ಶ್ರೀನಿವಾಸಪುರ: ತಾಲೂಕು ವಕ್ಕಲಿಗ ಸಮಾಜದ ಅಭಿವೃದ್ದಿಗೆ ಸಮಾಜದ ಹಿರಿಯರ ಮಾರ್ಗದರ್ಶನ ಪಡೆದು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ತಾಲೂಕು ಒಕ್ಕಲಿಗರ ಸಂಘದ ನೂತನ ಅಧ್ಯಕ್ಷ ಕೆ.ಎನ್.ವೇಣುಗೋಪಾಲ್@ಸ್ಟೂಡಿಯೋವೇಣು ಹೇಳಿದರು.
ಅವರು ನೂತನ ಅಧ್ಯಕ್ಷರಾದ ನಂತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಮಿತಿಯ ಸಭೆಯಲ್ಲಿ ಪಾಲ್ಗೋಂಡು ಮಾತನಾಡಿದರು.
ತಾಲ್ಲೂಕಿನಲ್ಲಿ ವಕ್ಕಲಿಗ ಸಮಾಜದ ಅಭಿವೃದ್ಧಿ ದೃಷ್ಠಿಯಿಂದ ಸಮುದಾಯಭವನ, ಕಲ್ಯಾಣಮಂಟಪ, ವಿದ್ಯಾರ್ಥಿಗಳಿಗಾಗಿ ಬಾಲಕರ ಹಾಗು ಬಾಲಕಿಯರಿಗಾಗಿ ಪ್ರತ್ಯಕ ಹಾಸ್ಟಲ್ಗಳನ್ನು ನಿರ್ಮಾಣ ಮಾಡುವ ಬಗ್ಗೆ ಯೋಜನೆಯಿದೆ ಮತ್ತು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವಂತವರ ಅಭಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದರು.
ನಿಕಟಪೂರ್ವ ಒಕ್ಕಲಿಗರ ಸಂಘದ ಅಧ್ಯಕ್ಷ ನಿಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ ತಾಲ್ಲೂಕಿನ ಹೆಚ್ಚಿನ ಸಂಖ್ಯೆಯಲ್ಲಿ ವಕ್ಕಲಿಗ ಸಮಾಜದವರು ಇದ್ದೀವಿ ಸಮುಧಾಯ ಭವನ ಹಾಗು ವಿದ್ಯಾರ್ಥಿಗಳಿಗೆ ಹಾಸ್ಟಲ್ ನಿರ್ಮಾಣ ಮಾಡಲು ನಮಗೆ ಇದುವರಿಗೂ ನೀವೇಶನ ಪಡೆಯಲು ಸಾಧ್ಯವಾಗಿಲ್ಲ ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಕೆಂಪೇಗೌಡ ಜಂಯತಿ ಆಚರಣೆ ಸಂದರ್ಭದಲ್ಲಿ ಶಾಸಕರು ಸಮುದಾಯ ಭವನಕ್ಕೆ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರು ಆದರೆ ಇದುವರಿಗೂ ಈಡೇರಿಲ್ಲ ಹಾಗಾಗಿ ಅದನ್ನು ಪಡೆಯಲು ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ ಈ ಬಗ್ಗೆ ನೂತನ ಪದಾಧಿಕಾರಿಗಳು ಪ್ರಯತ್ನಿಸುಂತೆ ಹೇಳಿದ ಅವರು ಸಮಾಜದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ನೂತನ ಪದಾಧಿಕಾರಿಗಳಾಗಿ ನಿವೃತ್ತ ಮುಖ್ಯೋಪಾದ್ಯಾಯ ಎಂ.ವೆಂಕಟರೆಡ್ಢಿ ಕಾರ್ಯದರ್ಶಿ, ಥಿಯೆಟರ್ ಲಕ್ಷö್ಮಣರೆಡ್ಡಿ ಉಪಾಧ್ಯಕ್ಷ, ಖಜಾಂಚಿಯಾಗಿ ಕೋಡಿಪಲ್ಲಿ ಶ್ರೀನಿವಾಸರೆಡ್ಡಿ ಆಯ್ಕೆಯಾದರು. ಸಮುದಾಯದ ಹಿರಿಯ ಮುಖಂಡರಾದ ನಿವೃತ್ತ ಉಪಾದ್ಯಾಯ ಬೈರೆಡ್ಡಿ, ನಾಗರಾಜ್,ಚೊಕ್ಕರೆಡ್ಡಿ, ಮುಖಂಡರಾದ ವಕೀಲ ವೆಂಕಟೇಶ್,ಆನಂದರೆಡ್ಡಿ, ಕಂಬಾಲಪಲ್ಲಿ ಶ್ರೀನಿವಾಸ್, ಎಸ್.ನಾಗರಾಜ,ಬೈರೆಡ್ಡಿ, ಪ್ರಕಾಶ್ಬಾಬು, ಸೋದರ ನಾರಾಯಣಸ್ವಾಮಿ, ಮುನಿರೆಡ್ಡಿ, ಆವಲಕುಪ್ಪ ರಾಮಚಂದ್ರ, ಕಲ್ಲೂರು ರೆಡ್ಡಪ್ಪ ಮುಂತಾದವರು ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26