ಶ್ರೀನಿವಾಸಪುರ:- ಶ್ರೀನಿವಾಸಪುರವನ್ನು ನಾಲ್ಕುದಶಕಗಳಿಂದ ಪ್ರತಿನಿಧಿಸುತ್ತಿರುವ ಇಲ್ಲಿನ ಸಂಪ್ರದಾಯಿಕ ಎದುರಾಳಿ ರಾಜಕಾರಣಿಗಳಾದ ಸ್ವಾಮಿ-ರೆಡ್ಡಿ ತಾಲೂಕಿನ ಅಭಿವೃದ್ದಿಗೆ ಶೂನ್ಯ ಎಂದು ಕೋಲಾರದ ಸಂಸದ ಮುನಿಸ್ವಾಮಿ ಶ್ರೀನಿವಾಸಪುರದ ಹಾಲಿ ಮತ್ತು ಮಾಜಿ ಶಾಸಕರ ವಿರುದ್ದ ಪರೋಕ್ಷವಾಗಿ ಆರೋಪ ಮಾಡಿದರು. ಇಷ್ಟು ವರ್ಷಗಳಿಂದ ಕ್ಷೇತ್ರ ಪ್ರತಿನಿಧಿಸುತ್ತಿರುವರು ಇಲ್ಲಿಗೆ ಯಾವುದೇ ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಗಳಾಗಲಿ ಕಾರ್ಖಾನೆಗಳಾಗಲಿ, ಗುಣಮಟ್ಟದ ಆಸ್ಪತ್ರೆ ಇಲ್ಲ ಯಾವುದೆ ಕಾರ್ಯಕ್ರಮ ತಾರದೆ ಜನಸಾಮಾನ್ಯರಿಗೆ ಅನಕೂಲ ಅಗುವಂತ ಶಾಶ್ವತ ಅಭಿವೃದ್ದಿಗಳನ್ನು ಮಾಡದೆ ಇರುವುದು ವಿಷಾದನೀಯ ಎಂದರು. ಅವರು ಪಟ್ಟಣದಲ್ಲಿ ಇಂದು ಭಾನುವಾರ ತಡ ಸಂಜೆ ಜನೋತ್ಸವ ಕಾರ್ಯಕ್ರಮ ಕುರಿತಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ಗಾಟಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ವ್ಯವಸ್ಥಿತವಾಗಿ ದಲಿತರನ್ನು ತುಳಿಯಲಾಗುತ್ತಿದೆ ಎಂದು ಆರೋಪಿಸಿದ ಅವರು ಮಾಜಿ ಉಪಮುಖ್ಯಂತ್ರಿ ಡಾ.ಪರಮೇಶ್ವರ್ ಹಾಗು ಹಿರಿಯ ದಲಿತ ನಾಯಕ ಖರ್ಗೆ ಅವರುಗಳನ್ನು ಸೋಲಿಸಿದವರು ಯಾರು ಎಂದು ಪ್ರಶ್ನಿಸಿದರು.
ಯಾರು ಎನೇ ಮಾತನಾಡಿದರು ಕೆ.ಸಿ.ವ್ಯಾಲಿ ಯೋಜನೆಯ ಎರಡನೆ ಹಂತದಲ್ಲಿ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಹಣ ಬಿಡುಗಡೆ ಮಾಡಿದ್ದು
ಬಿಜೆಪಿ ಸರ್ಕಾರ ಸಾಧನೆ ಎಂದು ಒತ್ತಿ ಹೇಳಿದರು.
ಡಿಸಿಸಿ ಬ್ಯಾಂಕಿನಿಂದ ನೀಡುತ್ತಿರುವ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಯಾರು ಯಾರ ಮನೆಯಿಂದಲೂ ತಂದುಕೊಡುತ್ತಿಲ್ಲ ಕೇಂದ್ರ ಸರ್ಕಾರದ ನಬಾರ್ಡ ಯೋಜನೆಯ ಹಣವನ್ನು ತಂದು ಸ್ತ್ರೀಶಕ್ತಿ ಶಕ್ತಿ ಸಂಘಗಳಿಗೆ ನೀಡಲಾಗುತ್ತಿದೆ ಜೊತೆಗೆ ಸಾಲ ನೀಡುತ್ತೇವೆ ಎಂದು ಮಹಿಳೆಯರನ್ನು ಕರೆತಂದು ಕಾಂಗ್ರೆಸ್ ಪಕ್ಷಕ್ಕೆ ಮತಯಾಚಿಸುತ್ತಾರೆ ಎಂದು ಆಪಾದಿಸಿದರು.
