ಶ್ರೀನಿವಾಸಪುರ: ವಿಧಾನ ಪರಿಷತ್ ಚುನಾವಣೆಗೂ ಮುಂಚೆ ತಾಲೂಕು ಪ್ರಭಾವಿ ಕಾಂಗ್ರೆಸ್ ಮುಖಂಡ ಯು ಟರ್ನ್ ಹೊಡೆದಿರುವ ಹಿಂದಿನ ಮರ್ಮವೇನು? ಈಗ ಜನಸಾಮನ್ಯನ ಬಾಯಲ್ಲಿ ಕೇಳಿಬರುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ, ಸ್ವಾಭಿಮಾನದ ಮಾತುಗಳನ್ನಾಡಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಂದ ದೂರವೆ ಉಳಿದಿದ್ದ ವ್ಯಕ್ತಿ ಏಕಾಏಕಿ ಸುದ್ಧಿಗೊಷ್ಠಿ ಕರೆದು ನಾನು ಪಕ್ಷಕ್ಕೆ ದ್ರೋಹ ಬಗೆಯಲ್ಲ ನಾನು ನನ್ನ ಕುಟುಂಬ ಕಾಂಗ್ರೆಸ್ ನಿಷ್ಠಾವಂತರು ನಾನು ವಿಧಾನಪರಿಷತ್ ಚುನಾವಣೆಯಲ್ಲಿ ನನ್ನ ಬೆಂಬಲ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಅವರಿಗೆ ಎಂದು ಹೇಳಿಕೆ ನೀಡುವ ಮೂಲಕ ತಾಲೂಕಿನ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯ ವಿಷಯವಾಗಿದೆ.
ಶ್ರೀನಿವಾಸಪುರ ತಾಲೂಕಿನ ಪ್ರಭಾವಿ ಕಾಂಗ್ರೆಸ್ ಮುಖಂಡ ಮಾವು ಮಂಡಳಿ ಮಾಜಿ ಅಧ್ಯಕ್ಷ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ದಳಸನೂರು ಗೋಪಾಲಕೃಷ್ಣ ಅವರು ಸುದ್ಧಿಗೊಷ್ಠಿಯಲ್ಲಿ ಪಕ್ಷ ದ್ರೋಹದ ಕೆಲಸ ಮಾಡಲಾರೆ ನನ್ನ ಬಗ್ಗೆ ಬಂದಿರುವಂತ ಉಹಾಪೋಹಗಳು ಕೆವಲ ಉಹಾಪೊಹಗಳಷ್ಟೆ ಇದರಲ್ಲಿ ಯಾವುದೇ ಸತ್ಯ ಇಲ್ಲ ಎಂದು ವಿಧಾನಪರಿಷತ್ ಚುನಾವಣೆಗೆ ಎರಡು ದಿನ ಇರುವ ಸಮಯದಲ್ಲಿ ನೀಡಿರುವ ಹೇಳಿಕೆ ಜನಸಾಮನ್ಯರಲ್ಲಿ ಅಲ್ಲ ಕಾಂಗ್ರೆಸ್ ಕಾರ್ಯಕರ್ತರಲ್ಲಿಯೇ ಅಚ್ಚರಿ ಮೂಡಿಸಿದೆ.
ಏನಿದು ಅಚ್ಚರಿಯ ನಡೆ?
ಲೋಕಸಭೆ ಚುನಾವಣೆ ನಂತರ ಗೋಪಾಲಕೃಷ್ಣ ತಾಲೂಕಿನಲ್ಲಿ ನಡೆದಂತ ಪಕ್ಷ ಚಟುವಟಿಕೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ದೂರವೆ ಉಳದಿದ್ದರು,ಇದು ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ರಾಜಕೀಯವಾಗಿ ಅವರು ಕಾಂಗ್ರೆಸ್ ತೊರೆಯುತ್ತಾರೆ ಎನ್ನುವ ಮಾತು ಸಹ ಕೇಳಿಬಂದಿತ್ತು ಮುಂದಿನ ದಿನಗಳಲ್ಲಿ ಬಿಜೆಪಿ ಸೇರಬಹುದು ಎನ್ನುವಂತ ಸುದ್ಧಿ ಹರಿದಾಡುತಿತ್ತು ಯಾವುದಕ್ಕೂ ಯಾವುದೇ ನಿಖರವಾದ ಮಾಹಿತಿ ಇರಲಿಲ್ಲವಾದರು ಅವರ ಆಪ್ತರು ಸಹ ಕಾಂಗ್ರೆಸ್ ನಿಂದ ಅಂತರ ಕಾದುಕೊಂಡಿದ್ದರು.ಈ ಬೆಳವಣಿಗೆಗಳಿಂದ ಸಾರ್ವಜನಿಕವಾಗಿ ಕೇಳಿಬರುತ್ತಿದ್ದ ಮಾತುಗಳೇ ನಿಜ ಇರಬಹುದಾ ಎನ್ನುವಂತಾಗಿತ್ತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರ!
ಹರಿದಾಡುತ್ತಿರುವ ಉಹಾಪೋಹಗಳ ನಡೆವೆ ಮತ್ತೊಂದು ಅಚ್ಚರಿಯ ಎನ್ನುವಂತ ಸುದ್ಧಿ ಹೊರಬಂದಿದೆ ಇತ್ತಿಚಿಗೆ ಬಿಜೆಪಿ ಸೇರಿರುವ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ಸ್ಥಾನ ಕಾಲಿಯಾಗಿದ್ದು ಆ ಸ್ಥಾನದಲ್ಲಿ ಗೋಪಾಲಕೃಷ್ಣ ಸೀಟು ಅಲಂಕರಿಸುತ್ತಾರೆ ಎಂದು ಕೇಳಿಬರುತ್ತಿದೆ ಅದಕ್ಕಾಗಿಯೇ ಕಾಂಗ್ರೆಸ್ ನಿಂದ ದೂರ ಇದ್ದ ಗೋಪಾಲಕೃಷ್ಣ ಕಾಂಗ್ರೆಸ್ ನೊಂದಿಗಿನ ಮುನಿಸು ಮರೆತು ವಿಧಾನಪರಿಷತ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸುವ ಮೂಲಕ ಉಹಾಪೋಹಗಳಿಗೆ ಇತಿಶ್ರೀ ಹಾಡಿದ್ದಾರೆ ಎನ್ನಲಾಗುತ್ತಿದೆ, ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರು ಯಾರಗಬೇಕು ಎನ್ನುವುದನ್ನು ಅಧಿಕೃತವಾಗಿ ದೃಡಪಡಿಸಬೇಕಾದವರು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರು,
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27