ಶ್ರೀನಿವಾಸಪುರ: ನಾವು ಮಾಡಿರುವಂತ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಯಾರೆ ಸೇರ್ಪಡೆಯಾದರೂ ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ ಪಕ್ಷದಲ್ಲಿ ಅವರನ್ನು ಗೌರವಿತವಾಗಿ ನಡೆಸಿಕೊಳ್ಳುತ್ತೇವೆ ಎಂದು ಶಾಸಕ ರಮೇಶ್ ಕುಮಾರ್ ಹೇಳಿದರು ಅವರು ಇಂದು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಸೇರ್ಪಡೆಮಾಡಿಕೊಂಡು ಮಾತನಾಡಿದರು.
ಯಾವುದೇ ಅಧಿಕಾರದ ಆಮಿಷ ಷರತ್ತುಗಳನ್ನು ವಿಧಿಸದೆ ಪಕ್ಷಕ್ಕೆ ಬಂದಿರುವ ಅವರು ನಮ್ಮ ಜನಪರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಹೆಣ್ಣುಮಗಳು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಆತ್ಮಿಯವಾಗಿ ಸ್ವಾಗತ ಕೋರಿದ್ದೇನೆ ಆಕೆಗೆ ನಮ್ಮ ಪಕ್ಷದ ಕಾರ್ಯಕರ್ತರು ಹಿತೈಷಿಗಳು ಸಹಕಾರ ನೀಡುವ ಮೂಲಕ ಆಕೆಯನ್ನು ಬೆಂಬಲಿಸೋಣ ಎಂದರು.
ಪಟ್ಟಣದ ಅಭಿವೃದ್ದಿಗೆ ವಿಶೇಷವಾಗಿ ಚಿಂತನೆ ಮಾಡುತ್ತಿದ್ದೇನೆ ಪಟ್ಟಣದಲ್ಲಿ ರವಿಂದ್ರ ಕಲಾಕ್ಷೇತ್ರ ದಂತ ಸಾಂಸೃತಿಕ ಭವನ ನಿರ್ಮಿಸುವ ಉದ್ದೇಶ ಹೊಂದಿದ್ದು ಇದಕ್ಕಾಗಿ ಗೌರಿಬಿದನೂರಿನಲ್ಲಿರುವ ಕಲಾಭವನ ಮಾದರಿಯಲ್ಲಿ ವಿಶಾಲವಾದ ಭವನ ನಿರ್ಮಿಸುವುದಾಗಿ ಹೇಳಿದರು.
ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಮಾತನಾಡಿ ಶಾಸಕ ರಮೇಶ್ ಕುಮಾರ್ ಅವರ ಪ್ರಗತಿಪರ ಚಿಂತನೆ ಹಾಗು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದ ಅವರು ಪುರಸಭೆ ಅಧ್ಯಕ್ಷೆಯಾಗಿ ಒಂದುವರೆ ವರ್ಷದಿಂದ ಉತ್ತಮ ಆಡಳಿತ ನೀಡುತ್ತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಯಾವುದೇ ಬ್ರಷ್ಟಾಚಾರದ ಆರೋಪ ನನ್ನ ಮೇಲೆ ಇಲ್ಲ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ತಮ್ಮ ರಾಜಕೀಯ ಪ್ರತಿಷ್ಠೆಗೆ ನಮ್ಮನ್ನು ಬಳಸಿಕೊಂಡರು ನಂತರ ನನ್ನನ್ನು ಅಧಿಕಾರದಿಂದ ಇಳಿಸುವಂತ ಕಾರ್ಯತಂತ್ರ ರೂಪಿಸಿ ನನ್ನ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಹೊರೆಸುತ್ತಿದ್ದಾರೆ ಎಂದು ದೂರಿದ ಅವರು ಮಾಜಿ ಶಾಸಕರ ವರ್ತನೆಯಿಂದ ಮಾನಸಿಕವಾಗಿ ನೊಂದು ಜೆಡಿಎಸ್ ತೊರೆದಿರುವುದಾಗಿ ಹೇಳಿದರು.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Friday, April 24



