯಂತೆ, ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ಪ್ರಾರಂಭವಾದ ತಿರುಮಲ ಬೆಟ್ಟದಲ್ಲಿ ಹಾಗು ಮೆಟ್ಟಿಲು ಮಾರ್ಗವಾಗಿ ಹತ್ತಿಕೊಂಡು ಹೋಗುವ ದಾರಿಯಲ್ಲಿ ಇತ್ತಿಚಿಗೆ ಕಾಡು ಪ್ರಾಣಿಗಳು ಹಾಗು ಮೃಗಗಳು ಜನರ ಕಣ್ಣಿಗೆ ಕಾಣಿಸುವುದು ಶುರುವಾಗಿದ್ದೇ ಶುರುವಾಗಿದ್ದು ಇತ್ತಿಚಿಗೆ ಸಾಮನ್ಯವಾಗುತ್ತಿದೆ, ತೀರಾ ಇತ್ತಿಚಿಗೆ ಕಾಲು ದಾರಿಯಲ್ಲಿ ಬಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ನಡೆದು ಹೋಗುತ್ತಿದ್ದ ಬಕ್ತರನ್ನು ಅತಂಕಕ್ಕೆ ಈಡುಮಾಡಿತ್ತು.
ಆಂಧ್ರ-ತಮಿಳುನಾಡು ಗಡಿಯಲ್ಲಿ ಅನೆ ದಾಳಿ ಒರ್ವ ಸಾವು
ತಮಿಳುನಾಡು-ಆಂಧ್ರ ರಾಜ್ಯಗಳ ಗಡಿ ಭಾಗದ ಓಎನ್ ಕೊತ್ತೂರ್ ಬಳಿ ಆನೆ ದಾಳಿಗೆ ತಮಿಳುನಾಡಿನ ನಿವಾಸಿ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ. ಕರ್ನಾಟಕದ ಗಡಿಗೂ ಸಮೀವೆ ಇರುವ ತಮಿಳುನಾಡಿನ ವೇಪನಪಲ್ಲೆ ಬಳಿಯ ಅರಣ್ಯ ಪ್ರದೇಶದಲ್ಲಿ ಒಂದು ವಾರದಿಂದ ಐದು ಆನೆಗಳು ಬೀಡುಬಿಟ್ಟು ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದು ರೈತರಿಗೆ ನಷ್ಟ ಉಂಟಾಗಿದೆ ಈ ಮದ್ಯೆ ಶನಿವಾರ ರಾತ್ರಿ ಜಮೀನಿಗೆ ತೆರಳುತಿದ್ದ ಏಕಲನಾಥಂ ಗ್ರಾಮದ ಗೋವಿಂದಪ್ಪ (45) ಹಾಗೂ ನಾಗರಾಜು ಮೇಲೆ ಆನೆಗಳ ಗುಂಪು ಅವರ ಮೇಲೆ ದಾಳಿ ಮಾಡಿದ್ದು, ಗೋವಿಂದಪ್ಪ ಸ್ಥಳದಲ್ಲೇ ಸಾವನ್ನಪ್ಪಿದರೆ ನಾಗರಾಜ್ ಗಾಯಗೊಂಡಿದ್ದು ಆತನನ್ನು ಸ್ಥಳೀಯರ ಸಹಾಯದಿಂದ ಕುಪ್ಪಂನ ಪಿಇಎಸ್ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಕೊಡಿಸಿದ್ದರಿಂದ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಗಡಿದಾಟಿ ಕರ್ನಾಟಕಕ್ಕೂ ಬರಬಹುದಾದ ಆನೆಗಳು
ತಮಿಳುನಾಡಿನ ಗಡಿಯಲ್ಲಿ ಅನೆದಾಳಿಯಿಂದ ವ್ಯಕ್ತಿ ಮೃತ ಪಟ್ಟಿರುವ ಹಿನ್ನಲೆಯಲ್ಲಿ ತಮಿಳುನಾಡಿನ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಗಡಿಯಿಂದ ದಾಟಿಸಿ ಒಡಿಸಿದರೆ ಗಡಿದಾಟುವ ಅನೆಗಳು ಕರ್ನಾಟಕ ಅಥಾವ ಆಂಧ್ರಕಡೆಗೆ ಬರಬಹುದು ಎನ್ನುತ್ತಾರೆ ರೈತರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