ಡಿಸಿಸಿ ಬ್ಯಾಂಕ್ ಸಾಲ ವಿತರಿಸಲು ರಾಹುಲ್ ಗಾಂಧಿ ಯಾರು?
ರಾಹುಲ್ ಗಾಂಧಿಯನ್ನು ಕರೆತಂದು ಶ್ರೀನಿವಾಸಪುರ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ಸಾಲ ಯೋಜನೆಯನ್ನು ವಿತರಿಸುವುದಾಗಿ ಹೇಳುತ್ತಾರೆ ಸಾಲ ವಿತರಿಸಲು ರಾಹುಲ್ ಗಾಂಧಿ ಯಾರು ಅವರಿಗೆ ಗೌರವ ಇದ್ದರೆ ಇಲ್ಲಿಗೆ ಸಾಲ ವಿತರಣೆಗೆ ಬರಬಾರದು ಎಂದು ವಿಧಾನಪರಿಷತ್ ಮುಖ್ಯ ಸಚೇತಕ ವೈ.ಎ.ನಾರಯಣಸ್ವಾಮಿ ಹೇಳಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಖೆಡ್ಡಾ ತೋಡಿದ್ದಾಯಿತು ಈಗ ರಾಹುಲ್ ಗಾಂದಿಗೆ ಖೆಡ್ಡಾ ತೋಡಲು ಹೋರಟಿದ್ದಾರೆ ಎಂದು ಶಾಸಕ ರಮೇಶ್ ಕುಮಾರ್ ವಿರುದ್ದ ಪರೋಕ್ಷವಾಗಿ ವ್ಯಂಗ್ಯವಾಡಿದರು. ರಾಜ್ಯ ಕಾಂಗ್ರೆಸ ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರೈಲ್ವೆ ಹಳಿಗಳಿದ್ದಂತೆ ಎರಡು ರೈಲ್ವೆ ಹಳಿಗಳು ಒಂದಾದರೆ ರೈಲು ಹೇಗೆ ಒಡಲು ಸಾಧ್ಯವಿಲ್ಲವೋ ಹಾಗೆ ಸಿದ್ದರಾಮಯ್ಯ-ಶಿವಕುಮಾರ್ ಯಾವತ್ತು ಒಂದಾಗಲ್ಲ ಎಂದು ವ್ಯಂಗ್ಯವಾಡಿದರು.
ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ ಬಿಜೆಪಿ ಸರ್ಕಾರದ ಸಾಧನೆ ಕುರಿತಾಗಿ ಸೆಪ್ಟಂಬರ್ 8 ರಂದು ಆಯೋಜಿಸಿರುವ ಜನೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಜನತೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.
ಸಭೆಯಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್,ಕೋಲಾರದ ಮಾಜಿ ಶಾಸಕ ವರ್ತರೂಪ್ರಕಾಶ್,ಮುಖಂಡರಾದ ಕೇಶವಪ್ರಸಾದ್, ತಾಲೂಕು ಅಧ್ಯಕ್ಷ ಆಶೋಕ್ ರೆಡ್ಡಿ,ಪುರಸಭೆ ಸದಸ್ಯ ನಲ್ಲಪಲ್ಲಿರೆಡ್ಡೆಪ್ಪ,ರಾಮಾಂಜಿ, ರೋಣೂರುಚಂದ್ರಶೇಖರ್ ,ವೆಂಕಟಮುನಿಯಪ್ಪ,ಲಕ್ಷ್ಮಣಗೌಡ, ಎಸ್.ಬಿ.ಮುನಿವೆಂಕಟಪ್ಪ , ನಾಗದೇನಹಳ್ಳಿ ಚಂದ್ರು ಮುಂತಾದವರು ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26