ಶ್ರೀನಿವಾಸಪುರ:-ದೇವಾಲಯದಲ್ಲಿ ಪ್ರಸಾದ ಸೇವಿಸಿದ ಗ್ರಾಮದ ಎಳೆಯ ಮಕ್ಕಳು ವಯಸ್ಕರು ಸುಮಾರು 100 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದು ಇದರಲ್ಲಿ 19 ಮಕ್ಕಳು 10 ಮಂದಿ ಹಿರಿಯರು ಚಿಕಿತ್ಸೆ ಪಡೆಯಲು ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆ ದಾಖಲಾಗಿದ್ದಾರೆ.ಉಳಿದವರು ಶ್ರೀನಿವಾಸಪುರದ ಖಾಸಗಿ ಆಸ್ಪತ್ರೆ ಇನ್ನೂ ಕೆಲವರು ಕೋಲಾರದ ನರ್ಸಿಂಗ್ ಹೋಂಗಳಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿರುತ್ತಾರೆ. ಇನ್ನೂಳಿದವರು ಚಿಕಿತ್ಸೆ ಪಡೆದುಕೊಂಡು ಊರಿಗೆ ವಾಪಸ್ಸು ಹೋಗಿರುವುದಾಗಿ ಹೇಳಲಾಗಿದೆ.ಅಸ್ವಸ್ಥರಾದವರು ಪ್ರಾಣಪಯದಿಂದ ಪಾರಾಗಿರುವುದಾಗಿ ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ
ತಾಲೂಕಿನ ಯಲ್ದೂರು ಹೋಬಳಿ ಲಕ್ಷ್ಮೀಸಾಗರ ಪಂಚಾಯಿತಿಯ ಬೀರಗಾನಹಳ್ಳಿಯಲ್ಲಿನ ಗಂಗಮ್ಮ ದೇವಾಲಯದಲ್ಲಿ ಗ್ರಾಮಸ್ಥರು ಕೂಡಿ ಹೊಸ ವರ್ಷ ಆಚರಣೆ ಮಾಡಿರುತ್ತಾರೆ ಈ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ವಿಶೇಷ ಪೂಜೆ ಇತರೆ ಧಾರ್ಮಿಕ ಚಟುವಟಿಕೆಗಳು ಹಮ್ಮಿಕೊಂಡು ಇದರ ಸಂಭ್ರಮದಲ್ಲಿ ಸಂಜೆ ಗ್ರಾಮದ ಭಕ್ತರೊಬ್ಬರು ಮಾಡಿಸಿದ್ದ ಚಿತ್ರಾನ್ನ ಹಾಗೂ ಕೇಸರಿಬಾತ್ ಪ್ರಸಾದವನ್ನು ಹಂಚಲಾಗಿದೆ ಇದನ್ನು ಸೇವಿಸಿದ್ದ ಭಕ್ತರು, ತಡ ಸಂಜೆ ಫುಡ್ ಪಾಯಿಸನ್ ರಿಯಾಕ್ಷನ್ ಆಗಿದ್ದು ಒಬ್ಬೊಬ್ಬರಾಗಿ ಬೇದಿ ವಾಂತಿ ಮಾಡಿಕೊಳ್ಳಲು ಆರಂಭಿಸಿ ನಲುಗಿ ಹೋಗಿ ಆಸ್ಪತ್ರೆ ದಾರಿ ಹಿಡಿದಿರುತ್ತಾರೆ.
ಕರೆ ಸ್ವೀಕರಿಸದ ಆರೋಗ್ಯಾಧಿಕಾರಿಗಳು!
ಗ್ರಾಮಸ್ಥರ ಆರೋಗ್ಯ ಮಾಹಿತಿ ಪಡೆಯಲು vcsnewz.com ವರದಿಗಾರ ತಾಲೂಕು ಆರೋಗ್ಯಾಧಿಕಾರಿಗಳ ಮೊಬೈಲ್ ಪೋನಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ ಇದು ತಾಲೂಕು ಆರೋಗ್ಯಾಧಿಕಾರಿಗಳ ಸಾರ್ವಜನಿಕ ಸ್ಪಂದನೆ!
ಇನ್ಸಪೇಕ್ಟರ್ ರವಿಕುಮಾರ್ ರಾತ್ರಿ 11 ಗಂಟೆಯಾದರೂ ಗ್ರಾಮದಲ್ಲೆ ಮೊಕ್ಕಾಂ ಹೂಡಿದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26