ಶ್ರೀನಿವಾಸಪುರ: ಅಕ್ರಮವಾಗಿ ಗಾಂಜಾ ಮಾರಾಟ ಮಾಡ್ತಿದ್ದ ವ್ಯಕ್ತಿಯೊಬ್ನನ್ನು ಶ್ರೀನಿವಾಸಪುರ ಅಬಕಾರಿ ಅಧಿಕಾರಿಗಳು ಬಂಧಸಿರುತ್ತಾರೆ.ಆಂಧ್ರದ ಅನ್ನಮಯ್ಯ ಜಿಲ್ಲೆಯ ಚಂಬಕೂರಿಗೆ ಹೊಂದಿಕೊಂಡಿರುವ ಗಡಿಯಂಚಿನ ಗ್ರಾಮವಾದ ತಾಲೂಕಿನ ಪುಲಗುರುಕೊಟೆ ಗ್ರಾಮದ ವೆಂಕಟರಮಣಪ್ಪ ಎಂಬುವನನ್ನು ಬಂದಿಸಿದ ಅಬಕಾರಿ ಅಧಿಕಾರಿಗಳು ಸುಮಾರು 50 ಸಾವಿರ ಮೌಲ್ಯದ 1 ಕೆಜಿಗಿಂತಲೂ ಹೆಚ್ಚಿನ ತೂಕದ ಗಾಂಜಾ ವಶಕ್ಕೆ ಪಡೆದುಕೊಂಡಿರುತ್ತಾರೆ.
ವೆಂಕಟರಮಣಪ್ಪ ಆಂಧ್ರದಿಂದ ಗಾಂಜಾ ತಂದು ಇಲ್ಲಿ ಮಾರಾಟ ಮಾಡುತಿದ್ದ ಎಂದು ಹೇಳಲಾಗಿದ್ದು ಅಬಕಾರಿ ಅಧಿಕಾರಿ ರೋಹಿತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುತ್ತಾರೆ.
ಅರೋಪಿಯನ್ನ ಅಧಿಕಾರಿಗಳು ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ.
ಶ್ರೀನಿವಾಸಪುರ ಪಟ್ಟಣದ ವ್ಯಾಪ್ತಿಯಲ್ಲೂ ಅಕ್ರಮ ಗಾಂಜ ವ್ಯವಹಾರ ನಡೆಯುತ್ತಿರುವ ಬಗ್ಗೆ ಇತ್ತಿಚಿಗೆ ಅಬಕಾರಿ ಅಧಿಕಾರಿಗಳು ಕೆಲವರನ್ನು ಕರೆದೊಯಿದು ವಿಚಾರಣೆಗೆ ಒಳಪಡಿಸಿದ ಬಗ್ಗೆ ಹೇಳುತ್ತಾರೆ.
ಕಳೆದ ಕೆಲವು ದಿನಗಳ ಹೊಂದೆ ಮುಳಬಾಗಿಲು ತಾಲೂಕಿನಲ್ಲೊಂದು ನಡೆದ ಅಕ್ರಮ ಗಾಂಜಾ ವ್ಯವಹಾರದಲ್ಲಿ ಅಲ್ಲಿನ ಅಬಕಾರಿ ಅಧಿಕಾರಿಗಳು ದಂಪತಿಯನ್ನು ಬಂದಿಸಿದ್ದು ಅವರ ನೀಡಿದ ಮಾಹಿತಿಯಂತೆ ತಾಲೂಕಿನ ಪುರ್ನಪಲ್ಲಿ ಗ್ರಾಮದ ವ್ಯಕ್ತಿಯನ್ನು ಕರೆದೊಯಿದು ವಿಚಾರಣೆ ನಡೆಸಿರುತ್ತಾರೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



