ಶ್ರೀನಿವಾಸಪುರ: ತಾಲ್ಲೂಕಿನ ಕಸಬಾ ಹೋಬಳಿ ಕಿರುವಾರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಕೋದಂಡರಾಮ ದೇವರ ದೇವಾಲಯ ಪುನರ್ ಬಿಂಬ ಪ್ರತಿಷ್ಠಾಪನೆ ಕಾರ್ಯಕ್ರಮ ಮಾ.20 ಮತ್ತು ಮಾ21 ರಂದು ಭಾನುವಾರ ಹಾಗು ಸೋಮವಾರ ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಗಣಪತಿ, ಶ್ರೀ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಪರಿವಾರ ಸಮೇತ ಶ್ರೀ ಕೋದಂಡರಾಮ ದೇವರುಗಳ ಸ್ಥಿರಬಿಂಬ ಪ್ರತಿಷ್ಠಾಪನಾ ಕಾರ್ಯಕ್ರಮ ಗ್ರಾಮ ದೇವತೆ ಅನುಗ್ರಹದೊಂದಿಗೆ ಮಾ.20ರಂದು ಭಾನುವಾರ ಸಂಜೆ ಪ್ರಾರಂಭವಾಗಲಿದ್ದು ಮಾ21 ರಂದು ಸೋಮವಾರದ ವರಿಗೂ ನಡೆಯುತ್ತವೆ ಭಾನುವಾರ ಗಣಪತಿ ಪೂಜೆ, ಪುನ್ಯಾಹವಾಚನ, ಪ್ರಾಯಶ್ಚಿತ ಸಂಕಲ್ಪ, ರಕ್ಷಾಬಂದನ, ಮೃತ್ಸಂಗ್ರಹಣ, ಅಂಕುರಾರ್ಪಣೆ, ಕಳಶಾರಾಧನೆ, ಅಗ್ನಿ ಪ್ರತಿಷ್ಟೆ ,ನಡೆಯಲಿದೆ.ಸೋಮವಾರ ಮುಂಜಾನೆ ವೇದ ಪಾರಾಯಣ, ವೇದಿಕಾರ್ಚನೆ, ಮಂತ್ರನ್ಯಾಸ, ನಾಡಿಸಂಧಾನ, ಗಣಪತಿ, ಕಳಾ ಹೋಮ, ಗೋದದರ್ಶನ, ದೇವತಾರ್ಚನೆ ನಂತರ ದೇವಾಲಯ ಲೋಕಾರ್ಪಣೆ ಆಗಲಿದೆ. ದೇವಾಲಯದ ಪೂಜಾ ಕಾರ್ಯಕ್ರಮಗಳನ್ನು ಪ್ರಧಾನ ಆರ್ಚಕರಾದ ಶ್ರೀನಿವಾಸಾಚಾರ್, ಗನಿಬಂಡೆ ಶ್ರೀನಿವಾಸ ದೇವಾಲಯದ ಖ್ಯಾತ ಅರ್ಚಕರಾದ ಶ್ರೀನಾಥ್ ಚಾರ್, ಆರಿಕುಂಟೆ ರಾಜಗೋಪಾಲಾಚಾರ್ ನಡೆಸಿಕೊಡಲಿದ್ದಾರೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



