ಶ್ರೀನಿವಾಸಪುರ: ಪಟ್ಟಣದ ವೆಂಕಟೇಶ್ವರ ಬಡಾವಣೆಯಲ್ಲಿ ಆಚರಿಸಲಾಗಿತ್ತಿದ್ದ ಗಣೇಶೋತ್ಸವಕ್ಕೆ ಈ ವರ್ಷ 25 ನೇ ವರ್ಷದ ಸಂಭ್ರಮ,ನಿನ್ನೆ ಮೊನ್ನೆ ಕಾಲಿ ನಿವೇಶನಗಳಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ಹೆಸರಿನಲ್ಲಿ ಗಣೇಶ ಕೂರಿಸಿ ಉತ್ಸವ ಆಚರಿಸುತ್ತಿದ್ದ ಮಾಜಿ ಪುರಸಭೆ ಸದಸ್ಯ ಕೆ.ವಿ.ಮಂಜು ಮತ್ತು ಯುವ ಸ್ನೇಹಿತರ ತಂಡ ಕಾರ್ಯಕ್ಕೆ ಇವತ್ತು ಇಪ್ಪತೈದು ವಸಂತಗಳ ಬೆಳ್ಳಿಹಬ್ಬದ ಸಂಭ್ರದಲ್ಲಿ ರಜತ ಮಹೋತ್ಸವ ಆಚರಿಸುತ್ತಿದೆ, ಈ ಬಾರಿ ಸುಮಾರು 14 ಅಡಿ ಎತ್ತರದ ಬಾರಿ ಗಾತ್ರದ ದರ್ಬಾರ್ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
ಅಂದು ಯುವಕರಷ್ಟೆ ಒಗ್ಗೂಡಿ ಪ್ರಾರಂಭಿಸಿದ ಬೆಳ್ಳಿಹಬ್ಬದ ಸಂಭ್ರಮದ ಗಣೇಶೋತ್ಸವದ ಬಹುತೇಕ ಮುಂದಾಳುಗಳು ಇಂದು ಮದ್ಯವಯಸ್ಕರಾಗಿದ್ದಾರೆ, ಇಂದಿನ ಪೀಳಿಗೆಯ ಯುವಕರ ಜೊತೆಗೂಡಿ ಮದ್ಯವಯಸ್ಕ ಮುಖಂಡರು ಆಗಸ್ಟ್ 31 ಬುಧವಾರ ಗಣೇಶ ಹಬ್ಬದ ದಿನದಂದು ಸಂಜೆ 25 ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ ನೀಡಿದರು.
ಐದು ದಿನಗಳ ಗಣೇಶೋತ್ಸವ ಭಾನುವಾರ ವಿಸರ್ಜನೆ
ಐದು ದಿನಗಳ ಕಾಲ ನಡೆಯುವ ವೆಂಕಟೇಶ್ವರ ಬಡಾವಣೆ ಗಣೇಶೋತ್ಸವದಲ್ಲಿ ಪ್ರತಿದಿನ ಸಂಜೆ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ವಿಶೇಷವಾಗಿ ಎರಡನೇಯ ದಿನವಾದ ಸೆಪ್ಟೆಂಬರ್ 1 ಗುರುವಾರ ವೆಂಕಟೇಶ್ವರ ಬಡಾವಣೆಯ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗು ಹಿರಿಯ ನಾಗರಿಗೆ ಗೌರವ ಸಮರ್ಪಣೆ ಏರ್ಪಡಿಸಿದೆ ನಾಲ್ಕನೇ ದಿನವಾದ ಶನಿವಾರ ಕಳೆದ ಇಪತೈದು ವರ್ಷಗಳಿಂದ ಗಣೇಶೋತ್ಸವದಲ್ಲಿ ಸೇವಾಬಾವನೆಯಿಂದ ಪೂಜಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಅರ್ಚಕ ದಿನೇಶ್ ಕುಮಾರ್ ಅವರಿಗೆ ಸನ್ಮಾನ ಮತ್ತು ಐದನೇಯ ದಿನವಾದ ಭಾನುವಾರ ಗಣೇಶಮೊರ್ತಿಯ ಭವ್ಯ ಶೋಭಾಯಾತ್ರೆಯೊಂದಿಗೆ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಪ್ರಮುಖ ರೂವಾರಿ ಮಾಜಿ ಪುರಸಭೆ ಸದಸ್ಯ ಕೆ.ವಿ.ಮಂಜು ತಿಳಿಸಿದ್ದಾರೆ.
25 ನೇ ವರ್ಷದ ಗಣೇಶೋತ್ಸವಕ್ಕೆ ಸ್ಥಳೀಯವಾಗಿ ಪ್ರಮುಖದಾನಿಗಳಾದ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಆಶೋಕ್,ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್,ವೆಂಕಟೇಶ್ವರ ನರ್ಸಿಂಗ್ ಹೋಂ ಡಾ.ವೆಂಕಟಾಚಲ,ಕೃಷ್ಣಾ ಸೀಡ್ಸ್ ಮಾಲಿಕ ಕೋಟೇಶ್,ಬಿಂದು ಟ್ರೆಡರ್ಸ್ ಮಾಲಿಕ ಹನುಮಂತರೆಡ್ಡಿ ಮಕ್ಕಳು,ಸುಗುಣ ಸೀಡ್ಸ್ ಮಾಲಿಕ ಎಂ.ಚಂದ್ರಣ್ಣ,ಇವರೊಂದಿಗೆ ಚಿರಾಗ್ ರಸ್ಟೋರಂಟ್ ಮಾಲಿಕ ಚಿರಾಗ್,ಪಿ.ವಿ.ವಿನೋದ್, ನಿವೃತ್ತ ಕಂದಾಯಧಿಕಾರಿ ಮಗ ಉಪಾದ್ಯಾಯ ಪದ್ಮನಾಭಾಚಾರಿ, ಯುವ ಮುಖಂಡ ದಿಂಬಾಲಹರ್ಷ,ಚೌಡೇಶ್ವರಿ ಎಲೆಕ್ಟ್ರಿಕಲ್ಸ್ ಮಾಲಿಕ ಬಾಬುರೆಡ್ದಿ,ಯುವ ಮುಖಂಡ ಗೊಲ್ಲಪಲ್ಲಿ ಪ್ರಸನ್ನಕುಮಾರ್, ವರುಣ್ ಲೋಕನಾಥ್, ವಿನಯ್ ಪ್ರಶಾಂತ್ ಸಹಕಾರ ನೀಡಿರುವ ಬಗ್ಗೆ ಪ್ರಕಟಿಸಲಾಗಿದೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27