ಶ್ರೀನಿವಾಸಪುರ:ಸಣ್ಣ ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರಗಳು ಕಾಳಜಿ ವಹಿಸಿ ಅಂತಹ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದರೆ ಸಮಾಜದಲ್ಲಿ ಮೂಲಭೂತವಾಗಿ ಕಡೆಗಣಿಸಲ್ಪಟ್ಟಿರುವ ಸಣ್ಣ ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ಹೇಳಿದರು.
ಅವರು ಪಟ್ಟಣದ ನಗರೇಶ್ವರ ದೇವಾಯಲದಲ್ಲಿ ಆಯೋದ್ಯ ನಗರದ ಶಿವಚಾರ್ಯ ನಗರ್ತ ವೈಶ್ಯ ಸಂಘದ ಕೇಂದ್ರ ಸಮಿತಿಗೆ ಶ್ರೀನಿವಾಸಪುರ ಕ್ಷೇತ್ರದಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಬಿ.ಶಿವಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಸಣ್ಣ ಪುಟ್ಟ ಸಮುದಾಯಗಳ ವೃತ್ತಿಯಾಗಿದ್ದ ಸಣ್ಣ ವ್ಯಾಪಾರ, ವೃತ್ತಿ ಕೌಶಲ್ಯದ ಬದುಕಿಗೆ ಕಾಲದ ಅಣತಿಯ ಜಾಗತಿಕರಣ ಮತ್ತು ಉದಾರಿಕರಣದ ಹೊಡೆತ ಬಿದ್ದಿದೆ ಆ ಸಮುದಾಯಗಳ ಕುಟುಂಬಗಳು ಇನ್ನಿಲ್ಲದ ಸಮಸ್ಯೆಗಳನ್ನು ಅನುಭವಿಸುತ್ತಿವೆ ಇಂತಹ ಸಮುದಾಯಗಳ ಅಭಿವೃದ್ದಿಗೆ ಸರ್ಕಾರಗಳು ವಿಶೇಷ ಕಾಳಜಿ ವಹಿಸಿ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು ಈ ಬಗ್ಗೆ ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಕೊಡುವಂತ ಅಭಿವೃದ್ಧಿ ಕುರಿತಾದ ವಾಗ್ದಾನಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ನಿರ್ದೇಶಕ ಗೀರಿಶ್, ಮುಖಂಡರಾದ ಕಪಾಲಿಮೋಹನ್,ರಾಜಶೇಖರ್,ಕಪಾಲಿಮಂಜು,ರಾಮಲಿಂಗಪ್ಪ,ಮಂಜುನಾಥ್, ಮಾಡಿ ವೀರಣ್ಣಮಂಜು,ನಗರ್ತ ಮಹಿಳಾ ಸಂಘದ ಮುಖಂಡರಾದ ಅಮುದಾ,ಅನಿತಾ ಆಯೋಧ್ಯ ನಗರದ ನಾಮಧಾರಿ ಸಂಘದ ಸಂಚಾಲಕ ಪಾಳ್ಯಶ್ರೀನಿವಾಸಶೆಟ್ಟಿ,ಪುಟ್ಟರಾಜು,ನಂಬಿಹಳ್ಳಿ ರಮೇಶ್,ಗುರುಮೂರ್ತಿ, ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



